ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್  
ದೇಶ

Saudi-Pak defence pact: ಸೌದಿ-ಪಾಕ್ ರಕ್ಷಣಾ ಒಪ್ಪಂದ ಭಾರತದ ಭದ್ರತೆಗೆ ಬೆದರಿಕೆ; ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಸೌದಿ ಅರೇಬಿಯಾ, ಪಾಕಿಸ್ತಾನದೊಂದಿಗೆ 'ಕಾರ್ಯತಂತ್ರದ ಪರಸ್ಪರ ರಕ್ಷಣಾ' ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಭಾರತದ ರಾಷ್ಟ್ರೀಯ ಭದ್ರತೆಗೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ನವದೆಹಲಿ: ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದ ನಡುವಿನ ರಕ್ಷಣಾ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ರಾಜತಾಂತ್ರಿಕತೆಗೆ ಆದ ಮತ್ತೊಂದು ಹಿನ್ನಡೆ ಎಂದು ಕರೆದಿರುವ ಕಾಂಗ್ರೆಸ್, ಈ ಒಪ್ಪಂದ ಭಾರತದ ರಾಷ್ಟ್ರೀಯ ಭದ್ರತೆಗೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಕಳವಳ ವ್ಯಕ್ತಪಡಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 'ಆಪರೇಷನ್ ಸಿಂಧೂರ' ಹಠಾತ್ ನಿಲ್ಲಿಸಿದ ಒಂದು ತಿಂಗಳ ನಂತರ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಗೆ ಶ್ವೇತಭವನದಲ್ಲಿ ಭರ್ಜರಿ ಆತಿಥ್ಯ ನೀಡಿದ್ದರು.

ಆ ವ್ಯಕ್ತಿಯ ಪ್ರಚೋದನಾಕಾರಿ ಹೇಳಿಕೆಗಳು ಏಪ್ರಿಲ್ 20 ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ನೇರ ಕಾರಣವಾಗಿತ್ತು ಎಂದಿದ್ದಾರೆ.

"ನಮ್ಮ ಪ್ರಧಾನಿ ಚೀನಾಕ್ಕೆ ಭೇಟಿ ನೀಡಿದ ಕೆಲವೇ ದಿನಗಳಲ್ಲಿ, ಅಧ್ಯಕ್ಷ ಕ್ಸಿ ಅವರು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ಚೀನಾದ ರಹಸ್ಯ ಮಿಲಿಟರಿ ಸಂಕೀರ್ಣವನ್ನು ತೋರಿಸಿದ್ದರು. ಈಗ, ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದಾಗ ಪ್ರಧಾನಿಯಾಗಿದ್ದ ಸೌದಿ ಅರೇಬಿಯಾ, ಪಾಕಿಸ್ತಾನದೊಂದಿಗೆ 'ಕಾರ್ಯತಂತ್ರದ ಪರಸ್ಪರ ರಕ್ಷಣಾ' ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಭಾರತದ ರಾಷ್ಟ್ರೀಯ ಭದ್ರತೆಗೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಗಲ್ಫ್ ರಾಜ್ಯಕ್ಕೆ ಭೇಟಿ ವೇಳೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಉಭಯ ನಾಯಕರು ಬುಧವಾರ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮತಗಳ್ಳತನ: ಚುನಾವಣಾ ಆಯೋಗ ಸಹ 'ಸುಳ್ಳು' ಹೇಳುತ್ತಿದೆ, ಬಿಜೆಪಿಯೊಂದಿಗೆ ಒಪ್ಪಂದ - ಕಾಂಗ್ರೆಸ್

'ಜನಾಂಗೀಯ ತಾರತಮ್ಯ ಎದುರಿಸುತ್ತಿದ್ದೇನೆ ಎಂದು ನೋವು ತೋಡಿಕೊಂಡಿದ್ದ': ಹತ್ಯೆಗೀಡಾದ ತೆಲಂಗಾಣ ಟೆಕ್ಕಿಯ ಕುಟುಂಬಸ್ಥರ ಹೇಳಿಕೆ

ಸಿಂಗಾಪುರ: ಸ್ಕೂಬಾ ಡೈವಿಂಗ್ ವೇಳೆ ಅಸ್ಸಾಂನ ಜನಪ್ರಿಯ ಗಾಯಕ ಜುಬೀನ್ ಗಾರ್ಗ್ ಸಾವು

ಮಳೆಯಿಂದ ತತ್ತರಿಸಿದ ಚಮೋಲಿಯಲ್ಲಿ ಮತ್ತೆ ಐದು ಶವ ಪತ್ತೆ, ಸಾವಿನ ಸಂಖ್ಯೆ ಏಳಕ್ಕೆ ಏರಿಕೆ

ಸಾಹಿತಿ ಬಾನು ಮುಷ್ತಾಕ್ ಗೆ ಗೆಲುವು: ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ಸುಪ್ರೀಂ ಕೋರ್ಟ್ ವಜಾ

SCROLL FOR NEXT