ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ 
ದೇಶ

Bihar elections 2025: 36 ಸ್ಥಾನಗಳಿಗೆ ಚಿರಾಗ್ ಪಾಸ್ವಾನ್ ಬೇಡಿಕೆ; 22 ಸ್ಥಾನ ನೀಡಲು ಬಿಜೆಪಿ ಸಿದ್ಧ!

ಚಿರಾಗ್ ನವದೆಹಲಿಗೆ ತೆರಳಿರುವುದರಿಂದ ಸಭೆಗೆ ಹಾಜರಾಗುತ್ತಿಲ್ಲವಾದರೂ, ಜಮುಯಿಯ ಎಲ್‌ಜೆಪಿ (ಆರ್‌ವಿ) ಸಂಸದ ಅರುಣ್ ಭಾರ್ತಿ ಅವರು ಸೀಟು ಹಂಚಿಕೆ ಕುರಿತ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.

ಪಾಟ್ನಾ: ಬಿಹಾರದಲ್ಲಿ ವಿಧಾನಸಭಾ ಚುನಾವಣಾ ಪ್ರಕ್ರಿಯೆಯು ಶುಕ್ರವಾರ ಮೊದಲ ಹಂತದ ಅಧಿಸೂಚನೆ ಹೊರಡಿಸುವುದರೊಂದಿಗೆ ಔಪಚಾರಿಕವಾಗಿ ಪ್ರಾರಂಭವಾಗಿದ್ದರೂ, ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಮತ್ತು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಪಾಟ್ನಾದಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸುತ್ತಿದ್ದು, ಸೀಟು ಹಂಚಿಕೆ ಕುರಿತು ಚರ್ಚಿಸುತ್ತಿದ್ದಾರೆ.

ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಅಧಿಕೃತ ನಿವಾಸ 1 ಆನ್ ಮಾರ್ಗದಲ್ಲಿ ಹಿರಿಯ ಜೆಡಿಯು ನಾಯಕರ ಸಭೆ ನಡೆಸಿದ್ದಾರೆ. ಈಮಧ್ಯೆ, ಕೇಂದ್ರ ಸಚಿವ ಮತ್ತು ಎಲ್‌ಜೆಪಿ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು ರಾಜ್ಯ ಕಚೇರಿಯಲ್ಲಿ ತಮ್ಮ ಪಕ್ಷದ ಕೋರ್ ತಂಡದ ತುರ್ತು ಸಭೆಯನ್ನು ಕರೆದು ಸೀಟು ಹಂಚಿಕೆ ಮತ್ತು ಚುನಾವಣಾ ಸಿದ್ಧತೆಯ ಕುರಿತು ಚರ್ಚಿಸಲಿದ್ದಾರೆ.

ಚಿರಾಗ್ ನವದೆಹಲಿಗೆ ತೆರಳಿರುವುದರಿಂದ ಸಭೆಗೆ ಹಾಜರಾಗುತ್ತಿಲ್ಲವಾದರೂ, ಜಮುಯಿಯ ಎಲ್‌ಜೆಪಿ (ಆರ್‌ವಿ) ಸಂಸದ ಅರುಣ್ ಭಾರ್ತಿ ಅವರು ಸೀಟು ಹಂಚಿಕೆ ಕುರಿತ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯ ಉಸ್ತುವಾರಿಯಾಗಿಯೂ ಭಾರ್ತಿ ಅವರನ್ನು ನೇಮಿಸಲಾಗಿದೆ.

ಚಿರಾಗ್ 36 ಸ್ಥಾನಗಳಿಗೆ ಬೇಡಿಕೆ ಇಡುತ್ತಿದ್ದಾರೆ. ಆದರೆ, ಬಿಜೆಪಿ ಕೇವಲ 22 ಸ್ಥಾನಗಳನ್ನು ನೀಡಲು ಸಿದ್ಧವಾಗಿದೆ ಎಂದು ಮೂಲಗಳು ಹೇಳಿವೆ. ನವದೆಹಲಿಗೆ ತೆರಳುವ ಮೊದಲು, ಪಕ್ಷದ ಚುನಾವಣಾ ತಂತ್ರಗಳನ್ನು ಸಭೆಯಲ್ಲಿ ಚರ್ಚಿಸಲಾಗುವುದು ಮತ್ತು ಕೇಂದ್ರ ಸಂಸದೀಯ ಮಂಡಳಿ ಸಭೆಯ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಚಿರಾಗ್ ಹೇಳಿದ್ದಾರೆ.

ಈಮಧ್ಯೆ, ಜೆಡಿಯು ತನ್ನ ಹಾಲಿ ಶಾಸಕರನ್ನು ಹೊಂದಿರುವ ಹಲವಾರು ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಬಗ್ಗೆ ದೃಢ ನಿಲುವನ್ನು ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಚಿರಾಗ್ ಪಾಸ್ವಾನ್ ಅವರ ಪಕ್ಷವು ವೈಶಾಲಿಯ ಮನ್ಹಾರ್, ಬೇಗುಸರಾಯ್‌ನ ಮತಿಹಾನಿ ಮತ್ತು ಜಮುಯಿಯಲ್ಲಿ ಚಕೈ ಮುಂತಾದ ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದೆ ಎಂದು ವರದಿಯಾಗಿದೆ. ಇವುಗಳನ್ನು ಸದ್ಯ ಜೆಡಿಯು ಶಾಸಕರು ಪ್ರತಿನಿಧಿಸುತ್ತಿದ್ದಾರೆ.

ಗುರುವಾರ ಪಾಟ್ನಾದಲ್ಲಿರುವ ತನ್ನ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಪಕ್ಷದ ಚುನಾವಣಾ ಕಾರ್ಯತಂತ್ರವನ್ನು ನಿರ್ಧರಿಸಲಾಗುವುದು ಎಂದು ಲೋಕ ಜನಶಕ್ತಿ ಪಕ್ಷದ (ಆರ್‌ವಿ) ಸಂಸದ ಅರುಣ್ ಭಾರ್ತಿ ವರದಿಗಾರರಿಗೆ ತಿಳಿಸಿದ್ದಾರೆ.

ಸೀಟು ಹಂಚಿಕೆ ಮಾತುಕತೆಯ ನಡುವೆ, ಎಚ್‌ಎಎಂ ನಾಯಕ ಬಿಕೆ ಸಿಂಗ್ ಅವರು ಅಕ್ಟೋಬರ್ 13 ರಂದು ಸಮಷ್ಟಿಪುರ ಜಿಲ್ಲೆಯ ಮೋರ್ವಾ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸಂತೋಷ್ ಮಾಂಝಿ ಅವರ ಬೆಂಬಲವನ್ನು ಹೊಂದಿದ್ದಾರೆ. ಜೆಡಿಯು ಮಾಜಿ ನಾಯಕ ವಿದ್ಯಾಸಾಗರ್ ಸಿಂಗ್ ನಿಶಾದ್ ವಿರುದ್ಧ ಸಿಂಗ್ ಗಂಭೀರ ಆರೋಪಗಳನ್ನು ಮಾಡಿದ್ದು, ಅಕ್ರಮ ಆಸ್ತಿಗಳನ್ನು ಗಳಿಸಿದ್ದಾರೆ ಎಂದಿದ್ದಾರೆ.

ಈಮಧ್ಯೆ, ವಿರೋಧ ಪಕ್ಷದ ಇಂಡಿಯಾ ಬಣದ ಪ್ರಮುಖ ಮಿತ್ರ ಪಕ್ಷವಾದ ಕಾಂಗ್ರೆಸ್, ಮುಂಬರುವ ವಿಧಾನಸಭಾ ಚುನಾವಣೆಗೆ 25 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ. ಈ ಸ್ಥಾನಗಳನ್ನು ಸಾಂಪ್ರದಾಯಿಕ ಭದ್ರಕೋಟೆಗಳೆಂದು ಪರಿಗಣಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬುಧವಾರ ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಅನುಮೋದಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂದು ಸಂಜೆ ರಷ್ಯಾ ಅಧ್ಯಕ್ಷ Vladimir Putin ಭಾರತಕ್ಕೆ ಆಗಮನ: ರಾತ್ರಿ ಪ್ರಧಾನಿ ಮೋದಿಯಿಂದ ಖಾಸಗಿ ಔತಣಕೂಟ

ಬೆಳಗಾವಿ ಚಳಿಗಾಲ ಅಧಿವೇಶನ: ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ತಂತ್ರ, ತಿರುಗೇಟು ನೀಡಲು ಸಿಎಂ ಪ್ರತಿತಂತ್ರ

IPL ಸೇರಿ ಎಲ್ಲಾ ಮಾದರಿಯ ಕ್ರಿಕೆಟ್​ಗೆ ಮೋಹಿತ್ ಶರ್ಮಾ ನಿವೃತ್ತಿ ಘೋಷಣೆ

ಶಿವಗಿರಿ ಶಾಖಾ ಮಠ ಸ್ಥಾಪನೆಗೆ 5 ಎಕರೆ ಜಾಗ; ಸಿಎಂ ಸಿದ್ದರಾಮಯ್ಯ

IndiGo: ಬರೊಬ್ಬರಿ 200 ವಿಮಾನಗಳ ಹಾರಾಟ ರದ್ದು, 'ಮುಚ್ಕೊಂಡ್ ಮನೆಗೆ ಹೋಗಿ..' 'crew shortage'ಗೆ ಪ್ರಯಾಣಿಕರ ಆಕ್ರೋಶ!

SCROLL FOR NEXT