ನವದೆಹಲಿ: ಉಕ್ರೇನಿಯನ್ ಕಂಟೆಂಟ್ ಕ್ರಿಯೇಟರ್ ವಿಕ್ಟೋರಿಯಾ ಚಕ್ರವರ್ತಿ ಅವರು ಭಾರತದಲ್ಲಿ ಡ್ರೈವಿಂಗ್ ಮಾಡುವಾಗ ನೋಡಿದ ಐದು ಸಂಗತಿಗಳನ್ನು ಹಂಚಿಕೊಂಡ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದಾರೆ.
ಎಂಟು ವರ್ಷಗಳಿಗೂ ಹೆಚ್ಚು ಕಾಲ ದೇಶದಲ್ಲಿ ವಾಸಿಸುತ್ತಿರುವ ವಿಕ್ಟೋರಿಯಾ ಚಕ್ರವರ್ತಿ ತನ್ನ ಅನುಭವಗಳನ್ನು ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ ವಿವರಿಸಿದ್ದಾರೆ. ಉಕ್ರೇನಿಯನ್ ಮಹಿಳೆಯಾಗಿ ಭಾರತದಲ್ಲಿ 8 ವರ್ಷ ಡ್ರೈವಿಂಗ್ ಮಾಡುವಾಗ ಇವುಗಳನ್ನು ನೋಡಿರುವುದಾಗಿ ಅವರು ಬರೆದುಕೊಂಡಿದ್ದಾರೆ.
ಭಾರತದಲ್ಲಿ ಡ್ರೈವಿಂಗ್ ಕಲಿಯಲು ಸಾಕಷ್ಟು ಸಮಯ ತೆಗೆದುಕೊಂಡೆ. ಆದರೆ 'ಅಪರಿಚಿತರ ದಯೆಯಿಂದ ಅದನ್ನು ಪಡೆಯಲು ಸಾಧ್ಯವಾಯಿತು ಎಂದಿದ್ದಾರೆ. ಮೊದಲಿಗೆ ಡ್ರೈವಿಂಗ್ ಮಾಡಲು ಬಂದಾಗ ಭಯವಾಗಿತ್ತು.
ಪಾರ್ಕಿಂಗ್ ಮಾಡುವಾಗ ಜನರು ನೆರವಾದರು. ಹೌದು, ವಿಮಾನವನ್ನು ಲ್ಯಾಂಡ್ ಮಾಡುವಂತೆ ಸಂಪೂರ್ಣ ಅಪರಿಚಿತರು ನಿಂತು ನನಗೆ ಮಾರ್ಗದರ್ಶನ ನೀಡಿದರು. ಅವರಿಗೆ ಧನ್ಯವಾದಗಳು ಎಂದಿದ್ದಾರೆ.
ಭಾರತದಲ್ಲಿ ಆಕೆ ಗಮನಿಸಿದ ಐದು ಸಂಗತಿಗಳು ಇಲ್ಲಿವೆ:
ಟ್ರಾಫಿಕ್ ಸಿಕ್ಕಾಪಟ್ಟೆ ಇದೆ. ಆದರೆ ಹೇಗೂ ನಿರೀಕ್ಷಿಸುವುದಕ್ಕಿಂತ ಕಡಿಮೆ ಅಪಘಾತಗಳಾಗುತ್ತವೆ.
ಹಾರ್ನ್ ಮಾಡುವುದು ನಿಧಾನವಾಗಿ ಅರ್ಥಮಾಡಿಕೊಳ್ಳಲು ಕಲಿಯುವ ಸಂಪೂರ್ಣ ಭಾಷೆಯಾಗಿದೆ.
ಮೊಬೈಕ್ ಚಾಲಕರು ಏನನ್ನೂ ಮಾಡದಿದ್ದರೂ ಯಾವಾಗಲೂ ಪೊಲೀಸರಿಂದ ನಿಂದಿಸಲ್ಪಡುತ್ತಾರೆ.
"ಫಾಸ್ಟ್ & ಫ್ಯೂರಿಯಸ್ ಕೋಲ್ಕತ್ತಾ ಡ್ರಿಫ್ಟ್ ಗಾಗಿ (ಅತಿವೇಗದ ಚಾಲನೆ) ಆಡಿಷನ್ ಮಾಡುತ್ತಿರುವಂತೆ ರಿಕ್ಷಾಗಳು ಓಡಿಸುತ್ತವೆ.
ಬಸ್ಸುಗಳು ಸುಮ್ಮನೆ ದೂರ ಇರುತ್ತವೆ. ನನ್ನನ್ನು ನಂಬು ಎಂಬಂತೆ ಪೋಸ್ ನೀಡುತ್ತಿರುತ್ತವೆ.