ಮನೋಜ್ ಜಾರಂಗೆ 
ದೇಶ

ನಾಳೆ ಮಧ್ಯಾಹ್ನದೊಳಗೆ ಮುಂಬೈನ ಎಲ್ಲಾ ರಸ್ತೆಗಳನ್ನು ತೆರವುಗೊಳಿಸಿ: ಜಾರಂಗೆಗೆ ಬಾಂಬೆ ಹೈಕೋರ್ಟ್

ಮಂಗಳವಾರ ಮಧ್ಯಾಹ್ನದೊಳಗೆ ಪರಿಸ್ಥಿತಿಯನ್ನು ಸರಿಪಡಿಸಬೇಕು ಮತ್ತು ನಗರದ ಎಲ್ಲಾ ಬೀದಿಗಳನ್ನು ಖಾಲಿ ಮಾಡುವಂತೆ ಜಾರಂಗೆ ಹಾಗೂ ಅವರ ಬೆಂಬಲಿಗರಿಗೆ ಹೈಕೋರ್ಟ್ ಆದೇಶಿಸಿದೆ.

ಮುಂಬೈ: ಮನೋಜ್ ಜಾರಂಗೆ ನೇತೃತ್ವದಲ್ಲಿ ನಡೆಯುತ್ತಿರುವ ಮರಾಠಾ ಮೀಸಲಾತಿ ಹೋರಾಟದಿಂದಾಗಿ ಇಡೀ ಮುಂಬೈ ನಗರ ಸ್ತಬ್ಧಗೊಂಡಿದೆ ಮತ್ತು ಪ್ರತಿಭಟನೆ ಶಾಂತಿಯುತವಾಗಿಲ್ಲ ಹಾಗೂ ಎಲ್ಲಾ ಷರತ್ತುಗಳನ್ನು ಉಲ್ಲಂಘಿಸಿದೆ ಎಂದು ಬಾಂಬೆ ಹೈಕೋರ್ಟ್ ಸೋಮವಾರ ಆಕ್ರೋಶ ವ್ಯಕ್ತಪಡಿಸಿದೆ.

ಮುಂಬೈನಲ್ಲಿ ಸಾಮಾನ್ಯ ಸ್ಥಿತಿ ಮರಳಬೇಕೆಂದ ಹೈಕೋರ್ಟ್, ಮಂಗಳವಾರ ಮಧ್ಯಾಹ್ನದೊಳಗೆ ಪರಿಸ್ಥಿತಿಯನ್ನು ಸರಿಪಡಿಸಬೇಕು ಮತ್ತು ನಗರದ ಎಲ್ಲಾ ಬೀದಿಗಳನ್ನು ಖಾಲಿ ಮಾಡುವಂತೆ ಜಾರಂಗೆ ಹಾಗೂ ಅವರ ಬೆಂಬಲಿಗರಿಗೆ ಆದೇಶಿಸಿದೆ.

ಇತರ ಹಿಂದುಳಿದ ವರ್ಗಗಳ(ಒಬಿಸಿ) ಅಡಿಯಲ್ಲಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠಾ ಸಮುದಾಯಕ್ಕೆ ಶೇಕಡಾ 10 ರಷ್ಟು ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಜಾರಂಗೆ ಅವರು ಕಳೆದ ಶುಕ್ರವಾರದಿಂದ ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಸೋಮವಾರದಿಂದ ಜಾರಂಗೆ ಅವರು ನೀರು ಕುಡಿಯುವುದನ್ನೂ ನಿಲ್ಲಿಸಿದ್ದಾರೆ ಎಂದು ಅವರ ಬೆಂಬಲಿಗರು ಹೇಳಿದ್ದಾರೆ.

ವಿಶೇಷ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳಾದ ರವೀಂದ್ರ ಘುಗೆ ಮತ್ತು ಗೌತಮ್ ಅಂಕದ್ ಅವರ ಪೀಠವು, ಪ್ರತಿಭಟನಾಕಾರರು ಗೊತ್ತುಪಡಿಸಿದ ಸ್ಥಳವಾದ ಆಜಾದ್ ಮೈದಾನದಲ್ಲೇ ಧರಣಿ ನಡೆಸಬೇಕು. ನಗರದ ಎಲ್ಲಾ ರಸ್ತೆಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಿದೆ.

ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್(ಸಿಎಸ್‌ಎಂಟಿ) ಮತ್ತು ಚರ್ಚ್‌ಗೇಟ್ ರೈಲು ನಿಲ್ದಾಣ, ಮರೀನ್ ಡ್ರೈವ್ ವಾಯುವಿಹಾರಿ ಮತ್ತು ಹೈಕೋರ್ಟ್ ಕಟ್ಟಡದಂತಹ ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದಾರೆ ಎಂದು ಕೋರ್ಟ್ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಚಿವ ಸ್ಥಾನ ಕಳೆದುಕೊಂಡರೂ ಡಿಸಿಸಿ ಬ್ಯಾಂಕ್​ ಚುನಾವಣೆಯಲ್ಲಿ ಸತತ 7ನೇ ಬಾರಿ ಕೆ.ಎನ್​​ ರಾಜಣ್ಣ ಗೆಲುವು

GST 2.0: ಶಾಂಪುವಿನಿಂದ ಸಣ್ಣ ಕಾರುಗಳವರೆಗೆ, ಯಾವುದು ಅಗ್ಗ ಮತ್ತು ದುಬಾರಿ?

ಕಾರ್ಪೊರೇಟ್ ತೆರಿಗೆ ಕಡಿತ: ಮೋದಿ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಅಮೆರಿಕ ವಿರುದ್ಧ ಪುಟಿನ್, ಕಿಮ್ ಪಿತೂರಿ: ಡೊನಾಲ್ಡ್ ಟ್ರಂಪ್

ನಮ್ಮ 'ಸಂಪ್ರದಾಯ'ಕ್ಕೆ ಧಕ್ಕೆ ಆಗದಂತೆ ದಸರಾ ಉದ್ಘಾಟಕರು ನಡೆದುಕೊಳ್ಳಲಿ: ವಿ. ಸೋಮಣ್ಣ

SCROLL FOR NEXT