ಸಲೂನ್ ಮಾಲೀಕನನ್ನು ಥಳಿಸುತ್ತಿರುವ ಎಂಎನ್ ಎಸ್ ಕಾರ್ಯಕರ್ತರು 
ದೇಶ

ಮಹಿಳಾ ಸಿಬ್ಬಂದಿ ನಿಂದಿಸಿದ ಆರೋಪ: MNS ಕಾರ್ಯಕರ್ತರ ಗೂಂಡಾಗಿರಿ, ಸಲೂನ್ ಮಾಲೀಕನಿಗೆ ಥಳಿತ!

ಮಹಿಳಾ ಉದ್ಯೋಗಿ ಹಲವು ತಿಂಗಳುಗಳಿಂದ ಕಾಮೋಥೆಯಲ್ಲಿರುವ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದರೂ ಅವರಿಗೆ ಸಂಬಳ ನೀಡಿಲ್ಲ. ಪದೇ ಪದೇ ಮನವಿ ಮಾಡಿದ್ದರೂ ಸ್ಪಂದಿಸಿದ ಹಿನ್ನೆಲೆಯಲ್ಲಿ ಅವರು ಸ್ಥಳೀಯ MNS ಕಾರ್ಯಕರ್ತರಿಗೆ ದೂರು ನೀಡಿದ್ದರು.

ಮುಂಬೈ: ಮಹಿಳಾ ಉದ್ಯೋಗಿಯನ್ನು ನಿಂದಿಸಿದ ಆರೋಪದ ಮೇಲೆ ನವಿ ಮುಂಬೈನಲ್ಲಿ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಕಾರ್ಯಕರ್ತರು ಸಲೂನ್ ಮಾಲೀಕನನ್ನು ಥಳಿಸಿದ್ದಾರೆ. ಹಲ್ಲೆಯ ವಿಡಿಯೋ ವೈರಲ್ ಆಗಿದೆ.

ಮಹಿಳಾ ಉದ್ಯೋಗಿ ಹಲವು ತಿಂಗಳುಗಳಿಂದ ಕಾಮೋಥೆಯಲ್ಲಿರುವ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದರೂ ಅವರಿಗೆ ಸಂಬಳ ನೀಡಿಲ್ಲ. ಪದೇ ಪದೇ ಮನವಿ ಮಾಡಿದ್ದರೂ ಸ್ಪಂದಿಸಿದ ಹಿನ್ನೆಲೆಯಲ್ಲಿ ಅವರು ಸ್ಥಳೀಯ MNS ಕಾರ್ಯಕರ್ತರಿಗೆ ದೂರು ನೀಡಿದ್ದರು.

ತದನಂತರ ಎಂಎನ್‌ಎಸ್ ಕಾರ್ಯಕರ್ತರು ಸಲೂನ್‌ಗೆ ಆಗಮಿಸಿ ಮಾಲೀಕರೊಂದಿಗೆ ಜಗಳ ಮಾಡಿದ್ದಾರೆ. ದಾಳಿಕೋರರಲ್ಲಿ ಒಬ್ಬರು ಚಿತ್ರೀಕರಿಸಿದ ವೀಡಿಯೊದಲ್ಲಿ ಗುಂಪು ಮಾಲೀಕನಿಗೆ ಕಪಾಳಮೋಕ್ಷ ಮತ್ತು ಗುದಿಯುವುದನ್ನು ತೋರಿಸಿದೆ. ಬಿಟ್ಟುಬಿಡುವಂತೆ ಮಾಲೀಕರು ಕೇಳಿಕೊಳ್ಳುವುದು ವಿಡಿಯೋದಲ್ಲಿದೆ.

ಈ ಸಂಬಂಧ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಪೊಲೀಸರು ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. MNS ಕಾರ್ಯಕರ್ತರು ಇತ್ತೀಚೆಗೆ ಹಲವಾರು ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ವಿಶೇಷವಾಗಿ ಸ್ಥಳೀಯರಲ್ಲದವರು ಮರಾಠಿ ಸಂಸ್ಕೃತಿ ಮತ್ತು ಭಾಷೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಗಲಾಟೆ ಮಾಡುತ್ತಿದ್ದಾರೆ.

ಈ ವಾರದ ಆರಂಭದಲ್ಲಿ, ಥಾಣೆಯ ರೈಲ್ವೇ ನಿಲ್ದಾಣದಲ್ಲಿ ಕ್ಷುಲಕ ಕಾರಣಕ್ಕೆ ತನ್ನ ಪತಿಯನ್ನು ನಿಂದಿಸಿದ ಮಹಿಳೆಗೆ ಎಂಎನ್‌ಎಸ್ ಕಾರ್ಯಕರ್ತ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ. ಮಹಿಳೆ ಮರಾಠಿ ಜನರ ವಿರುದ್ಧ ಅವಹೇಳನಕಾರಿ ಪದ ಬಳಸಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Afghanistan-Pakistan War: ತಕ್ಷಣದ ಕದನ ವಿರಾಮಕ್ಕೆ ಉಭಯ ರಾಷ್ಟ್ರಗಳು ಒಪ್ಪಿಗೆ: ಕತಾರ್ ವಿದೇಶಾಂಗ ಸಚಿವಾಲಯ

ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ಇನ್ಮುಂದೆ ಗ್ರಾ.ಪಂ ವ್ಯಾಪ್ತಿಯಲ್ಲೂ ಸಿಗಲಿದೆ ಇ-ಸ್ವತ್ತು ಸೌಲಭ್ಯ..!

ಗುತ್ತಿಗೆದಾರರು ಬಾಕಿ ಬಿಲ್ ಕೇಳಿದರೆ ಅದು "ಧಮ್ಕಿ" ಹೇಗೆ ಆಗುತ್ತದೆ DCM ಡಿಕೆ.ಶಿವಕುಮಾರ್ ಅವರೇ?

ಬಿಲ್​ ಕ್ಲಿಯರ್'ಗೆ ಗುತ್ತಿಗೆದಾರರ ಆಗ್ರಹ: DCM ಡಿಕೆ.ಶಿವಕುಮಾರ್ ಮಧ್ಯಪ್ರವೇಶ, ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸುವ ಭರವಸೆ

ನಾನು ಮೂಲಭೂತವಾದದ ವಿರೋಧಿಯೇ ಹೊರತು ಯಾವುದೇ ಧರ್ಮಶ್ರದ್ದೆಯ ವಿರೋಧಿಯಲ್ಲ: ಪ್ರಿಯಾಂಕ್ ಖರ್ಗೆ

SCROLL FOR NEXT