ಅಬ್ಬಾಸ್ ಅನ್ಸಾರಿ 
ದೇಶ

ದ್ವೇಷ ಭಾಷಣ ಪ್ರಕರಣ: ಅನ್ಸಾರಿ ಶಿಕ್ಷೆ ಅಮಾನತುಗೊಳಿಸಿದ ಹೈಕೋರ್ಟ್; ಶಾಸಕತ್ವ ಪುನಃಸ್ಥಾಪನೆ

ಅಬ್ಬಾಸ್ 2022ರ ವಿಧಾನಸಭಾ ಚುನಾವಣೆಯಲ್ಲಿ ಮೌ ಸದರ್ ಕ್ಷೇತ್ರದಿಂದ ಒಪಿ ರಾಜ್‌ಭರ್ ನೇತೃತ್ವದ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ(ಎಸ್‌ಬಿಎಸ್‌ಪಿ)ದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು.

ಲಖನೌ: 2022ರ ದ್ವೇಷ ಭಾಷಣ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್, ಅಬ್ಬಾಸ್ ಅನ್ಸಾರಿ ಅವರ ಶಿಕ್ಷೆಯನ್ನು ಅಮಾನತುಗೊಳಿಸಿದ ಸುಮಾರು 18 ದಿನಗಳ ನಂತರ, ಅವರ ಉತ್ತರ ಪ್ರದೇಶ ವಿಧಾನಸಭಾ ಸದಸ್ಯತ್ವವನ್ನು ಸೋಮವಾರ ಪುನಃಸ್ಥಾಪಿಸಲಾಗಿದೆ.

ಅಬ್ಬಾಸ್ 2022ರ ವಿಧಾನಸಭಾ ಚುನಾವಣೆಯಲ್ಲಿ ಮೌ ಸದರ್ ಕ್ಷೇತ್ರದಿಂದ ಒಪಿ ರಾಜ್‌ಭರ್ ನೇತೃತ್ವದ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ(ಎಸ್‌ಬಿಎಸ್‌ಪಿ)ದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಅದು ಆಗ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತ್ತು.

ರಾಜ್ಯ ವಿಧಾನಸಭೆಯಲ್ಲಿ ಅಬ್ಬಾಸ್ ಅನ್ಸಾರಿ ಅವರ ಶಾಸಕತ್ವವನ್ನು ಪುನಃಸ್ಥಾಪಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.

ಸೋಮವಾರ ಸಂಜೆ ಹೊರಡಿಸಿದ ಆದೇಶದಲ್ಲಿ, ಅಬ್ಬಾಸ್ ಅವರ ಶಿಕ್ಷೆಯನ್ನು ಹೈಕೋರ್ಟ್ ಅಮಾನತುಗೊಳಿಸಿರುವುದರಿಂದ ಅವರ ಸದಸ್ಯತ್ವವನ್ನು ಪುನಃಸ್ಥಾಪಿಸಲಾಗಿದೆ ಎಂದು ಉತ್ತರ ಪ್ರದೇಶ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ದುಬೆ ಅವರು ತಿಳಿಸಿದ್ದಾರೆ.

ಸಂವಿಧಾನದ 191ನೇ ವಿಧಿಯಡಿಯಲ್ಲಿ ಮತ್ತು 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8ರ ಅಡಿಯಲ್ಲಿ ಅವರ ಸದಸ್ಯತ್ವ ರದ್ದತಿ "ಪರಿಣಾಮಕಾರಿಯಲ್ಲ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮೂರು ವರ್ಷಗಳ ಹಿಂದಿನ ದ್ವೇಷ ಭಾಷಣ ಪ್ರಕರಣದಲ್ಲಿ ಕಳೆದ ಮೇ ತಿಂಗಳಲ್ಲಿ ಅಬ್ಬಾಸ್ ಅವರಿಗೆ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿತ್ತು. ನಂತರ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿಲಾಗಿತ್ತು.

ಬಳಿಕ ಅಬ್ಬಾಸ್ ಅವರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಅಬ್ಬಾಸ್ ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಅವರ ಶಿಕ್ಷೆಯನ್ನು ಅಮಾನತುಗೊಳಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಕಿನಾಡಿಗೆ ಅಪ್ಪಳಿಸಿದ Cyclone Montha: 3-4 ಗಂಟೆಗಳ ಕಾಲ ಭಾರಿ ಮಳೆ; ಗಂಟೆಗೆ 110 ಕಿ.ಮೀ ವೇಗ!

ಇಂಡಿಯಾ ಬ್ಲಾಕ್ ಪ್ರಣಾಳಿಕೆ 'ಬಿಹಾರ್ ಕಾ ತೇಜಸ್ವಿ ಪ್ರಾಣ್' ಬಿಡುಗಡೆ; ಪ್ರತಿ ಕುಟುಂಬಕ್ಕೂ ಸರ್ಕಾರಿ ನೌಕರಿ ಭರವಸೆ!

ಕೇಂದ್ರ ಚುನಾವಣಾ ಆಯುಕ್ತರು ರಾಜಕೀಯ ಪುಢಾರಿ: ನಾಲಿಗೆ ಹರಿಬಿಟ್ಟ ಯತೀಂದ್ರ ಸಿದ್ದರಾಮಯ್ಯ

Video: Melissa ಚಂಡಮಾರುತದ ಒಳಗೇ ನುಗ್ಗಿದ ಅಮೆರಿಕ ವಾಯುಪಡೆ ವಿಮಾನ; ಮುಂದೇನಾಯ್ತು..? ಒಳಗೇನಿತ್ತು?

ಹೊಟ್ಟೆ ತುಂಬಾ ತಿಂದು 11 ಸಾವಿರ ಬಿಲ್ ಮಾಡಿ ಪರಾರಿ; ಬೆನ್ನಟ್ಟಿ ಮಹಿಳೆಯರ ಹಿಡಿದ ಹೊಟೆಲ್ ಮಾಲೀಕ! Video

SCROLL FOR NEXT