ಮಾರಿಷಸ್ ಪ್ರಧಾನಿ ಜತೆ ಪ್ರಧಾನಿ ಮೋದಿ 
ದೇಶ

ನಾಳೆ ವಾರಣಾಸಿಯಲ್ಲಿ ಮಾರಿಷಸ್ ಪ್ರಧಾನಿ ಜತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಸಭೆ

ವಾರಣಾಸಿಯಲ್ಲಿ ತಮ್ಮ ಕಾರ್ಯಕ್ರಮಗಳ ನಂತರ, ಪ್ರಧಾನಿ ಮೋದಿ ಅವರು ಡೆಹ್ರಾಡೂನ್‌ಗೆ ತೆರಳಲಿದ್ದಾರೆ.

ನವದೆಹಲಿ: ಸೆಪ್ಟೆಂಬರ್ 9 ರಿಂದ 16 ರವರೆಗೆ ಭಾರತ ಪ್ರವಾಸದಲ್ಲಿರುವ ಮಾರಿಷಸ್ ಪ್ರಧಾನಿ ಡಾ. ನವೀನ್ ಚಂದ್ರ ರಾಮಗೂಲಂ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರ ಮತ್ತು ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯದ ನೆಲೆಯಾದ ವಾರಣಾಸಿಯಲ್ಲಿ ಹಾಗೂ ಇತರ ಸಾಂಸ್ಕೃತಿಕ ಮತ್ತು ಧಾರ್ಮಿಕ ತಾಣಗಳಲ್ಲಿ ಆತಿಥ್ಯ ವಹಿಸಲಿದ್ದಾರೆ.

ವಾರಣಾಸಿಯಲ್ಲಿ ತಮ್ಮ ಕಾರ್ಯಕ್ರಮಗಳ ನಂತರ, ಪ್ರಧಾನಿ ಮೋದಿ ಅವರು ಡೆಹ್ರಾಡೂನ್‌ಗೆ ತೆರಳಲಿದ್ದಾರೆ. ಅಲ್ಲಿ ಅವರು ಉತ್ತರಾಖಂಡದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ನಂತರ ಡೆಹ್ರಾಡೂನ್‌ನಲ್ಲಿ ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಪ್ರಧಾನಿಮಂತ್ರಿಗಳ ಕಚೇರಿ ತಿಳಿಸಿದೆ.

ಪಿಎಂಒ ಹೇಳಿಕೆಯ ಪ್ರಕಾರ, ಐತಿಹಾಸಿಕ ನಗರವಾದ ವಾರಣಾಸಿಯಲ್ಲಿ ಪ್ರಧಾನಿ ಮೋದಿ ಅವರು ಮಾರಿಷಸ್ ಪ್ರಧಾನಿ ರಾಮಗೂಲಂ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

"ದ್ವಿಪಕ್ಷೀಯ ಸಭೆಯಲ್ಲಿ , ಉಭಯ ನಾಯಕರು ಅಭಿವೃದ್ಧಿ ಪಾಲುದಾರಿಕೆ ಮತ್ತು ಸಾಮರ್ಥ್ಯ ವೃದ್ಧಿಯ ಮೇಲೆ ನಿರ್ದಿಷ್ಟವಾಗಿ ಗಮನಹರಿಸಿ, ಸಹಕಾರದ ಸಂಪೂರ್ಣ ವರ್ಣಪಟಲವನ್ನು ಪರಿಶೀಲಿಸಲಿದ್ದಾರೆ" ಎಂದು ಪಿಎಂಒ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಆರೋಗ್ಯ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಇಂಧನ, ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ನೀಲಿ ಆರ್ಥಿಕತೆಯಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಹಯೋಗವನ್ನು ವಿಸ್ತರಿಸುವ ಅವಕಾಶಗಳ ಕುರಿತು ಇಬ್ಬರೂ ನಾಯಕರು ಚರ್ಚಿಸಲಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರೋಚಕ ಘಟ್ಟ ತಲುಪಿದ 'ಸಿಎಂ ಬದಲಾವಣೆ' ಚರ್ಚೆ: ಡಿಕೆಶಿ ಪರ ಶಾಸಕರು ದಿಢೀರ್ ದೆಹಲಿ ಯಾತ್ರೆ; ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನಕ್ಕೆ ಸಜ್ಜು!

Delhi Blast: ಮತ್ತೆ 4 ಪ್ರಮುಖ ಆರೋಪಿಗಳ ಬಂಧನ, ಬಂಧಿತರ ಸಂಖ್ಯೆ 6 ಕ್ಕೇರಿಕೆ

Vaikunta Ekadasi: ತಿರುಮಲ ವೈಕುಂಠ ದ್ವಾರ ದರ್ಶನ ಕುರಿತು TTD ಮಹತ್ವದ ಮಾಹಿತಿ, ಆನ್​ಲೈನ್​ನಲ್ಲಿ ಮಾತ್ರ ಟಿಕೆಟ್ ಲಭ್ಯ!

Jammu: ದೇಶ ವಿರೋಧಿ ಚಟುವಟಿಕೆ ಆರೋಪ, 'ಕಾಶ್ಮೀರ್ ಟೈಮ್ಸ್' ಕಚೇರಿ ಮೇಲೆ ದಾಳಿ; AK-47 ಕಾರ್ಟ್ರಿಡ್ಜ್‌ಗಳು ಪತ್ತೆ!

ವಾಹನ ಸವಾರರಿಗೆ ಗುಡ್ ನ್ಯೂಸ್: ಮತ್ತೆ ಶೇ.50ರಷ್ಟು ಟ್ರಾಫಿಕ್ ದಂಡ ರಿಯಾಯಿತಿ ಘೋಷಣೆ, ಯಾವಾಗಿಂದ ಗೊತ್ತಾ?

SCROLL FOR NEXT