ಲಾಲು ಪ್ರಸಾದ್ ಯಾದವ್ - ತೇಜಸ್ವಿ ಯಾದವ್ 
ದೇಶ

RJD ಟಿಕೆಟ್ ಹಂಚಿದ ಲಾಲು; ಅಪ್ಪನ ನಿರ್ಧಾರಕ್ಕೆ ತೇಜಸ್ವಿ ಯಾದವ್ ಬ್ರೇಕ್!

ಬುಧವಾರ ರಾಘೋಪುರದಿಂದ ತೇಜಸ್ವಿ ಯಾದವ್ ಅವರೇ ನಾಮಪತ್ರ ಸಲ್ಲಿಸುವ ಸಾಧ್ಯತೆ ಇರುವುದರಿಂದ ಅಭ್ಯರ್ಥಿಗಳ ಅಧಿಕೃತ ಘೋಷಣೆಯನ್ನು "ಇಂದು ಸಂಜೆಯೊಳಗೆ" ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಪಾಟ್ನಾ: ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರು ಮಂಗಳವಾರ ಬೆಳಗ್ಗೆಯವರೆಗೂ ಅನೇಕ ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟ್‌ಗಳನ್ನು ನೀಡಿದ್ದರು. ಆದರೆ ಅವರ ಮಗ ಮತ್ತು ಉತ್ತರಾಧಿಕಾರಿ ತೇಜಸ್ವಿ ಯಾದವ್ ಅವರು ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳ ನೇತೃತ್ವದ ಇಂಡಿಯಾ ಬಣ ಸೀಟು ಹಂಚಿಕೆ ಸೂತ್ರವನ್ನು ಇನ್ನೂ ಔಪಚಾರಿಕವಾಗಿ ಘೋಷಿಸಿಲ್ಲ ಎಂದು ಹೇಳುವ ಮೂಲಕ ಅಪ್ಪನ ನಿರ್ಧಾರಕ್ಕೆ ಬ್ರೇಕ್ ಹಾಕಿದ್ದಾರೆ.

ಲಾಲು ಪ್ರಸಾದ ಯಾದವ್ ಅವರು ಸೋಮವಾರ ಸಂಜೆ ತಮ್ಮ ಪತ್ನಿ ಮತ್ತು ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರೊಂದಿಗೆ ದೆಹಲಿಯಿಂದ ಪಾಟ್ನಾದ 10 ಸರ್ಕ್ಯುಲರ್ ರಸ್ತೆಯಲ್ಲಿರುವ ಮನೆಗೆ ಆಗಮಿಸುತ್ತಿದ್ದಂತೆ ಕಾಲ್ತುಳಿತದಂತಹ ದೃಶ್ಯ ಕಂಡುಬಂದಿತು.

ಹಲವು ಆಕಾಂಕ್ಷಿಗಳು ಪಕ್ಷದಿಂದ ಫೋನ್ ಕರೆ ಸ್ವೀಕರಿಸಿದ ನಂತರ ತಕ್ಷಣ ಲಾಲು ಮನೆಗೆ ಆಗಮಿಸಿದ್ದರು ಮತ್ತು ಕೆಲವು ನಿಮಿಷಗಳ ನಂತರ ಕೈಯಲ್ಲಿ ಪಕ್ಷದ ಚಿಹ್ನೆ ಮತ್ತು ಮುಖದಲ್ಲಿ ವಿಶಾಲವಾದ ನಗುವಿನೊಂದಿಗೆ ಹೊರಬಂದರು.

ಆದಾಗ್ಯೂ, ಅವರ ಪೋಷಕರು ಬಂದ ಕೆಲವು ಗಂಟೆಗಳ ನಂತರ ದೆಹಲಿಯಿಂದ ಹಿಂತಿರುಗಿದ ತೇಜಸ್ವಿ ಯಾದವ್, ಈ ಬೆಳವಣಿಗೆಯಿಂದ ತೀವ್ರ ಅಸಮಾಧಾನಗೊಂಡಿದ್ದರು ಎಂದು ಹೇಳಲಾಗಿದೆ.

ಆರ್‌ಜೆಡಿ ಮೂಲಗಳ ಪ್ರಕಾರ, ತಂದೆಯ ಟಿಕೆಟ್ ಹಂಚಿಕೆ ನಿರ್ಧಾರದಿಂದ ಇಂಡಿಯಾ ಮೈತ್ರಿಕೂಟದ ಮಿತ್ರ ಪಕ್ಷಗಳಿಗೆ ಮುಜುಗರ ಉಂಟು ಮಾಡಬಹುದು ಎಂದು ತೇಜಸ್ವಿ ಅವರು ಲಾಲು ಪ್ರಸಾದ್ ಯಾದವ್ ಅವರಿಗೆ ತಿಳಿಸಿದರು ಎನ್ನಲಾಗಿದೆ.

ಆದ್ದರಿಂದ, ಪಕ್ಷದ ಚಿಹ್ನೆಗಳ ವಿತರಣೆಯನ್ನು ನಿಲ್ಲಿಸಲಾಯಿತು ಮತ್ತು ಮಧ್ಯರಾತ್ರಿಯ ನಂತರ, ಟಿಕೆಟ್ ಪಡೆದವರಿಗೆ "ತಾಂತ್ರಿಕ ಸಮಸ್ಯೆಗಳ" ಆಧಾರದ ಮೇಲೆ ಟಿಕೆಟ್‌ಗಳನ್ನು ಹಿಂತಿರುಗಿಸುವಂತೆ ಸೂಚಿಸಲಾಗಿದೆ.

ಬುಧವಾರ ರಾಘೋಪುರದಿಂದ ತೇಜಸ್ವಿ ಯಾದವ್ ಅವರೇ ನಾಮಪತ್ರ ಸಲ್ಲಿಸುವ ಸಾಧ್ಯತೆ ಇರುವುದರಿಂದ ಅಭ್ಯರ್ಥಿಗಳ ಅಧಿಕೃತ ಘೋಷಣೆಯನ್ನು "ಇಂದು ಸಂಜೆಯೊಳಗೆ" ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Operation Sindoor ಗೆ ಪಾಕಿಸ್ತಾನದ 100 ಕ್ಕೂ ಹೆಚ್ಚು ಸೈನಿಕರು ಬಲಿ, 12 ವಿಮಾನಗಳು ಧ್ವಂಸ: ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್

ಜೈಸಲ್ಮೇರ್‌ನಲ್ಲಿ ಹೊತ್ತಿ ಉರಿದ ಬಸ್: 15 ಮಂದಿ ಸಜೀವದಹನ; ಕಿಟಕಿಯಿಂದ ಹಾರಿ ಜೀವ ಉಳಿಸಿಕೊಂಡ ಪ್ರಯಾಣಿಕರು, Video!

ಟೀಕೆ ಬದಲು ಸಾಮೂಹಿಕ ಪ್ರಯತ್ನ ಅಗತ್ಯ: ಕಿರಣ್​ ಮಜುಂದಾರ್​ಗೆ ಡಿ.ಕೆ ಶಿವಕುಮಾರ್ ತಿರುಗೇಟು

ಕದನ ವಿರಾಮಕ್ಕೆ ಕಿಮ್ಮತ್ತಿಲ್ಲ: ಗಾಜಾದಲ್ಲಿ ಮಾರಣ ಹೋಮ ಮುಂದುವರೆಸಿದ ಇಸ್ರೇಲ್; 9 ಪ್ಯಾಲೆಸ್ತೇನಿಯರು ಸಾವು!

ಮಿತಿ ಮೀರುತ್ತಿದ್ದೀರಾ? ಒಕ್ಕೂಟ ವ್ಯವಸ್ಥೆಯ ಕಥೆಯೇನು?: ತಮಿಳುನಾಡು ಕೇಸ್ ನಲ್ಲಿ ED ವಿರುದ್ಧ 'ಸುಪ್ರೀಂ' ಗರಂ; ಕೋರ್ಟ್ ಚಾಟಿಗೆ ತನಿಖಾ ಸಂಸ್ಥೆ ಬೇಸ್ತು!

SCROLL FOR NEXT