ಪರಿಕ್ಕರ್ ಹಾಗೂ ಅಜಿತ್ ಪವಾರ್ ಸಾಂದರ್ಭಿಕ ಚಿತ್ರ 
ದೇಶ

ಪುಣೆ: 'ಪರಿಕ್ಕರ್ ಯಾರು?' ಮಹಾರಾಷ್ಟ್ರ DCM ಅಜಿತ್ ಪವಾರ್ ಗೆ ಗೋವಾದ ಮಾಜಿ ಸಿಎಂ ಬಗ್ಗೆ ಗೊತ್ತಿಲ್ಲವೇ!

ಈ ವೇಳೆ ಮಹಿಳೆಯೊಬ್ಬರು ಪವಾರ್ ಅವರನ್ನು ದಿವಂಗತ ಪರಿಕ್ಕರ್ ಅವರಂತೆ ಕೆಲಸ ಮಾಡುವಂತೆ ಮತ್ತು ಟ್ರಾಫಿಕ್ ಸಮಸ್ಯೆ ಸ್ವತಃ ಪರಿಶೀಲಿಸಲು ಅನಿರೀಕ್ಷಿತ ಭೇಟಿ ಕೈಗೊಳ್ಳುವಂತೆ ಕೇಳಿಕೊಂಡರು.

ಪುಣೆ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಶನಿವಾರ ಪುಣೆ ಮುನ್ಸಿಪಲ್ ಕಾರ್ಪೊರೇಷನ್ (PMC) ಮುಖ್ಯಸ್ಥ ನವಲ್ ಕಿಶೋರ್ ರಾಮ್ ಮತ್ತಿತರ ಅಧಿಕಾರಿಗಳೊಂದಿಗೆ ನಗರದ ವಿವಿಧೆಡೆ ಭೇಟಿ ನೀಡಿ, ಸಾರ್ವಜನಿಕರ ಕುಂದು ಕೊರತೆ ಆಲಿಸಿದರು. ಹಡಪ್ಸರ್ ವಿಧಾನಸಭಾ ಕ್ಷೇತ್ರದ ಕೇಶವ್ ನಗರಕ್ಕೆ ಭೇಟಿ ನೀಡಿದಾಗ, ಸಂಚಾರ ದಟ್ಟಣೆ ಮತ್ತಿತರ ಸಮಸ್ಯೆಗಳ ಬಗ್ಗೆ ಜನರು ದೂರು ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪವಾರ್, ಉತ್ತಮ ಮೂಲಸೌಕರ್ಯ ಬೇಡಿಕೆಗಳ ಬಗ್ಗೆ ಆಡಳಿತಕ್ಕೆ ಅರಿವಿದೆ ಎಂದು ಹೇಳಿದರು. ತಡವಾಗಿ ಬಂದಿದ್ದಕ್ಕಾಗಿ ಕ್ಷಮೆಯಾಚಿಸಿದ ಉಪ ಮುಖ್ಯಮಂತ್ರಿ, ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಈ ವೇಳೆ ಮಹಿಳೆಯೊಬ್ಬರು ಪವಾರ್ ಅವರನ್ನು ದಿವಂಗತ ಪರಿಕ್ಕರ್ ಅವರಂತೆ ಕೆಲಸ ಮಾಡುವಂತೆ ಮತ್ತು ಟ್ರಾಫಿಕ್ ಸಮಸ್ಯೆ ಸ್ವತಃ ಪರಿಶೀಲಿಸಲು ಅನಿರೀಕ್ಷಿತ ಭೇಟಿ ಕೈಗೊಳ್ಳುವಂತೆ ಕೇಳಿಕೊಂಡರು.

ಗೋವಾದಲ್ಲಿ ಪರಿಕ್ಕರ್ ಸಾಹೇಬ್ ದಿಢೀರ್ ಭೇಟಿ ನೀಡುತ್ತಿದ್ದಂತೆ ನೀವು ಅಥವಾ ಯಾರಾದಾರೊಬ್ಬರು ಟ್ರಾಫಿಕ್ ಫಿಕ್ ಅವರ್ ನಲ್ಲಿ ಭೇಟಿ ನೀಡಬೇಕು ಎಂದು ಆ ಮಹಿಳೆ ಹೇಳಿದ್ದಾರೆ. ಇದರಿಂದ ದಿಗ್ಭ್ರಮೆಗೊಂಡ ಪವಾರ್ ಅವರು 'ಯಾರು ಪರಿಕ್ಕರ್' ಎಂದು ಕೇಳುವ ಮೂಲಕ ಆಕೆಯ ಮಾತಿಗೆ ಅಡ್ಡಿಪಡಿಸಿದ್ದಾರೆ. ನಂತರ ಮಹಿಳೆ ಗೋವಾದ ದಿವಂಗತ ಬಿಜೆಪಿ ನಾಯಕನ ಬಗ್ಗೆ ಹೇಳುತ್ತಿರುವುದಾಗಿ ಹೇಳಿದರು.

ಆಗ ಉದ್ರೇಕ್ತಗೊಂಡಂತೆ ಕಂಡುಬಂದ ಮಹಿಳೆ, ಈ ಪ್ರದೇಶದ ಜನರು ಟ್ರಾಫಿಕ್ ಸಮಸ್ಯೆಯಿಂದ ತುಂಬಾ ಹತಾಶರಾಗಿದ್ದಾರೆ, ಅನೇಕರು ಬೇರೆಡೆಗೆ ಸ್ಥಳಾಂತರಿಸಲು ಯೋಚಿಸುತ್ತಿದ್ದಾರೆ ಎಂದು ಹೇಳಿದರು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆಯಿಂದ ಇಂಜಿನಿಯರಿಂಗ್ ಪದವಿ ಪಡೆದಿದ್ದ ಪರಿಕ್ಕರ್ ಮೂರು ಬಾರಿ ಗೋವಾದ ಮುಖ್ಯಮಂತ್ರಿಯಾಗಿದ್ದರು. ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಅಕ್ಟೋಬರ್ 2014 ಮತ್ತು ಮಾರ್ಚ್ 2017 ರ ನಡುವೆ ರಕ್ಷಣಾ ಸಚಿವರಾಗಿದ್ದರು. ಸರಳತೆಗೆ ಹೆಸರುವಾಸಿಯಾಗಿದ್ದ ಪರಿಕ್ಕರ್ ಅವರು ಜನರ ಸಮಸ್ಯೆಗಳನ್ನು ತಿಳಿಯಲು ಸ್ಕೂಟರ್ ನಲ್ಲಿ ಸುತ್ತಾಡುತ್ತಿದ್ದರು.

ಅವರು ಮಾರ್ಚ್ 17, 2019 ರಂದು ಕ್ಯಾನ್ಸರ್‌ನಿಂದ ನಿಧನರಾದರು. ಗೋವಾದ ಮೊಪಾದಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ಇನ್‌ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲೈಸಸ್ (IDSA) ಗೆ ಅವರ ಹೆಸರನ್ನು ಇಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಧನ್ಕರ್ ವಿಚಾರವಾಗಿ ಎಚ್ಚೆತ್ತ NDA: ನೂತನ ಉಪರಾಷ್ಟ್ರಪತಿಗಳ ಕಾರ್ಯದರ್ಶಿಯಾಗಿ ಪ್ರಧಾನಿ ಮೋದಿ ಸಲಹೆಗಾರ ಅಮಿತ್ ಖರೆ ನೇಮಕ!

Assam: ಕಾಂಗ್ರೆಸ್ ನಿಂದ ಪಾಕ್ ಉಗ್ರರಿಗೆ ಬೆಂಬಲ, ನುಸುಳುಕೋರರ ರಕ್ಷಣೆ: ಪ್ರಧಾನಿ ಮೋದಿ ಆರೋಪ! Video

ಸೀಟು ಹಂಚಿಕೆಗೂ ಮುನ್ನ ಬಿಹಾರದಲ್ಲಿ ಇಂಡಿ ಕೂಟಕ್ಕೆ ಏನಾಯ್ತು: ಎಲ್ಲಾ 243 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುವುದಾಗಿ ಹೇಳಿದ ತೇಜಸ್ವಿ!

J-K terrorists shift: ಸ್ಥಳೀಯರಿಂದ ಸಿಗದ ಬೆಂಬಲ, ಅರಣ್ಯ 'ಬಂಕರ್' ಗಳಿಗೆ ಉಗ್ರರ ಸ್ಥಳಾಂತರ! ಭಾರತೀಯ ಸೇನೆಗೆ ಹೊಸ ಸವಾಲು

Chhattisgarh ‘Nude Party': 'ನಗ್ನ ಪಾರ್ಟಿ' ಗೆ ಸಜ್ಜಾಗಿದ್ದ ಬೆಂಗಳೂರಿನ ಕಲಾವಿದರು, ಆಮಂತ್ರಣ ಪೋಸ್ಟರ್ ವೈರಲ್, ಆರು ಮಂದಿ ಬಂಧನ

SCROLL FOR NEXT