ಮಹಿಳೆ ಕೊಲೆ ಮಾಡಿದ್ದ ಯುವಕನ ಬಂಧನ 
ದೇಶ

ಫಿಲ್ಟರ್ ಬಳಸಿ ಯಾಮಾರಿಸಿದ 52 ವರ್ಷದ ಮಹಿಳೆ: Instagram ನಲ್ಲಿ ಪರಿಚಯವಾದ ಯುವಕನಿಂದ ಕೊಲೆ

ತನಿಖೆಯ ವೇಳೆ ಇಬ್ಬರ ನಡುವಿನ ಸಂಭಾಷಣೆಗಳು, ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಮೆಸೆಜ್​ಗಳ ಪತ್ತೆಹಚ್ಚಿದ ನಂತರ ಆತನನ್ನು ಬಂಧಿಸಲಾಗಿದ್ದು, ಆರೋಪಿಯಿಂದ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ .

ಲಕ್ನೋ: ಆಗಸ್ಟ್ 11 ರಂದು ಪತ್ತೆಯಾಗಿದ್ದ ಅಪರಿಚಿತ ಮಹಿಳೆಯೊಬ್ಬರ ಕೊಲೆ ಪ್ರಕರಣವನ್ನು ಉತ್ತರ ಪ್ರದೇಶ ಪೊಲೀಸರು ಭೇದಿಸಿದ್ದಾರೆ. ಹತ್ಯೆಯಾದ ಮಹಿಳೆಯನ್ನು ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯ ನಿವಾಸಿ ರಾಣಿ (52) ಎಂದು ಗುರುತಿಸಲಾಗಿದೆ.

ರಾಣಿಯನ್ನು ಆಕೆಯ ಪ್ರೇಮಿ ಮೈನ್‌ಪುರಿ ನಿವಾಸಿ ಅರುಣ್ ರಜಪೂತ್ (26) ಸ್ಕಾರ್ಫ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್​​ ಮೂಲಗಳು ತಿಳಿಸಿವೆ. ತನಿಖೆಯ ವೇಳೆ ಇಬ್ಬರ ನಡುವಿನ ಸಂಭಾಷಣೆಗಳು, ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಮೆಸೆಜ್​ಗಳ ಪತ್ತೆಹಚ್ಚಿದ ನಂತರ ಆತನನ್ನು ಬಂಧಿಸಲಾಗಿದ್ದು, ಆರೋಪಿಯಿಂದ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಜಪೂತ್ ಮತ್ತು ರಾಣಿ ಸುಮಾರು ಒಂದೂವರೆ ವರ್ಷದ ಹಿಂದೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದರು, ಮಹಿಳೆ ತನ್ನ ವಯಸ್ಸನ್ನು ಮರೆಮಾಚಲು ಫಿಲ್ಟರ್‌ಗಳನ್ನು ಬಳಸಿದ್ದಾಳೆ ಎನ್ನಲಾಗಿದೆ, ಇದರಿಂದಾಗಿ ರಜಪೂತ್ ಅವಳನ್ನು ಚಿಕ್ಕವಳು ಎಂದು ಭಾವಿಸಿದ್ದಾನೆ. ಕ್ರಮೇಣ ಅವರಿಬ್ಬರ ನಡುವೆ ಪ್ರೀತಿ ಚಿಗುರಿದ್ದು, ಇಬ್ಬರೂ ಭೇಟಿಯಾಗಲು ಪ್ರಾರಂಭಿಸಿದರು. ನಾಲ್ಕು ಮಕ್ಕಳನ್ನು ಹೊಂದಿದ್ದ ರಾಣಿ, ರಜಪೂತ್‌ಗೆ ಸುಮಾರು 1.5 ಲಕ್ಷ ರೂ.ಗಳನ್ನು ನೀಡಿದ್ದಳು ಎಂದು ಪೊಲೀಸ್​​ ಮೂಲಗಳು ತಿಳಿಸಿವೆ.

ಮಹಿಳೆ ಸ್ವಲ್ಪ ದಿನದ ನಂತರ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರಿ, ತನ್ನ ಹಣವನ್ನು ಹಿಂತಿರುಗಿಸುವಂತೆ ಪೀಡಿಸುತ್ತಾಳೆ, ಆಗಸ್ಟ್ 10 ರಂದು, ಅರುಣ್ ಅವಳನ್ನು ಮೈನ್‌ಪುರಿಗೆ ಕರೆಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಘಟನೆ ನಡೆದ ಸ್ವಲ್ಪ ದಿನಗಳ ಕಾಲ ಶವದ ಗುರುತು ಪತ್ತೆಯಾಗಿರಲಿಲ್ಲ, ಪೊಲೀಸರು ಹತ್ತಿರದ ಜಿಲ್ಲೆಗಳಲ್ಲಿ ಆ ಮಹಿಳೆಯ ಭಾವಚಿತ್ರಗಳನ್ನು ಅಲ್ಲಲ್ಲಿ ಅಂಟಿಸುತ್ತಾರೆ, ಫರೂಕಾಬಾದ್‌ನಲ್ಲಿ ದಾಖಲಾಗಿದ್ದ ನಾಪತ್ತೆ ದೂರಿನೊಂದಿಗೆ ವಿವರಗಳನ್ನು ಹೋಲಿಕೆ ಮಾಡಿ ನೋಡಿದಾಗ ಆಕೆ ರಾಣಿ ಎನ್ನುವುದು ದೃಢಪಟ್ಟಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಯುದ್ಧದ ಕುರಿತು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಮೋದಿ ಮಹತ್ವದ ಮಾತುಕತೆ

ಗುಜರಾತ್: ರಾಹುಲ್ ಗಾಂಧಿ ಪರ ವಕಾಲತ್ತು ವಹಿಸಿದ್ದ ವಕೀಲ ಫಿರೋಜ್ ಪಠಾಣ್ ಮೃತದೇಹ ತಾಪಿ ನದಿಯ ದಡದಲ್ಲಿ ಪತ್ತೆ!

ಭಾರತಕ್ಕೆ ಉತ್ತಮ ವಿರೋಧಪಕ್ಷಕ್ಕಾಗಿ ಅಭಿಯಾನ ಅಗತ್ಯ: ಸೀತಾರಾಮನ್

ಧರ್ಮಸ್ಥಳ ಬುರುಡೆ ರಹಸ್ಯ ಬಹಿರಂಗ: ಮುಸುಕುಧಾರಿಗೆ 'ಬುರುಡೆ' ಕೊಟ್ಟಿದ್ದು ಸೌಜನ್ಯ ಮಾವ!

ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ; ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ಅನುಷ್ಠಾನ

SCROLL FOR NEXT