ಪಹಲ್ಗಾಮ್ ದಾಳಿ ನಂತರದ ದೃಶ್ಯ 
ದೇಶ

'ಭಾರತ V/S ಪಾಕಿಸ್ತಾನ ಆಡುವುದಾದರೆ ಆಪರೇಷನ್ ಸಿಂದೂರ್ ವ್ಯರ್ಥ': ಪಹಲ್ಗಾಮ್ ಬಲಿಪಶುಗಳ ಕುಟುಂಬಸ್ಥರ ಅಳಲು

ಪಹಲ್ಗಾಮ್ ದಾಳಿಗೆ ಬಲಿಯಾದವರ ಕುಟುಂಬ ಸದಸ್ಯರು ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ ಬಗ್ಗೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಪಹಲ್ಗಾಮ್ ದಾಳಿಗೆ ಬಲಿಯಾದವರ ಕುಟುಂಬ ಸದಸ್ಯರು ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ ಬಗ್ಗೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಪಹಲ್ಗಾಮ್ ದಾಳಿಯಲ್ಲಿ ತಂದೆ, ಪತಿ, ಸಹೋದರನನ್ನು ಕಳೆದುಕೊಂಡವರು ತಮ್ಮ ಪರಿಸ್ಥಿತಿಗೆ ಹಳಿಯುತ್ತಾ, ಸರ್ಕಾರದ ಆಪರೇಷನ್ ಸಿಂದೂರ ವ್ಯರ್ಥ ಪ್ರಯತ್ನ ಎಂದು ಹೇಳಿದ್ದಾರೆ.

ಭಾರತ vs ಪಾಕಿಸ್ತಾನ ಪಂದ್ಯವನ್ನು ಆಯೋಜಿಸಲಾಗುತ್ತಿದೆ ಎಂದು ನಮಗೆ ತಿಳಿದಾಗ, ನಮಗೆ ತುಂಬಾ ದುಃಖವಾಯಿತು. ಭಾರತ ಪಾಕಿಸ್ತಾನದೊಂದಿಗೆ ಯಾವುದೇ ರೀತಿಯ ಸಂಪರ್ಕ ಉಳಿಸಿಕೊಳ್ಳಬಾರದು. ನೀವು ಪಂದ್ಯವನ್ನು ಆಡಲು ಬಯಸಿದರೆ, ಭಯೋತ್ಪಾದಕರ ಗುಂಡಿಗೆ ಬಲಿಯಾದ 16 ವರ್ಷದ ನನ್ನ ಸೋದರ ಮರಳಿ ಬರುತ್ತಾನೆಯೇ, ಆಪರೇಷನ್ ಸಿಂದೂರ್ ಈಗ ವ್ಯರ್ಥವಾಗಿದೆ ಎಂದು ತೋರುತ್ತದೆ ಸಾವನ್ ಪರ್ಮರ್ ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು.

ಆಪರೇಷನ್ ಸಿಂದೂರ್ ಇನ್ನೂ ಮುಗಿಯದಿದ್ದರೆ ಪಂದ್ಯವನ್ನು ಏಕೆ ನಡೆಸಲಾಗುತ್ತಿದೆ ಎಂದು ಅವರ ತಾಯಿ ಕಿರಣ್ ಯತೀಶ್ ಪರ್ಮಾರ್ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ. ತಮ್ಮವರನ್ನು ಕಳೆದುಕೊಂಡವರ ಗಾಯ ಇನ್ನೂ ವಾಸಿಯಾಗಿಲ್ಲ ಎನ್ನುತ್ತಾರೆ ಅವರು.

ಈ ಪಂದ್ಯ ನಡೆಯಬಾರದು. ನಾನು ಪ್ರಧಾನಿ ಮೋದಿಯವರನ್ನು ಕೇಳಲು ಬಯಸುತ್ತೇನೆ, ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ, ಹಾಗಾದರೆ ಈ ಭಾರತ vs ಪಾಕಿಸ್ತಾನ ಪಂದ್ಯ ಏಕೆ ನಡೆಯುತ್ತಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳನ್ನು ಭೇಟಿ ಮಾಡಲು ಮತ್ತು ಅವರು ಎಷ್ಟು ದುಃಖಿತರಾಗಿದ್ದಾರೆಂದು ನೋಡಲು ದೇಶದ ಪ್ರತಿಯೊಬ್ಬರೂ ಹೋಗಲು ನಾನು ಬಯಸುತ್ತೇನೆ. ನಮ್ಮ ನೋವಿನ ಗಾಯಗಳು ವಾಸಿಯಾಗಿಲ್ಲ ಎನ್ನುತ್ತಾರೆ ಅವರು.

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು 26 ಪ್ರವಾಸಿಗರನ್ನು ಕೊಂದು ಹಾಕಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Assam: ಕಾಂಗ್ರೆಸ್ ನಿಂದ ಪಾಕ್ ಉಗ್ರರಿಗೆ ಬೆಂಬಲ, ನುಸುಳುಕೋರರ ರಕ್ಷಣೆ: ಪ್ರಧಾನಿ ಮೋದಿ ಆರೋಪ! Video

ಸೀಟು ಹಂಚಿಕೆಗೂ ಮುನ್ನ ಬಿಹಾರದಲ್ಲಿ ಇಂಡಿ ಕೂಟಕ್ಕೆ ಏನಾಯ್ತು: ಎಲ್ಲಾ 243 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುವುದಾಗಿ ಹೇಳಿದ ತೇಜಸ್ವಿ!

J-K terrorists shift: ಸ್ಥಳೀಯರಿಂದ ಸಿಗದ ಬೆಂಬಲ, ಅರಣ್ಯ 'ಬಂಕರ್' ಗಳಿಗೆ ಉಗ್ರರ ಸ್ಥಳಾಂತರ! ಭಾರತೀಯ ಸೇನೆಗೆ ಹೊಸ ಸವಾಲು

'ಅಧಿಕಾರದ ಆಸೆಯಿಂದ ಬಂದಿಲ್ಲ.. 6 ತಿಂಗಳಿಗಿಂತ ಹೆಚ್ಚು ದಿನ ಇರಲ್ಲ': ನೇಪಾಳ ನೂತನ ಪ್ರಧಾನಿ Sushila Karki

ರಾಹುಲ್ ವಿರುದ್ಧ 'ಕಿರುಚುವ' ಬದಲು ತನಿಖೆಗೆ ಆದೇಶಿಸಬೇಕಿತ್ತು: 'ಮತ ಕಳ್ಳತನ' ಆರೋಪದ ಬಗ್ಗೆ ಮಾಜಿ ಸಿಇಸಿ

SCROLL FOR NEXT