ನಾಡಿಯಾ: ಗಡಿ ಭದ್ರತಾ ಪಡೆ ಯೋಧರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಭಾರತ-ಬಾಂಗ್ಲಾದೇಶ ಗಡಿಯ ಬಳಿ ಕಳ್ಳಸಾಗಾಣಿಕೆದಾರನನ್ನು ಬಂಧಿಸಿದ್ದು, ಆತನ ಬಳಿಯಿದ್ದ ರೂ. 2.82 ಕೋಟಿ ಮೌಲ್ಯದ 20 ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಹೊರಂಡಿಪುರ ಬಿಒಪಿಯಲ್ಲಿ ನಿಯೋಜಿಸಲಾಗಿದ್ದ ಬಿಎಸ್‌ಎಫ್ 32 ಬೆಟಾಲಿಯನ್ ಗಡಿಗೆ ಸಮೀಪವಿರುವ ಮುಸ್ಲಿಂಪಾರಾ ಗ್ರಾಮದ ಭಾರತೀಯ ಪ್ರಜೆಯೊಬ್ಬರು ಬಾಂಗ್ಲಾದೇಶದಿಂದ ಹೊರಂಡಿಪುರ ಮೂಲಕ ಅಕ್ರಮವಾಗಿ ತಂದ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯೋಜಿಸುತ್ತಿದ್ದಾರೆ ಎಂದು ಗುಪ್ತಚರ ಮಾಹಿತಿ ಲಭಿಸಿದೆ.
ತದನಂತರ ಕರ್ತವ್ಯದಲ್ಲಿದ್ದ ಯೋಧರಿಗೆ ಈ ಮಾಹಿತಿ ನೀಡಲಾಗಿದ್ದು, ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ದಟ್ಟವಾದ ಬಿದಿರಿನ ಕಾಡಿನ ಹಿಂದೆ ಒಬ್ಬ ವ್ಯಕ್ತಿ ಹೋಗುತ್ತಿರುವುದನ್ನು ನೋಡಿದ ತಕ್ಷಣವೇ ಆತನನ್ನು ಸುತ್ತುವರೆದು ಬಂಧಿಸಲಾಯಿತು ಎಂದು ಬಿಎಸ್ ಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಬಂಧಿತ ವ್ಯಕ್ತಿಯಿಂದ ಪ್ಲಾಸ್ಟಿಕ್ ಪ್ಯಾಕೆಟ್ ವಶಪಡಿಸಿಕೊಂಡಿದ್ದು, ಅದನ್ನು ತೆರೆದಾಗ ಸುಮಾರು ರೂ. 2.82 ಕೋಟಿ ಮೌಲ್ಯದ 20 ಚಿನ್ನದ ಬಿಸ್ಕತ್ತುಗಳು ಇರುವುದು ಪತ್ತೆಯಾಗಿದೆ ಎಂದು ಗಡಿ ಭದ್ರತಾ ಪಡೆ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.