ನಡು ಬೀದಿಯಲ್ಲಿ ಬಾಲಕಿಗೆ ಕಿರುಕುಳ 
ದೇಶ

Meerut: ನಡು ಬೀದಿಯಲ್ಲಿ ಬಾಲಕಿ ಕುತ್ತಿಗೆ ಹಿಡಿದು ಕಿರುಕುಳ; ಮುಂದೇನಾಯ್ತು ಈ Video ನೋಡಿ...

ಜಿಲ್ಲೆಯ ಕಿಥೌರ್ ಪ್ರದೇಶದಲ್ಲಿ ಅಕ್ಟೋಬರ್ 3 ರಂದು ನಡೆದ ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ತದನಂತರ ಪೊಲೀಸರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಮೀರತ್: ಉತ್ತರ ಪ್ರದೇಶದ ಮೀರತ್ ನಲ್ಲಿ ಯುವಕನೊಬ್ಬ ನಡು ಬೀದಿಯಲ್ಲಿ ಬಾಲಕಿಯ ಕುತ್ತಿಗೆ ಹಿಡಿದು ಕಿರುಕುಳ ನೀಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಜಿಲ್ಲೆಯ ಕಿಥೌರ್ ಪ್ರದೇಶದಲ್ಲಿ ಅಕ್ಟೋಬರ್ 3 ರಂದು ನಡೆದ ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ತದನಂತರ ಪೊಲೀಸರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದರ ಆಧಾರದ ಪೊಲೀಸರು ಪೊಲೀಸರು ಆರೋಪಿ ಜಾನು ಅಲಿಯಾಸ್ ಜಾನೆ ಆಲಂನನ್ನು ಬಂಧಿಸಿದ್ದಾರೆ. ಈತ ಜಗಳದ ನಂತರ 14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಗಾಜಿಯಾಬಾದ್‌ನಿಂದ ತನ್ನ ಅಜ್ಜಿಯ ಗ್ರಾಮಕ್ಕೆ ಭೇಟಿ ನೀಡಲು ಬಂದಿದ್ದ ಬಾಲಕಿಯ ವಿಡಿಯೋವನ್ನು ಆರೋಪಿ ರಹಸ್ಯವಾಗಿ ರೆಕಾರ್ಡ್ ಮಾಡಿ ಅದನ್ನು ಗ್ರಾಮದ ಇತರರಿಗೆ ಹಂಚಿದ್ದ ಎನ್ನಲಾಗಿದೆ. ಆತ ಎದುರಾದಾಗ ಫೋನ್ ಕೊಡುವಂತೆ ಆಕೆ ಒತ್ತಾಯಿಸಿದ್ದಾಳೆ. ಆಗ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪಿ, ಕುತ್ತಿಗೆ ಹಿಡಿದು ಹಲ್ಲೆಗೆ ಮುಂದಾಗಿದ್ದಾನೆ.

ಆಕೆಯ ಆಳು ಕೇಳಿ ಸ್ಥಳೀಯ ಜನರು ಸ್ಥಳಕ್ಕೆ ಧಾವಿಸಿದ್ದು, ನಂತರ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಸಿಸಿಟಿವಿಯಲ್ಲಿ ಹಲ್ಲೆ ದೃಶ್ಯಗಳು ದಾಖಲಾಗಿತ್ತು. ತದನಂತರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪೋಕ್ಸೊ, ಐಪಿಸಿಯ ಇತರ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂಗ್ರೆಸ್‌ನಲ್ಲಿ ಅವರ ಶಾಸಕರನ್ನ ಅವರೇ ಖರೀದಿ ಮಾಡುತ್ತಿದ್ದಾರೆ; ಒಬ್ಬರಿಗೆ 100 ಕೋಟಿ ರೂ ಆಫರ್‌; ಕಾರು, ಫ್ಲ್ಯಾಟು ಗಿಫ್ಟು!

ಹಿರಿಯ ನಟ ಧರ್ಮೇಂದ್ರ, ಬಾಲಿವುಡ್ ನ 'ಹೀ-ಮ್ಯಾನ್' ಇನ್ನಿಲ್ಲ

ಗುಜರಾತ್‌: ಮತ್ತೊಬ್ಬ ಬಿಎಲ್‌ಒ ಶವವಾಗಿ ಪತ್ತೆ; ಬಾತ್ ರೂಮ್​​​​ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವು

Bengaluru ATM Van Robbery: ಮತ್ತಿಬ್ಬರು ಆರೋಪಿಗಳ ಬಂಧನ, ಬಂಧಿತರ ಸಂಖ್ಯೆ 9ಕ್ಕೇರಿಕೆ!

ಶಾಸಕರ ಖರೀದಿ ಹಾಗೂ ಕುದುರೆ ವ್ಯಾಪಾರ ಬಿಜೆಪಿ ಸಂಸ್ಕೃತಿ, CM ಮಾತು ವೇದ ವಾಕ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

SCROLL FOR NEXT