ಧಗಧಗನೆ' ಹೊತ್ತಿ ಉರಿದ ಬಸ್ 
ದೇಶ

Delhi Airport: ವಿಮಾನದ ಸ್ವಲ್ಪ ದೂರದಲ್ಲೇ ಏರ್ ಇಂಡಿಯಾ ಶಟಲ್ ಬಸ್ ಗೆ ಬೆಂಕಿ! Video

ಬೆಂಕಿಯ ಕೆನ್ನಾಲಿಗೆ ವಿಮಾನಕ್ಕೆ ತಾಗಿದ್ದರೆ ದೊಡ್ಡ ಗಂಡಾಂತರ ಎದುರಾಗುವ ಸಾಧ್ಯತೆಯಿತ್ತು.

ನವದೆಹಲಿ: ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3 ರಲ್ಲಿ ಭಾರಿ ಅಗ್ನಿ ಅವಘಡವೊಂದು ನಡೆದಿದೆ. ಏರ್ ಇಂಡಿಯಾ ವಿಮಾನದಿಂದ ಕೆಲವೇ ಮೀಟರ್ ದೂರದಲ್ಲಿ ನಿಂತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಧಗ ಧಗನೆ ಹೊತ್ತಿ ಉರಿದಿದೆ.

SATS ಏರ್‌ಪೋರ್ಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನಿಂದ ನಿರ್ವಹಿಸಲ್ಪಡುವ ಬಸ್ ಬೇ 32 ರ ಬಳಿ ನಿಂತಿದ್ದಾಗ ಬೆಂಕಿ ಹೊತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆ ಧಗಧಗನೆ ಹೊತ್ತಿ ಉರಿದಿದೆ.

ಬೆಂಕಿಯ ಕೆನ್ನಾಲಿಗೆ ವಿಮಾನಕ್ಕೆ ತಾಗಿದ್ದರೆ ದೊಡ್ಡ ಗಂಡಾಂತರ ಎದುರಾಗುವ ಸಾಧ್ಯತೆಯಿತ್ತು. ಆದರೆ, ಅದೃಷ್ಟವಶಾತ್ ಬೆಂಕಿಯ ಕಿಡಿ ವಿಮಾನಕ್ಕೆ ತಾಗಿಲ್ಲ. ವಿಡಿಯೋದಲ್ಲಿ ಇಡೀ ಬಸ್ ಸುಟ್ಟು ಭಸ್ಮವಾಗಿರುವುದನ್ನು ನೋಡಬಹುದಾಗಿದೆ.

ಇದೊಂದು ಕಣ್ತಪ್ಪಿನಿಂದ ಆದ ಘಟನೆಯಾಗಿದ್ದು, ಬಸ್ ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಕೂಡಲೇ ಕಾರ್ಯಪ್ರವೃತ್ತರಾದ ನಮ್ಮ ತಜ್ಞ ಎಆರ್‌ಎಫ್‌ಎಫ್ ತಂಡ ಕೆಲವೇ ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಿದೆ. ಘಟನೆಯಲ್ಲಿ ಯಾವುದೇ ಅನಾಹುತ ಆಗಿಲ್ಲ, ಯಾರಿಗೂ ಗಾಯಗಳಾಗಿಲ್ಲ ಎಂದು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐಎ) ಕಾರ್ಯಾಚರಣೆಯನ್ನು ನಿರ್ವಹಿಸುವ ದೆಹಲಿ ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (DIAL) ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವ್ಯಾಪಾರ ಉದ್ವಿಗ್ನತೆ ನಂತರ ಅಮೆರಿಕ-ಚೀನಾ ಸಂಬಂಧ ಸ್ಥಿರಗೊಳಿಸುವ ಪ್ರಯತ್ನ: ಇಂದು ದ.ಕೊರಿಯಾದಲ್ಲಿ ಟ್ರಂಪ್-ಜಿನ್ ಪಿಂಗ್ ಭೇಟಿ, ಮಾತುಕತೆ

ಮ್ಯಾನ್ಮಾರ್ ನಿಂದ ಪಲಾಯನ, ಥಾಯ್ಲೆಂಡ್ ನಲ್ಲಿ 500 ಭಾರತೀಯರ ಬಂಧನ: ವಾಪಾಸ್ ಕರೆತರಲು ಪ್ರಯತ್ನ ಎಂದ ಕೇಂದ್ರ

ಕಲಿಯುಗದಲ್ಲಿ ಪಾಪ ನಿವಾರಣೆಗೆ ಮಂತ್ರ ಜಪವೇ ಯೋಗ್ಯ: 'ಪಠಣ ದೋಷ'ದಿಂದ ಮುಕ್ತಿ ಹೇಗೆ? 'ಕುಂಡಲಿನಿ ಶಕ್ತಿ' ಜಾಗೃತಗೊಳಿಸುವ ಉಪಾಯ ತಿಳಿದುಕೊಳ್ಳಿ!

'ಭಾರತದಲ್ಲಿ ಸ್ವತಂತ್ರವಾಗಿ ಧೈರ್ಯದಿಂದ ಬದುಕುತ್ತಿದ್ದೇನೆ., ಬಾಂಗ್ಲಾದೇಶಕ್ಕೆ ಬರಲ್ಲ.. ಆದರೆ': ಶೇಖ್ ಹಸೀನಾ

South Africa vs England, ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದ 2ನೇ ಅತೀ ದೊಡ್ಡ ಸೋಲು, ಇಂಗ್ಲೆಂಡ್ ಗೆ ತೀವ್ರ ಮುಖಭಂಗ

SCROLL FOR NEXT