ಜೆಪಿ ನಡ್ಡಾ 
ದೇಶ

Bihar polls: ಅಭಿವೃದ್ಧಿ v/s ವಿನಾಶದ ನಡುವಿನ ಹೋರಾಟ ಎಂದ ಜೆಪಿ ನಡ್ಡಾ!

ಲಾಲು ಪ್ರಸಾದ್ ನೇತೃತ್ವದ ಪಕ್ಷವು 'ರಂಗದಾರಿ' (ಸುಲಿಗೆ), 'ಜಂಗಲ್ ರಾಜ್' (ಅರಾಜಕತೆ) ಮತ್ತು 'ದಾದಾಗಿರಿ' (ಬೆದರಿಕೆ) ಗಾಗಿ ನಿಂತಿದೆ ಎಂದು ಆರ್‌ಜೆಡಿ ವಿರುದ್ಧ ಕಿಡಿಕಾರಿದರು.

ಔರಂಗಾಬಾದ್: ಬಿಹಾರ ವಿಧಾನಸಭಾ ಚುನಾವಣೆಯು ಅಭಿವೃದ್ಧಿ ಮತ್ತು ವಿನಾಶದ ನಡುವಿನ ಹೋರಾಟವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.

ಔರಂಗಾಬಾದ್ ಜಿಲ್ಲೆಯಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಬಿಹಾರದ ವಿಧಾನಸಭಾ ಚುನಾವಣೆಯು ಎನ್‌ಡಿಎಯ 'ವಿಕಾಸ್' (ಅಭಿವೃದ್ಧಿ) ಮತ್ತು ಇಂಡಿಯಾ ಬ್ಲಾಕ್‌ನ 'ವಿನಾಶ್' (ವಿನಾಶ) ನಡುವಿನ ಹೋರಾಟವಾಗಿದೆ ಎಂದರು.

ಇದು "ತನ್ನ ಕಿರಿಯ ಮೈತ್ರಿ ಪಾಲುದಾರರನ್ನು ಮುಗಿಸುವ ಪರಾವಲಂಬಿ ಪಕ್ಷ" ಎಂದು ಆರೋಪಿಸಿದರು. ಲಾಲು ಪ್ರಸಾದ್ ನೇತೃತ್ವದ ಪಕ್ಷವು 'ರಂಗದಾರಿ' (ಸುಲಿಗೆ), 'ಜಂಗಲ್ ರಾಜ್' (ಅರಾಜಕತೆ) ಮತ್ತು 'ದಾದಾಗಿರಿ' (ಬೆದರಿಕೆ) ಗಾಗಿ ನಿಂತಿದೆ ಎಂದು ಆರ್‌ಜೆಡಿ ವಿರುದ್ಧ ಕಿಡಿಕಾರಿದರು.

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಯುವಕರಿಗೆ ಉದ್ಯೋಗ ಒದಗಿಸುವ ಮತ್ತು ವಲಸೆ ಹೋಗುವುದನ್ನು ತಡೆಯುವ ಭರವಸೆ ಉಲ್ಲೇಖಿಸಿದ ಜೆ.ಪಿ. ನಡ್ಡಾ, ಆರ್‌ಜೆಡಿಯ ಇಂತಹ ಭರವಸೆಗಳು ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಪಕ್ಷ ಭಾಗಿಯಾಗಿರುವುದನ್ನು ನೆನಪಿಸುತ್ತದೆ ಎಂದರು.

ಬಿಹಾರದ ಪ್ರತಿ ಕುಟುಂಬಕ್ಕೂ ಸರ್ಕಾರಿ ನೌಕರಿ ಒದಗಿಸುವ ಆರ್‌ಜೆಡಿಯ ಚುನಾವಣಾ ಭರವಸೆಯನ್ನು ಟೀಕಿಸಿದ ನಡ್ಡಾ, ಸಂಬಳ ನೀಡಲು ಹಣವನ್ನು ಎಲ್ಲಿಂದ ತರ್ತಾರೆ ಎಂದು ಲೇವಡಿ ಮಾಡಿದರು.

ಚುನಾವಣೆಯಲ್ಲಿ ಗ್ಯಾಂಗ್ ಸ್ಟರ್- ರಾಜಕಾರಣಿ ದಿವಂಗತ ಎಂಡಿ ಶಹಾಬುದ್ದೀನ್ ಅವರ ಪುತ್ರ ಒಸಾಮಾ ಶಹಾಬ್‌ಗೆ ಟಿಕೆಟ್ ನೀಡಿದ್ದಕ್ಕಾಗಿ ಆರ್ ಜೆಡಿ ವಿರುದ್ಧ ಗುಡುಗಿದ ಅವರು,ಇದು ಬಿಹಾರದ ಬಗ್ಗೆ ಪಕ್ಷಕ್ಕೆ ಎಷ್ಟು ಕಾಳಜಿಯಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ