ರೇಖಾ ಗುಪ್ತಾ 
ದೇಶ

ಸದಾ ಸಂಕಷ್ಟದಲ್ಲಿ ಹಿಂದೂ ಹಬ್ಬಗಳು: ಮಧ್ಯರಾತ್ರಿ 12ರ ವರೆಗೂ ದುರ್ಗಾಪೂಜೆ, ರಾಮಲೀಲಾ ಕಾರ್ಯಕ್ರಮ; ದೆಹಲಿ CM ರೇಖಾ ಗುಪ್ತಾ

ಯಾವ ರಾಮಲೀಲಾ ಕಾರ್ಯಕ್ರಮ ರಾತ್ರಿ 10ಕ್ಕೆ ಕೊನೆಗೊಳ್ಳುತ್ತದೆ? ಹಿಂದೂಗಳ ಹಬ್ಬಗಳು ಸದಾ ಸಂಕಷ್ಟಕ್ಕೆ ಸಿಲುಕಿವೆ? ದೆಹಲಿಯಲ್ಲಿ ರಾಮರಾಜ್ಯ ಸ್ಥಾಪನೆಯಾಗಬೇಕು. ಅದಕ್ಕಾಗಿ ನಾವೆಲ್ಲರೂ ಕೈಜೋಡಿಸಬೇಕು.

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ರಾಮಲೀಲಾ, ದುರ್ಗಾ ಪೂಜೆ ಮತ್ತು ಇತರ ಸಾಂಸ್ಕೃತಿಕ-ಧಾರ್ಮಿಕ ಕಾರ್ಯಕ್ರಮಗಳ ಸಮಯದಲ್ಲಿ ಬಳಸಲಾಗುವ ಧ್ವನಿವರ್ಧಕಗಳನ್ನು ಈಗ ಮಧ್ಯರಾತ್ರಿಯವರೆಗೆ ಬಳಸಬಹುದು ಎಂದು ಹೇಳಿದ್ದಾರೆ.

ಯಾವ ರಾಮಲೀಲಾ ಕಾರ್ಯಕ್ರಮ ರಾತ್ರಿ 10ಕ್ಕೆ ಕೊನೆಗೊಳ್ಳುತ್ತದೆ? ಹಿಂದೂಗಳ ಹಬ್ಬಗಳು ಸದಾ ಸಂಕಷ್ಟಕ್ಕೆ ಸಿಲುಕಿವೆ? ದೆಹಲಿಯಲ್ಲಿ ರಾಮರಾಜ್ಯ ಸ್ಥಾಪನೆಯಾಗಬೇಕು. ಅದಕ್ಕಾಗಿ ನಾವೆಲ್ಲರೂ ಕೈಜೋಡಿಸಬೇಕು ಎಂದು ಹೇಳಿ ದುರ್ಗಾಪೂಜೆ ಮತ್ತು ರಾಮಲೀಲಾ ಕಾರ್ಯಕ್ರಮಗಳನ್ನು ಮಧ್ಯರಾತ್ರಿಯವರೆಗೂ ನಡೆಸಲು ಸರ್ಕಾರ ಅನುಮತಿ ನೀಡಿದೆ. ಇತರ ರಾಜ್ಯಗಳಲ್ಲಿನ ಆಚರಣೆಗಳಂತೆಯೇ ಹಿಂದೂ ಹಬ್ಬಗಳನ್ನು ಸಮಯದ ನಿರ್ಬಂಧಗಳಿಲ್ಲದೆ ಮುಂದುವರಿಸಲು ಅವಕಾಶ ನೀಡುವ ಉದ್ದೇಶ ಹೊಂದಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಗುಜರಾತ್‌ನಲ್ಲಿ ದಾಂಡಿಯಾ ಇಡೀ ರಾತ್ರಿ ನಡೆಯುತ್ತದೆ. ಹಲವೆಡೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಹಾಗಿದ್ದರೆ ದೆಹಲಿ ಜನರ ತಪ್ಪಾದರೂ ಏನು? ಹೀಗಾಗಿ ನವರಾತ್ರಿ ಉತ್ಸವಕ್ಕೆ ಈ ಬಾರಿ ರಾತ್ರಿ 12ರವರೆಗೆ ಅನುಮತಿ ನೀಡಲಾಗಿದೆ. ಇದರಿಂದಾಗಿ ರಾಮಲೀಲಾ, ದುರ್ಗಾಪೂಜೆ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಧ್ಯರಾತ್ರಿ 12ರವರೆಗೂ ನಡೆಸಬಹುದು ಎಂದಿದ್ದಾರೆ.

ರಾಮಲೀಲಾ, ದುರ್ಗಾಪೂಜೆ, ದಸರಾ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಸುವ ಅವಧಿಯನ್ನು ದೆಹಲಿ ಸರ್ಕಾರ ಸೋಮವಾರದಿಂದ ವಿಸ್ತರಿಸಿದೆ. ಈ ಆದೇಶವು ಸೆ. 22ರಿಂದ ಅ. 3ರವರೆಗೆ ಇರಲಿದೆ. ಸರ್ಕಾರದ ಈ ನಿರ್ಧಾರಕ್ಕೆ ದೆಹಲಿ ಲೆಫ್ಟಿನೆಂಟ್ ಗವರ್ನರ್‌ ವಿ.ಕೆ. ಸೆಕ್ಸೇನಾ ಅನುಮೋದನೆ ನೀಡಿದ್ದಾರೆ.

ಈ ಆದೇಶವು ಶಬ್ದಮಾಲಿನ್ಯದ ನಿರ್ಬಂಧಗಳಿಗೆ ಒಳಪಟ್ಟು ಕಾರ್ಯಕ್ರಮಗಳನ್ನು ರಾತ್ರಿ 10ರ ಬದಲು ಮಧ್ಯರಾತ್ರಿ 12ರವರೆಗೂ ನಡೆಸಲು ಸರ್ಕಾರ ಅನುಮತಿಸಿದೆ. ವಸತಿ ಪ್ರದೇಶಗಳಲ್ಲಿ ಧ್ವನಿವರ್ಧಕಗಳಿಂದ ಹೊರಹೊಮ್ಮುವ ಶಬ್ದವು 45 ಡೆಸಿಬಲ್‌ ಮೀರುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದ ಜನತೆ ದಿನಬೆಳಗಾದರೆ ನೋಡಿ ಬೇಸತ್ತು ಹೋಗಿದ್ದಾರೆ, ಕಾಂಗ್ರೆಸ್ ಹೈಕಮಾಂಡ್ ಸಿಎಂ ಯಾರು ಎಂದು ಸ್ಪಷ್ಟಪಡಿಸಲಿ: ಆರ್ ಅಶೋಕ್

ಬೆಂಗಳೂರು ಎಟಿಎಂ ವ್ಯಾನ್ ದರೋಡೆ: ದರೋಡೆ ಹಿಂದಿನ ಅಸಲಿ ಕಾರಣ ಬಹಿರಂಗ! ಇಡೀ ಪ್ರಕರಣದ ಸೂತ್ರದಾರ ಯಾರು ಗೊತ್ತಾ?

ಭೂ ಸ್ವಾಧೀನ ಕೋರ್ಟ್ ಪ್ರಕರಣಗಳ ಕರ್ತವ್ಯ ಲೋಪ, ತನಿಖೆಗೆ ಎಸ್ ಐಟಿ ರಚನೆ- ಡಿಕೆ ಶಿವಕುಮಾರ್

ಕೆ ಎನ್ ರಾಜಣ್ಣ ಪುತ್ರ ಅಮಿತ್ ಶಾರನ್ನು ಭೇಟಿಯಾಗಿದ್ದರೇ MLC ರಾಜೇಂದ್ರ ಏನೆಂದರು?

ನ.28ರಂದು ಉಡುಪಿಗೆ ಪ್ರಧಾನಿ ಮೋದಿ ಆಗಮನ: ರೋಡ್ ಶೋ ರದ್ದು, ಕಾರ್ಯಕ್ರಮ ವೇಳಾಪಟ್ಟಿ ಹೀಗಿದೆ...

SCROLL FOR NEXT