ಸಾಂದರ್ಭಿಕ ಚಿತ್ರ 
ದೇಶ

ನಕ್ಸಲ್ ಪೀಡಿತ ಬಸ್ತಾರ್‌ನಲ್ಲಿ CRPF ನಿಂದ 10 ಸಾವಿರಕ್ಕೂ ಹೆಚ್ಚು ರೇಡಿಯೋ ಸೆಟ್‌ ವಿತರಣೆ; ಯಾಕೆ ಗೊತ್ತಾ?

ಈ ಪ್ರದೇಶದಲ್ಲಿ ಹಿಂಸಾತ್ಮಕ ಎಡಪಂಥೀಯ ಉಗ್ರವಾದ(ಎಲ್‌ಡಬ್ಲ್ಯೂಇ) ಕಡಿಮೆಯಾಗುತ್ತಿದೆ.

ನವದೆಹಲಿ/ಬಿಜಾಪುರ: ಛತ್ತೀಸ್‌ಗಢದ ಬಸ್ತಾರ್‌ನ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಚಿಂತನೆಯನ್ನು ಹರಡಲು ಮತ್ತು ಸ್ಥಳೀಯರನ್ನು ಮಾವೋವಾದಿ ಸಿದ್ಧಾಂತದಿಂದ ದೂರವಿಡಲು ವಿಶೇಷ ಸಾರ್ವಜನಿಕ ಅಭಿಯಾನದ ಭಾಗವಾಗಿ ಸಿಆರ್‌ಪಿಎಫ್ 10,000 ಕ್ಕೂ ಹೆಚ್ಚು ರೇಡಿಯೋ ಸೆಟ್‌ಗಳನ್ನು ವಿತರಿಸಿದೆ. ಈ ಪ್ರದೇಶದಲ್ಲಿ ಹಿಂಸಾತ್ಮಕ ಎಡಪಂಥೀಯ ಉಗ್ರವಾದ(ಎಲ್‌ಡಬ್ಲ್ಯೂಇ) ಕಡಿಮೆಯಾಗುತ್ತಿದೆ.

ಗ್ರಾಮಗಳಲ್ಲಿ ನೂರಾರು ಸಣ್ಣ ಮತ್ತು ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಿದ ನಂತರ ಅರೆಸೇನಾಪಡೆ ಇತ್ತೀಚೆಗೆ ಸುಮಾರು ನಾಲ್ಕು ತಿಂಗಳ ಕಾಲ ಈ ಅಭಿಯಾನ ನಡೆಸಿದೆ.

ಬಸ್ತಾರ್ ಪ್ರದೇಶದ ಏಳು ಜಿಲ್ಲೆಗಳಿಗೆ ವಿಶೇಷ ನಾಗರಿಕ ಕ್ರಿಯಾ ಕಾರ್ಯಕ್ರಮವನ್ನು ಈ ವರ್ಷದ ಆರಂಭದಲ್ಲಿ ಗೃಹ ಸಚಿವಾಲಯ(ಎಂಎಚ್‌ಎ) 1.62 ಕೋಟಿ ರೂ.ಗಳ ಬಜೆಟ್ ಹಂಚಿಕೆಯೊಂದಿಗೆ ಪ್ರಾರಂಭಿಸಿತು ಎಂದು ಹಿರಿಯ ಅಧಿಕಾರಿಯೊಬ್ಬರು ದೆಹಲಿಯಲ್ಲಿ ಪಿಟಿಐಗೆ ತಿಳಿಸಿದ್ದಾರೆ.

ಬಿಜಾಪುರ ಜಿಲ್ಲೆಯಲ್ಲಿರುವ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್)ಯ ಕಮಾಂಡರ್, ಈ ಪ್ರದೇಶದ ದೂರದ ಮತ್ತು ಒಳ ಪ್ರದೇಶಗಳಲ್ಲಿ ನಿಯೋಜಿಸಲಾದ ಅರೆಸೇನಾಪಡೆಯ 180 ತುಕಡಿಗಳು ಒಟ್ಟು 10,800 ರೇಡಿಯೋ ಸೆಟ್‌ಗಳನ್ನು ವಿತರಿಸಿವೆ ಎಂದು ಅವರು ಹೇಳಿದ್ದಾರೆ.

ಈ ವಿಶೇಷ ಕಾರ್ಯಕ್ರಮವು ಸುಮಾರು 54,000 ವ್ಯಕ್ತಿಗಳನ್ನು ಸಂಪರ್ಕಿಸುವ ಗುರಿ ಹೊಂದಿದೆ. ಪ್ರತಿ ಕುಟುಂಬವನ್ನು ಐದು ಸದಸ್ಯರ ಘಟಕವೆಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.

"ಸ್ಥಳೀಯರು, ಬುಡಕಟ್ಟು ಜನಾಂಗದವರು ಮತ್ತು ಗ್ರಾಮಸ್ಥರನ್ನು ದೇಶದ ಮುಖ್ಯವಾಹಿನಿಯೊಂದಿಗೆ ಸಂಪರ್ಕಿಸುವುದು ಈ ಮೆಗಾ ರೇಡಿಯೋ ವಿತರಣಾ ಅಭಿಯಾನದ ಉದ್ದೇಶವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆ; ಭೂಕುಸಿತದಲ್ಲಿ ಮಕ್ಕಳು ಸೇರಿ ಕನಿಷ್ಠ 20 ಮಂದಿ ಸಾವು

ರಿಷಬ್ ಶೆಟ್ಟಿ ದೃಶ್ಯಕಾವ್ಯಕ್ಕೆ ಬಹುಪರಾಕ್: 4ನೇ ದಿನಕ್ಕೆ ಜಗತ್ತಿನಾದ್ಯಂತ 300 ಕೋಟಿ ಕಲೆಕ್ಷನ್ ದಾಖಲೆ ಬರೆದ 'ಕಾಂತಾರ'!

World cup 2025: ರಿಚಾ ಘೋಷ್ ಸ್ಫೋಟಕ ಬ್ಯಾಟಿಂಗ್: Pak'ಗೆ 248 ರನ್ ಟಾರ್ಗೆಟ್ ನೀಡಿದ ಭಾರತ!

India-Pakistan ಪಂದ್ಯದ ವೇಳೆ ಹೈಡ್ರಾಮಾ: ಮೊದಲು ನಾಟೌಟ್ ನಂತರ Out ಘೋಷಣೆ; 4ನೇ ಅಂಪೈರ್ ಜೊತೆ Pak ನಾಯಕಿ ವಾಗ್ವಾದ, Video

22 ವರ್ಷಗಳ ನಂತರ ಬಿಹಾರ ಮತದಾರರ ಪಟ್ಟಿ 'ಶುದ್ಧೀಕರಿಸಲಾಗಿದೆ'; ದೇಶಾದ್ಯಂತ ವಿಸ್ತರಣೆ: CEC

SCROLL FOR NEXT