ಪ್ರಧಾನಿ ಮೋದಿ, ಪ್ರತಿಭಟನೆಯ ಸಾಂದರ್ಭಿಕ ಚಿತ್ರ 
ದೇಶ

Imphal: ಪ್ರಧಾನಿ ಮೋದಿ ಕಾರ್ಯಕ್ರಮ ಸ್ಥಳದ ಬಳಿ ಕಾಂಗ್ರೆಸ್, MPP ಪ್ರತಿಭಟನೆ; ನಿಮ್ಮ ರಾಜಧರ್ಮ ಎಲ್ಲಿದೆ? ಖರ್ಗೆ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿಯವರ ಮಣಿಪುರ ಭೇಟಿಯನ್ನು"ಪಿಟ್ ಸ್ಟಾಪ್" ಎಂದು ಕರೆದಿರುವ ಕಾಂಗ್ರೆಸ್, ಈ ಪ್ರವಾಸವನ್ನು "ಟೋಕನಿಸಂ" ಮತ್ತು ರಾಜ್ಯದ ಜನರಿಗೆ ಮಾಡುವ "ಘೋರ ಅವಮಾನ" ಎಂದು ಆರೋಪಿಸಿದೆ.

ಇಂಪಾಲ್: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸವನ್ನು ವಿರೋಧಿಸಿ ಕಾಂಗ್ರೆಸ್ ಹಾಗೂ ಮಣಿಪುರ ಪೀಪಲ್ಸ್ ಪಾರ್ಟಿ (MPP) ಯುವ ಘಟಕಗಳ ಕಾರ್ಯಕರ್ತರು ಶನಿವಾರ ಪ್ರಧಾನಿ ಕಾರ್ಯಕ್ರಮ ನಡೆಯುತ್ತಿರುವ ಕಾಂಗ್ಲಾ ಕೋಟೆ ಸಮೀಪದಲ್ಲಿ ಬಳಿ ಪ್ರತಿಭಟನೆ ನಡೆಸಿದರು. ಇದನ್ನು "ರಾಜಕೀಯ ಕುತಂತ್ರ" ಎಂದು ಕರೆದರು.

ಭಿತ್ತಪತ್ರ ಹಿಡಿದು ಪ್ರಧಾನಿ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಶಾಂತಿ ಮತ್ತು ಸಹಜ ಪರಿಸ್ಥಿತಿಯನ್ನು ಪುನರ್ ಸ್ಥಾಪಿಸುವ ಉದ್ದೇಶದಿಂದ ಪ್ರಧಾನಿ ಭೇಟಿ ನೀಡಿಲ್ಲ ಎಂದು ಆರೋಪಿಸಿದರು. ಪ್ರಧಾನಿ ಕಾರ್ಯಕ್ರಮದ ಸ್ಥಳಕ್ಕೆ ಪ್ರತಿಭಟನಾಕಾರರು ತೆರಳದಂತೆ ಪೊಲೀಸ್ ಸಿಬ್ಬಂದಿ ತಡೆದರು.

ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರ ಮಣಿಪುರ ಭೇಟಿಯನ್ನು"ಪಿಟ್ ಸ್ಟಾಪ್" ಎಂದು ಕರೆದಿರುವ ಕಾಂಗ್ರೆಸ್, ಈ ಪ್ರವಾಸವನ್ನು "ಟೋಕನಿಸಂ" ಮತ್ತು ರಾಜ್ಯದ ಜನರಿಗೆ ಮಾಡುವ "ಘೋರ ಅವಮಾನ" ಎಂದು ಆರೋಪಿಸಿದೆ.

ಮೋದಿಗಾಗಿ ಅದ್ಧೂರಿ ಸ್ವಾಗತ ಸಮಾರಂಭವನ್ನು ಆಯೋಜಿಸಿದ್ದಾರೆ. ಇದು ಗಾಯಗಳಿಂದ ಇನ್ನೂ ನರಳುತ್ತಿರುವವರಿಗೆ "ಕ್ರೂರ ಮುಳ್ಳು" ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದ್ದಾರೆ. "ನಿಮ್ಮದೇ ಮಾತಿನಲ್ಲಿ ಹೇಳುವುದಾದರೆ ನಿಮ್ಮ ರಾಜಧರ್ಮ ಎಲ್ಲಿದೆ? ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮೋದಿ ಅವರನ್ನು ಖರ್ಗೆ ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿ ಅವರೇ, ನಿಮ್ಮ ಮೂರು ಗಂಟೆಗಳ ಮಣಿಪುರ ಪಿಟ್ ಸ್ಟಾಪ್, ಇದು ಪರಿಹಾರವಲ್ಲ. ಇದು ಟೋಕನಿಸಂ ಮತ್ತು ಗಾಯಾಳು ಜನರಿಗೆ ಮಾಡುವ ಅವಮಾನವಾಗಿದೆ. ನಿಮ್ಮ ಸೋಕಾಲ್ಡ್ ರೋಡ್ ಶೋ ನಿರಾಶ್ರಿತರ ಶಿಬಿರಗಳಿಂದ ಜನರ ಸಂಕಷ್ಟ ಕೇಳುವ ಬದಲು ಹೇಡಿತನದಿಂದ ಪರಾರಿಯಾಗುವುದಾಗಿದೆ. 864 ದಿನಗಳ ಹಿಂಸಾಚಾರದಲ್ಲಿ 300 ಜನರು ಸಾವನ್ನಪ್ಪಿದ್ದಾರೆ. 67,000 ಜನರು ನಿರಾಶ್ರಿತರಾಗಿದ್ದು, 1,500 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆಗಿನಿಂದಲೂ ನೀವು 46 ವಿದೇಶಿ ಪ್ರವಾಸ ಮಾಡಿದ್ದೀರಿ, ಆದರೆ ಆದರೆ ನಿಮ್ಮ ಸ್ವಂತ ಜನರೊಂದಿಗೆ ಸಹಾನುಭೂತಿಯ ಎರಡು ಪದಗಳನ್ನು ಹಂಚಿಕೊಳ್ಳಲು ಒಂದೇ ಒಂದು ಬಾರಿಯೂ ಭೇಟಿ ನೀಡಿಲ್ಲ ಎಂದು ಖರ್ಗೆ ಅವರು ಟೀಕಾ ಪ್ರಹಾರ ನಡೆಸಿದ್ದಾರೆ.

2022 ಜನವರಿಯಲ್ಲಿ ಚುನಾವಣೆಗಾಗಿ ಕೊನೆಯದಾಗಿ ಮಣಿಪುರಕ್ಕೆ ಭೇಟಿ ನೀಡಿದ್ರಿ. ನಿಮ್ಮ ಡಬಲ್ ಎಂಜಿನ್ ಸರ್ಕಾರ ಮಣಿಪುರದ ಅಮಾಯಕ ಜನರ ಜೀವನವನ್ನು ನಾಶಮಾಡಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಮೂಲಕ ಎಲ್ಲಾ ಸಮುದಾಯಗಳಿಗೆ ದ್ರೋಹ ಬಗೆದಿದ್ದೀರಿ. ಹಿಂಸಾಚಾರ ಇನ್ನೂ ಮುಂದುವರೆದಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಲು ಬಿಜೆಪಿಯೇ ಕಾರಣವಾಗಿದೆ ಎಂದು ಖರ್ಗೆ ಆರೋಪಿಸಿದ್ದಾರೆ.

ಮತ್ತೊಂದೆಡೆ ವೈನಾಡಿನಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಎರಡು ವರ್ಷಗಳ ನಂತರ ಮಣಿಪುರಕ್ಕೆ ಭೇಟಿ ನೀಡಿರುವ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ಭೇಟಿಗೆ ಅವಕಾಶ ನೀಡಿರುವುದು ಅತ್ಯಂತ ದುರಾದೃಷ್ಟಕರ ಎಂದಿದ್ದಾರೆ. ಕಾಂಗ್ರೆಸ್ ಪ್ರಧಾನಿ ಕೆಸಿ ವೇಣುಗೋಪಾಲ್ ಕೂಡಾ ಪ್ರಧಾನಿ ಭೇಟಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕದಂತೆ ಹರ್ಯಾಣ ಚುನಾವಣೆಯಲ್ಲೂ ಮತಕಳ್ಳತನ: ಬಿಹಾರ ಎಲೆಕ್ಷನ್ ಹೊತ್ತಲ್ಲಿ ರಾಹುಲ್ ಗಾಂಧಿ ಗಂಭೀರ ಆರೋಪ; Video

ನ್ಯೂಯಾರ್ಕ್ ಅಂಗಳದಲ್ಲಿ ನಿಂತು Nehru ಮಾತು ಉಲ್ಲೇಖ; ಟ್ರಂಪ್​ಗೆ ಎಚ್ಚರಿಕೆ ಕೊಟ್ಟ ಜೊಹ್ರಾನ್ ಮಮ್ದಾನಿ: Video

ಯಾರಿದು ರಮಾ ದುವಾಜಿ? ಐತಿಹಾಸಿಕ NYC ಮೇಯರ್ ಚುನಾವಣೆಯ ಕೇಂದ್ರ ಬಿಂದು, ಪ್ಯಾಲೆಸ್ಟೈನ್ ಪರ ನಿಲುವು, ಕಲಾವಿದೆ!

ಮುಂಬೈ: ಪರೀಕ್ಷಾರ್ಥ ಸಂಚಾರದ ವೇಳೆ ವಾಲಿದ ಮೋನೋರೈಲು; ತಪ್ಪಿದ ಅನಾಹುತ

Bihar Election 2025: 5 ವರ್ಷದ ಬಳಿಕ ಮತ ಕೇಳಲು ಬಂದ ಶಾಸಕನ ಚಳಿ ಬಿಡಿಸಿದ ಮತದಾರರು, ಕಾರ್ ಮೇಲೆ ಹತ್ತಿ ಹಲ್ಲೆ! Video

SCROLL FOR NEXT