ದೆಹಲಿ: ರಾಷ್ಟ್ರ ರಾಜಧಾನಿಯ ಗಾಂಧಿ ವಿಹಾರ್ ಪ್ರದೇಶದಲ್ಲಿನ ಫ್ಲಾಟ್‌ನಲ್ಲಿ ಇತ್ತೀಚಿಗೆ 32 ವರ್ಷದ UPSC ಆಕಾಂಕ್ಷಿಯ ಸುಟ್ಟ ದೇಹ ಪತ್ತೆಯಾಗಿತ್ತು. ಈ ಸಂಬಂಧ ಆತನ ಲವರ್, ಆಕೆಯ ಮಾಜಿ ಬಾಯ್ ಫ್ರೆಂಡ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿರುವುದಾಗಿ ಮೂಲಗಳು ತಿಳಿಸಿವೆ.
ಈ ಪ್ರಕರಣ ಸಂಬಂಧ ಉತ್ತರ ಪ್ರದೇಶದ ಮೊರಾದಾಬಾದ್ ನಿವಾಸಿಗಳಾದ ವಿಧಿವಿಜ್ಞಾನ ವಿಜ್ಞಾನದಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಯುವತಿ, ಆಕೆಯ ಮಾಜಿ ಬಾಯ್ ಫ್ರೆಂಡ್ ಮತ್ತು ಆತನ ಸಹಚರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಂತ್ರಸ್ತನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದ ಮಹಿಳೆ, ಆಕೆಯನ್ನು ಕೊಲ್ಲಲು ಇಬ್ಬರು ವ್ಯಕ್ತಿಗಳೊಂದಿಗೆ ಸೇರಿ ಸಂಚು ರೂಪಿಸಿದ್ದರು. ತದನಂತರ ಆಕೆಯ ದೇಹಕ್ಕೆ ಬೆಂಕಿ ಹಚ್ಚಿ ಸುಡಲಾಗಿತ್ತು ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ಮೃತ ರಾಮ್ಕೇಶ್ ಮೀನಾ ಗಾಂಧಿ ವಿಹಾರ್ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ವಾಸಿಸುತ್ತಿದ್ದರು. "ಅಕ್ಟೋಬರ್ 6 ರಂದು, ಎಸಿ ಸ್ಫೋಟದಿಂದ ಫ್ಲಾಟ್‌ನಲ್ಲಿ ಬೆಂಕಿ ಅವಘಡ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಕೊಠಡಿಯಿಂದ ತೀವ್ರವಾಗಿ ಸುಟ್ಟ ದೇಹವನ್ನು ಹೊರತೆಗೆದಿದ್ದರು. ತದನಂತರ ಪ್ರಕರಣವನ್ನು ದಾಖಲಿಸಿ ತನಿಖೆ ಆರಂಭಿಸಲಾಯಿತು.
ಸಿಸಿಟಿವಿ ದೃಶ್ಯಾವಳಿಗಳಿಂದ ಅಪರಾಧ ಪತ್ತೆ: ಅಕ್ಟೋಬರ್ 5 ಮತ್ತು 6 ರ ರಾತ್ರಿ ಇಬ್ಬರು ಪುರುಷರು ತಮ್ಮ ಮುಖವನ್ನು ಮುಚ್ಚಿಕೊಂಡು ಕಟ್ಟಡ ಪ್ರವೇಶಿಸಿದ್ದು, ಬೆಳಗಿನ ಜಾವ 2.57 ರ ಸುಮಾರಿಗೆ ಮಹಿಳೆಯೊಬ್ಬರು ಅವರಲ್ಲಿ ಒಬ್ಬರೊಂದಿಗೆ ಹೋಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ಅವರು ತೆರಳಿದ ಸ್ವಲ್ಪ ಸಮಯದ ನಂತರ ಬೆಂಕಿ ಕಾಣಿಸಿಕೊಂಡಿದೆ.
ಅಶ್ಲೀಲ ವಿಡಿಯೋ ಡಿಲೀಟ್ ಮಾಡಲು ನಕಾರ: ತನಿಖೆಯ ಸಮಯದಲ್ಲಿ ಕರೆ ವಿವರಗಳು ದಾಖಲೆಗಳು ಆಕೆ ಅಪರಾಧ ಸ್ಥಳದಲ್ಲಿ ಇದ್ದ ಬಗ್ಗೆ ಅನುಮಾನ ಹುಟ್ಟಿಹಾಕಿತ್ತು. ಮೊರಾದಾಬಾದ್‌ನಲ್ಲಿ ಅಕ್ಟೋಬರ್ 18 ರಂದು ದಾಳಿ ನಡೆಸಿ ಆಕೆಯನ್ನು ಬಂಧಿಸಲಾಯಿತು. ಇಬ್ಬರು ಸಹಚರರೊಂದಿಗೆ ಸೇರಿಕೊಂಡು ಕೊಲೆ ಮಾಡಿರುವುದಾಗಿ ಆಕೆ ತಪ್ಪೊಪ್ಪಿಕೊಂಡಿದ್ದಾರೆ. ನಂತರ ಆಕೆಯ ಇಬ್ಬರು ಸಹಚರರನ್ನು ಕೂಡ ಬಂಧಿಸಲಾಗಿದೆ.
ತನ್ನ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದ ಮೀನಾ ಅವುಗಳನ್ನು ಡಿಲೀಟ್ ಮಾಡಲು ನಿರಾಕರಿಸಿದ್ದ. ಇದನ್ನು ಆಕೆ ತನ್ನ ಮಾಜಿ ಬಾಯ್ ಫ್ರೆಂಡ್ ಜೊತೆಗೆ ಹಂಚಿಕೊಂಡಿದ್ದಳು. ಇದರಿಂದ ಆಕ್ರೋಶಗೊಂಡು ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದಾಗಿ ಮಹಿಳೆ ತನಿಖಾಧಿಕಾರಿಗಳ ಮುಂದೆ ವಿಷಯ ಬಾಯ್ಬಿಟ್ಟಿದ್ದಾಳೆ.
ಕತ್ತು ಹಿಸುಕಿ ಸಂತ್ರಸ್ತೆ ಕೊಲೆ: ದೇಹಕ್ಕೆ ಸೀಮೆಎಣ್ಣೆ, ತುಪ್ಪ ಮತ್ತು ಮದ್ಯವನ್ನು ಸುರಿಯುವ ಮೊದಲು ಮೂವರು ಮೀನಾ ಅವರ ಕತ್ತು ಹಿಸುಕಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಎಲ್‌ಪಿಜಿ ವಿತರಕರಾಗಿ ಕೆಲಸ ಮಾಡುತ್ತಿದ್ದ ಮಹಿಳೆಯ ಮಾಜಿ ಬಾಯ್ ಫ್ರೆಂಡ್ ಗ್ಯಾಸ್ ಸಿಲಿಂಡರ್‌ನ ವಾಲ್ವ್ ತೆರೆದು ಬೆಂಕಿ ಹಚ್ಚಿದ್ದು, ಸ್ಫೋಟ ಸಂಭವಿಸಿದೆ. ನಂತರ ಅವರು ಸಂತ್ರಸ್ತನ ಹಾರ್ಡ್ ಡಿಸ್ಕ್, ಲ್ಯಾಪ್ ಟಾಪ್ ಮತ್ತು ಇತರ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ. ಆರೋಪಿಯಿಂದ ಹಾರ್ಡ್ ಡಿಸ್ಕ್, ಟ್ರಾಲಿ ಬ್ಯಾಗ್, ಸಂತ್ರಸ್ತೆಯ ಶರ್ಟ್ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.