ರಷ್ಯಾದ ಮಿಲಿಟರಿಯೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಐರೋಪ್ಯ ಒಕ್ಕೂಟವು ನಿರ್ಬಂಧ ಹೇರಿರುವ 45 ಘಟಕಗಳಲ್ಲಿ ಭಾರತ ಮೂಲದ ಮೂರು ಕಂಪನಿಗಳು ಸೇರಿವೆ. ಮೂರು ಭಾರತೀಯ ಘಟಕಗಳಾದ ಏರೋಟ್ರಸ್ಟ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್, ಅಸೆಂಡ್ ಏವಿಯೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಶ್ರೀ ಎಂಟರ್‌ಪ್ರೈಸಸ್ ಎಂದು ಗುರುತಿಸಲಾಗಿದೆ.
ಉಕ್ರೇನ್ ಮೇಲಿನ ಆಕ್ರಮಣಕ್ಕಾಗಿ ರಷ್ಯಾದ ಮೇಲೆ ಆರ್ಥಿಕ ಒತ್ತಡ ಹೇರುವ ಪ್ರಯತ್ನಗಳ ಭಾಗವಾಗಿರುವ 19 ನೇ ನಿರ್ಬಂಧಗಳ ಭಾಗವಾಗಿ ಐರೋಪ್ಯ ಒಕ್ಕೂಟವು ಕಂಪನಿಗಳ ವಿರುದ್ಧ ದಂಡನಾತ್ಮಕ ಕ್ರಮಗಳನ್ನು ವಿಧಿಸಿದೆ.
EU ಕ್ರಮಕ್ಕೆ ಭಾರತೀಯ ಅಧಿಕಾರಿಗಳಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಕಂಪ್ಯೂಟರ್ ಸಂಖ್ಯಾತ್ಮಕ ನಿಯಂತ್ರಣ (CNC) ಯಂತ್ರೋಪಕರಣಗಳು, ಮೈಕ್ರೋಎಲೆಕ್ಟ್ರಾನಿಕ್ಸ್, ಮಾನವರಹಿತ ವೈಮಾನಿಕ ವಾಹನಗಳು ಮತ್ತು ಇತರ ಮುಂದುವರಿದ ತಂತ್ರಜ್ಞಾನ ವಸ್ತುಗಳ ಮೇಲಿನ ರಫ್ತು ನಿರ್ಬಂಧಗಳನ್ನು ತಪ್ಪಿಸಲು ಅನುವು ಮಾಡಿಕೊಡುವ ಮೂಲಕ ರಷ್ಯಾದ ಮಿಲಿಟರಿ ಮತ್ತು ಕೈಗಾರಿಕಾ ಸಂಕೀರ್ಣವನ್ನು ನೇರವಾಗಿ ಬೆಂಬಲಿಸುವ 45 ಹೊಸ ಘಟಕಗಳನ್ನು ಯುರೋಪಿಯನ್ ಕೌನ್ಸಿಲ್ ಗುರುತಿಸಿದೆ ಎಂದು ತಿಳಿಸಿದೆ.
ಈ 17 ಘಟಕಗಳಲ್ಲಿ, 12 ಘಟಕಗಳು ಹಾಂಗ್ ಕಾಂಗ್ ಸೇರಿದಂತೆ ಚೀನಾದಲ್ಲಿವೆ, ಮೂರು ಭಾರತದಲ್ಲಿ ಮತ್ತು ಎರಡು ಥೈಲ್ಯಾಂಡ್‌ನಲ್ಲಿವೆ ಎಂದು ಐರೋಪ್ಯ ಒಕ್ಕೂಟ ತಿಳಿಸಿದೆ.