ರಾಹುಲ್ ಗಾಂಧಿ, ಪ್ರಧಾನಿ ಮೋದಿ ಸಾಂದರ್ಭಿಕ ಚಿತ್ರ 
ದೇಶ

'ಹೇಡಿ' ಮೋದಿಗಿಂತ ಇಂದಿರಾ ಗಾಂಧಿಗೆ ಹೆಚ್ಚಿನ ಧೈರ್ಯವಿತ್ತು: ರಾಹುಲ್ ಗಾಂಧಿ ವಾಗ್ದಾಳಿ

ಇಂದಿರಾ ಗಾಂಧಿ ಅಮೆರಿಕದ ಮುಂದೆ ಹೆದರಿರಲಿಲ್ಲ ಅಥವಾ ತಲೆಬಾಗಿರಲಿಲ್ಲ. ಆದರೆ ಪ್ರಧಾನಿ ಮೋದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರು ನಿಲ್ಲುವ ಸಾಮರ್ಥ್ಯ ಇಲ್ಲ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ನಳಂದಾ: 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧವನ್ನು ಉಲ್ಲೇಖಿಸಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲಿಸುವ ಮೂಲಕ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಹಾರದ ನಳಂದಾದಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, 1971ರ ಯುದ್ಧದ ಸಂದರ್ಭದಲ್ಲಿ ಇಂದಿರಾ ಗಾಂಧಿ ಅಮೆರಿಕದ ಮುಂದೆ ಹೆದರಿರಲಿಲ್ಲ ಅಥವಾ ತಲೆಬಾಗಿರಲಿಲ್ಲ. ಆದರೆ ಪ್ರಧಾನಿ ಮೋದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರು ನಿಲ್ಲುವ ಸಾಮರ್ಥ್ಯ ಇಲ್ಲ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

1971ರ ಬಾಂಗ್ಲಾದೇಶದ ಯುದ್ಧದ ಸಂದರ್ಭದಲ್ಲಿ ಭಾರತವನ್ನು ಹೆದರಿಸಲು ಮತ್ತು ಬೆದರಿಕೆ ಹಾಕಲು ಅಮೆರಿಕ ತನ್ನ ವಿಮಾನ ಮತ್ತು ನೌಕಾಪಡೆಯನ್ನು ಕಳುಹಿಸಿತ್ತು. ಪ್ರಧಾನಿಯಾಗಿದ್ದ ಇಂದಿರಾಗಾಂಧಿ ನಿಮ್ಮ ನೌಕಾಪಡೆಗೆ ನಾವು ಹೆದರುವುದಿಲ್ಲ, ನೀವು ಏನು ಮಾಡುತ್ತಿರೋ ಅಥವಾ ನಾವು ಮಾಡಲಿದ್ದೇವೆ ಎಂದು ಹೇಳಿದ್ದರು ಎಂದರು.

ಅಮೆರಿಕದ ಅಧ್ಯಕ್ಷರನ್ನು ಎದುರಿಸುವ ತಾಕತ್ತು ಇಲ್ಲ: ಇಂದಿರಾ ಗಾಂಧಿ ಮಹಿಳೆಯಾಗಿದ್ದರು. ಆದರೆ ಈ ವ್ಯಕ್ತಿಗಿಂತ ಅವರಿಗೆ ಹೆಚ್ಚಿನ ಧೈರ್ಯವಿತ್ತು. ನರೇಂದ್ರ ಮೋದಿ ಹೇಡಿ, ಅವರಿಗೆ ಅಮೆರಿಕದ ಅಧ್ಯಕ್ಷರನ್ನು ಎದುರಿಸುವ ತಾಕತ್ತು ಇಲ್ಲ. ನರೇಂದ್ರ ಮೋದಿ ಅವರಿಗೆ ಧೈರ್ಯ ಇದ್ದರೆ ಬಿಹಾರದ ಯಾವುದಾದರೂ ಸಭೆಯಲ್ಲಿ ಟ್ರಂಪ್ ಹೇಳುತ್ತಿರುವುದು ಸುಳ್ಳು, ಆಪರೇಷನ್ ಸಿಂಧೂರ್ ನಿಲ್ಲಿಸಲು ಹೇಳಲಿಲ್ಲ. ಅವರು ಅದನ್ನು ಮಾಡಲಿಲ್ಲ ಎಂದು ಹೇಳಲಿ ಎಂದು ಸವಾಲು ಹಾಕಿದರು.

ದಕ್ಷಿಣ ಕೊರಿಯಾದ ಏಷ್ಯಾ ಫೆಸಿಪಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಯುದ್ಧವನ್ನು ನಿಲ್ಲಿಸಲು ತಾನು ಮಧ್ಯಸ್ಥಿಕೆ ವಹಿಸಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ ನಂತರ ರಾಹುಲ್ ಗಾಂಧಿ ಈ ರೀತಿಯ ವಾಗ್ದಾಳಿ ನಡೆಸಿದ್ದಾರೆ.

50 ಬಾರಿ ನರೇಂದ್ರ ಮೋದಿಗೆ ಅಪಮಾನ:

ಡೊನಾಲ್ಡ್ ಟ್ರಂಪ್ 50 ಬಾರಿ ನರೇಂದ್ರ ಮೋದಿ ಅವರನ್ನು ಅವಮಾನಿಸಿದ್ದಾರೆ. ಆಪರೇಷನ್ ಸಿಂಧೂರ್ ನಲ್ಲಿಸುವಂತೆ ಫೋನ್ ನಲ್ಲಿ ನರೇಂದ್ರ ಮೋದಿ ಅವರಿಗೆ ಹೇಳಿದ ಎರಡು ದಿನಗಳೊಳಗೆ ಯುದ್ಧವನ್ನು ನಿಲ್ಲಿಸಲಾಗಿದೆ ಎಂದು ಟ್ರಂಪ್ ಹೇಳುತ್ತಾರೆ. ಆದರೆ ಟ್ರಂಪ್ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳುವ ತಾಕತ್ತು ನರೇಂದ್ರ ಮೋದಿಗೆ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

Women's World Cup 2025: ಜೆಮಿಮಾ ಭರ್ಜರಿ ಶತಕ, 5 ವಿಕೆಟ್ ಗಳಿಂದ ಆಸೀಸ್ ಸೋಲಿಸಿ, ಫೈನಲ್ ಗೆ ಲಗ್ಗೆ ಇಟ್ಟ ಭಾರತ!

ಮೋದಿ ಮತಕ್ಕಾಗಿ 'ಭರತ ನಾಟ್ಯ'ನೂ ಮಾಡ್ತಾರೆ: ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು!

ಸಂಪುಟ ಸಭೆಯಲ್ಲಿ ಸಚಿವರ ಜಟಾಪಟಿ: ಡಾ. ಹೆಚ್‌.ಸಿ. ಮಹಾದೇವಪ್ಪ- ಕೆಜೆ ಜಾರ್ಜ್ ಕಿತ್ತಾಡಿಕೊಂಡ್ರಾ?

ಚುನಾವಣಾ ಆಯೋಗದ SIR ಗೆ ಹೆದರಿ ಆತ್ಮಹತ್ಯೆಗೆ ಶರಣಾದ ಪಶ್ಚಿಮ ಬಂಗಾಳದ ವ್ಯಕ್ತಿ!

ಪ. ಜಾತಿಯಲ್ಲಿ ಒಳ ಮೀಸಲಾತಿ: ಸಮರ್ಪಕ ಅನುಷ್ಟಾನಕ್ಕೆ ಮುಂದಿನ ಕ್ಯಾಬಿನೆಟ್ ನಲ್ಲಿ ಬಿಲ್ ಮಂಡನೆ!

SCROLL FOR NEXT