ಸ್ಥಳದಿಂದ ದೃಶ್ಯ 
ದೇಶ

ದೆಹಲಿ ಎನ್ ಕೌಂಟರ್: 'ಸಿಗ್ಮಾ ಗ್ಯಾಂಗ್' ನ ನಾಲ್ವರು ಮೋಸ್ಟ್ ವಾಂಟೆಡ್ ದರೋಡೆಕೋರರ ಹತ್ಯೆ

ದೆಹಲಿ ಮತ್ತು ಬಿಹಾರ ಪೊಲೀಸರ ತಂಡಗಳು ಮತ್ತು ಗ್ಯಾಂಗ್​ಸ್ಟರ್​ಗಳ ನಡುವೆ ವಾಯುವ್ಯ ದೆಹಲಿಯಲ್ಲಿ ಬೆಳಗಿನ ಜಾವ 2.20 ಕ್ಕೆ ಗುಂಡಿನ ಚಕಮಕಿ ನಡೆಯಿತು.

ನವದೆಹಲಿ: ದೆಹಲಿಯ ರೋಹಿಣಿಯಲ್ಲಿ ಬೆಳಗಿನ ಜಾವ ಪೊಲೀಸ್ ಎನ್​​ಕೌಂಟರ್ ನಲ್ಲಿ ಸಿಗ್ಮಾ ಗ್ಯಾಂಗ್​​ನ ನಾಲ್ವರು ಮೋಸ್ಟ್​ ವಾಂಟೆಡ್ ಗ್ಯಾಂಗ್​ಸ್ಟರ್​ಗಳನ್ನು ಹತ್ಯೆ ಮಾಡಲಾಗಿದೆ.

ದೆಹಲಿ ಮತ್ತು ಬಿಹಾರ ಪೊಲೀಸರ ತಂಡಗಳು ಮತ್ತು ಗ್ಯಾಂಗ್​ಸ್ಟರ್​ಗಳ ನಡುವೆ ವಾಯುವ್ಯ ದೆಹಲಿಯಲ್ಲಿ ಬೆಳಗಿನ ಜಾವ 2.20 ಕ್ಕೆ ಗುಂಡಿನ ಚಕಮಕಿ ನಡೆಯಿತು.

ಪೊಲೀಸರು ಗ್ಯಾಂಗ್ ಸದಸ್ಯರನ್ನು ತಡೆಯಲು ಪ್ರಯತ್ನಿಸಿದಾಗ ಎನ್‌ಕೌಂಟರ್ ನಡೆಯಿತು. ಗ್ಯಾಂಗ್​ಸ್ಟರ್​ಗಳು ಪೊಲೀಸರ ಮೇಲೆ ಗುಂಡು ಹಾರಿಸಿದಾಗ ಅವರು ಕೂಡ ಪ್ರತೀಕಾರದ ದಾಳಿ ನಡೆಸಿದರು. ನಾಲ್ವರು ಆರೋಪಿಗಳಿಗೂ ಗುಂಡೇಟಿನ ಗಾಯಗಳಾಗಿದ್ದು, ಅವರನ್ನು ರೋಹಿಣಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿ ಎಲ್ಲಾ ನಾಲ್ವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಗ್ಯಾಂಗ್​ಸ್ಟರ್​ ರಂಜನ್ ಪಾಠಕ್ (25 ವರ್ಷ), ಬಿಮ್ಲೇಶ್ ಮಹ್ತೊ (25 ವರ್ಷ), ಮನೀಶ್ ಪಾಠಕ್ (33 ವರ್ಷ) ಮತ್ತು ಅಮನ್ ಠಾಕೂರ್ (21 ವರ್ಷ) ಎಂದು ಗುರುತಿಸಲಾಗಿದೆ. ರಂಜನ್ ಪಾಠಕ್ ಅವರ ನಾಯಕನಾಗಿದ್ದ. ಸಿಗ್ಮಾ ಗ್ಯಾಂಗ್ ಬಿಹಾರದಾದ್ಯಂತ ಸುಲಿಗೆ ಮತ್ತು ಗುತ್ತಿಗೆ ಹತ್ಯೆಗಳಲ್ಲಿ ಭಾಗಿಯಾಗಿಯಾಗಿದ್ದ.

ಈ ನಾಲ್ವರು ವ್ಯಕ್ತಿಗಳು ಬಿಹಾರದಲ್ಲಿ ಕೊಲೆ, ಸುಲಿಗೆ ಮತ್ತು ಸಂಘಟಿತ ಅಪರಾಧ ಚಟುವಟಿಕೆಗಳು ಸೇರಿದಂತೆ ಹಲವಾರು ಘೋರ ಅಪರಾಧಗಳಲ್ಲಿ ಪೊಲೀಸರಿಗೆ ಬೇಕಾಗಿದ್ದರು ಎಂದು ದೆಹಲಿ ಪೊಲೀಸ್ ಮೂಲಗಳು ದೃಢಪಡಿಸಿವೆ. ಪಾಠಕ್‌ನನ್ನು ಹಿಡಿದುಕೊಟ್ಟವರಿಗೆ 25,000 ರೂ. ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು .

ಸೀತಾಮರ್ಹಿ ಮತ್ತು ಬಿಹಾರದ ಪಕ್ಕದ ಜಿಲ್ಲೆಗಳಲ್ಲಿ ನಡೆದ ಐದು ಪ್ರಮುಖ ಕೊಲೆಗಳು ಸೇರಿದಂತೆ ಎಂಟು ಕ್ರಿಮಿನಲ್ ಪ್ರಕರಣಗಳಲ್ಲಿ ಪಾಠಕ್ ಬೇಕಾಗಿದ್ದ. ಪಾಠಕ್ ಸಾಮಾಜಿಕ ಮಾಧ್ಯಮ ಮತ್ತು ಆಡಿಯೊ ಸಂದೇಶಗಳ ಮೂಲಕ ಪೊಲೀಸರಿಗೆ ಬಹಿರಂಗವಾಗಿ ಸವಾಲು ಹಾಕುತ್ತಿದ್ದ ಎಂದು ದೆಹಲಿ ಪೊಲೀಸ್ ಮೂಲವೊಂದು ಬಹಿರಂಗಪಡಿಸಿದೆ.

ಇತ್ತೀಚೆಗೆ ಪತ್ತೆಯಾಗಿರುವ ಆಡಿಯೊ ಕ್ಲಿಪ್ ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಗ್ಯಾಂಗ್ ರೂಪಿಸುತ್ತಿದ್ದ ಪ್ರಮುಖ ಪಿತೂರಿಯ ವಿವರಗಳನ್ನು ಬಹಿರಂಗಪಡಿಸಿದೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಹಿಳಾ ವಿಶ್ವಕಪ್ 2025: ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ 53 ರನ್‌ಗಳ ಭರ್ಜರಿ ಜಯ, ಸೆಮಿಫೈನಲ್‌ಗೆ INDIA ಲಗ್ಗೆ!

ವೆಸ್ಟ್ ಬ್ಯಾಂಕ್ ವಶಪಡಿಸಿಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿದರೇ ಅಮೆರಿಕದ ಬೆಂಬಲ ಕಳಕೊಳ್ಳಬೇಕಾಗುತ್ತೆ: ಇಸ್ರೇಲ್‌ಗೆ ಟ್ರಂಪ್ ಕಟು ಎಚ್ಚರಿಕೆ

ರಕ್ಷಣಾ ವಲಯಕ್ಕೆ 79,000 ಕೋಟಿ ರೂ. ಮೌಲ್ಯದ ಉಪಕರಣಗಳ ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ!

ಹೊಸ ಸಿಜೆಐ ನೇಮಕಕ್ಕೆ ಪ್ರಕ್ರಿಯೆ ಆರಂಭ: ಯಾರಾಗಲಿದ್ದಾರೆ ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ?

ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಎರಡ್ಮೂರು ದಿನಗಳಲ್ಲಿ AAI ವರದಿ ಸಲ್ಲಿಕೆ- ಎಂ.ಬಿ ಪಾಟೀಲ್

SCROLL FOR NEXT