ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಭಾರತೀಯ ನಾಗರಿಕರಾಗುವ ಮೂರು ವರ್ಷಗಳ ಮೊದಲು ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.
ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವೈಭವ್ ಚೌರಾಸಿಯಾ ಅವರು ವಿಕಾಸ್ ತ್ರಿಪಾಠಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಸೆಪ್ಟೆಂಬರ್ 10 ರಂದು, ದೂರುದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಪವನ್ ನಾರಂಗ್, 1980ರ ಜನವರಿಯಲ್ಲಿ ಸೋನಿಯಾ ಗಾಂಧಿಯವರು ಭಾರತೀಯ ಪೌರತ್ವ ಪಡೆಯದಿದ್ದರೂ ಅವರ ಹೆಸರನ್ನು ನವದೆಹಲಿ ಕ್ಷೇತ್ರದ ಮತದಾರರಾಗಿ ಸೇರಿಸಿದ್ದಾರೆ ಎಂದು ವಾದಿಸಿದರು.
'ಮೊದಲು, ನೀವು ಪೌರತ್ವ ಪಡೆದುಕೊಳ್ಳಬೇಕು, ನಂತರ ನೀವು ಒಂದು ಪ್ರದೇಶದ ನಿವಾಸಿಯಾಗುತ್ತೀರಿ. 1980 ರಲ್ಲಿ, ನಿವಾಸದ ಪುರಾವೆ ಬಹುಶಃ ಪಡಿತರ ಚೀಟಿ ಮತ್ತು ಪಾಸ್‌ಪೋರ್ಟ್ ಆಗಿರಬಹುದು' ಎಂದು ಅವರು ಹೇಳಿದರು.
ಸೋನಿಯಾ ಗಾಂಧಿಯವರ ಹೆಸರನ್ನು 1980 ರಲ್ಲಿ ನವದೆಹಲಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಅದನ್ನು 1982 ರಲ್ಲಿ ಅಳಿಸಲಾಗಿತ್ತು ಮತ್ತು ಅವರು ಭಾರತೀಯ ಪೌರತ್ವವನ್ನು ಪಡೆದ ನಂತರ 1983ರಲ್ಲಿ ಮತ್ತೆ ಅವರ ಹೆಸರನ್ನು ಸೇರಿಸಲಾಯಿತು ಎಂದು ನಾರಂಗ್ ಹೇಳಿದರು.