ರಾಂಚಿ: ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹೋಟೆಲ್‌ನಲ್ಲಿ ಸಸ್ಯಾಹಾರಿ ಗ್ರಾಹಕನೊಬ್ಬನಿಗೆ ಬಿಕನ್ ಬಿರಿಯಾನಿ ಬಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದು ಹೋಟೆಲ್ ಮಾಲೀಕರು ಮತ್ತು ಗ್ರಾಹಕರ ನಡುವೆ ಜಗಳಕ್ಕೆ ಕಾರಣವಾಯಿತು. ಜಗಳ 47 ವರ್ಷದ ಹೋಟೆಲ್ ಮಾಲೀಕನ ಹತ್ಯೆಯಲ್ಲಿ ಕೊನೆಯಾಗಿದೆ.
ಶನಿವಾರ ರಾತ್ರಿ 11:30ರ ಸುಮಾರಿಗೆ ಕಾಂಕೆ-ಪಿಥೋರಿಯಾ ರಸ್ತೆಯಲ್ಲಿರುವ ಹೋಟೆಲ್‌ನಿಂದ ಗ್ರಾಹಕನೊಬ್ಬ ಸಸ್ಯಾಹಾರಿ ಬಿರಿಯಾನಿ ಆರ್ಡರ್ ಮಾಡಿ ಪಾರ್ಸೆಲ್‌ನೊಂದಿಗೆ ಹೊರಟುಹೋದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಪ್ರವೀಣ್ ಪುಷ್ಕರ್ ತಿಳಿಸಿದ್ದಾರೆ. ಆದಾಗ್ಯೂ, ಸ್ವಲ್ಪ ಸಮಯದ ನಂತರ ಆತ ಕೆಲವು ಜನರೊಂದಿಗೆ ಹೋಟೆಲ್ ಗೆ ಬಂದು ಚಿಕನ್ ಬಿರಿಯಾನಿ ಕೊಟ್ಟಿದ್ದೀಯಾ ಎಂದು ದೂರು ನೀಡಿದರು. ಮೃತ ರೆಸ್ಟೋರೆಂಟ್ ಮಾಲೀಕರನ್ನು ವಿಜಯ್ ಕುಮಾರ್ ನಾಗ್ (47) ಎಂದು ಗುರುತಿಸಲಾಗಿದೆ.
ಹೋಟೆಲ್ ಮಾಲೀಕನ ಗುಂಡಿನ ದಾಳಿ
ರೆಸ್ಟೋರೆಂಟ್ ಮಾಲೀಕ ಮೇಜಿನ ಬಳಿ ಊಟ ಮಾಡುತ್ತಿದ್ದಾಗ, ದಾಳಿಕೋರರಲ್ಲಿ ಒಬ್ಬನು ಎದೆಗೆ ಗುುಂಡು ಹಾರಿಸಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಪ್ರವೀಣ್ ಪುಷ್ಕರ್ ತಿಳಿಸಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮಾಲೀಕನು ಸಾವನ್ನಪ್ಪಿದರು ಎಂದು ಅವರು ಹೇಳಿದರು. ಮೃತ ವ್ಯಕ್ತಿ ಕಾಂಕೆ ಪೊಲೀಸ್ ಠಾಣೆ ಪ್ರದೇಶದ ಭಿಟ್ಟಾ ನಿವಾಸಿ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ (RIMS) ಗೆ ಕಳುಹಿಸಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಲಾಗಿದೆ.
ಕಾಂಕೆ ಪೊಲೀಸ್ ಠಾಣೆಯ ಉಸ್ತುವಾರಿ ಪ್ರಕಾಶ್ ರಜಕ್, ಭಾನುವಾರ ಬೆಳಿಗ್ಗೆ ಕೋಪಗೊಂಡ ಸ್ಥಳೀಯರು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಾಂಕೆ-ಪಿಥೋರಿಯಾ ರಸ್ತೆಯನ್ನು ಸ್ವಲ್ಪ ಸಮಯದವರೆಗೆ ತಡೆದರು. ದಾಳಿಕೋರರನ್ನು ಶೀಘ್ರದಲ್ಲೇ ವಶಕ್ಕೆ ಪಡೆಯಲಾಗುವುದು ಎಂದು ನಾವು ಅವರಿಗೆ ಭರವಸೆ ನೀಡಿದ ನಂತರ ಅವರು ಪ್ರತಿಭಟನೆಯನ್ನು ಹಿಂಪಡೆದುಕೊಂಡರು. ಘಟನೆಯ ಹಿಂದೆ ಬೇರೆ ಯಾವುದೇ ಉದ್ದೇಶವಿದೆಯೇ ಎಂದು ನಿರ್ಧರಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.