ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ 
ದೇಶ

ಪ್ರಧಾನಿ ನರೇಂದ್ರ ಮೋದಿಗೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ, ಅವರು ದೇಶ ಮುನ್ನಡೆಸಲಿ: ದೇವೇಂದ್ರ ಫಡ್ನವೀಸ್

ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ನಂತರ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿಗಳ ಪೈಕಿ ಅವರು ಮೂರನೇ ಸ್ಥಾನದಲ್ಲಿದ್ದಾರೆ ಮತ್ತು ನಿರಂತರ ಅಧಿಕಾರಾವಧಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಯಸ್ಸು ಕೇವಲ ಒಂದು ಸಂಖ್ಯೆಯಾಗಿದ್ದು, ಅವರು ಸಾಮರ್ಥ್ಯ ಹೊಂದಿರುವವರೆಗೆ ದೇಶವನ್ನು ಮುನ್ನಡೆಸುತ್ತಲೇ ಇರಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗುರುವಾರ ಹೇಳಿದ್ದಾರೆ.

ಇಂಡಿಯಾ ಟುಡೇ ಕಾನ್ಕ್ಲೇವ್‌ನಲ್ಲಿ ಮಾತನಾಡಿದ ಫಡ್ನವೀಸ್, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. 'ಯುವಕರಿಗೆ ಮತ್ತು ಜೆನ್ ಝಡ್‌ಗೆ ಅಪ್ರಸ್ತುತ'. ನೇಪಾಳದಲ್ಲಿ ಆದ ಘಟನೆ ಇಲ್ಲಿಯೂ ಆಗುತ್ತದೆ ಎಂದು ಭಾವಿಸುವವರು ನೆರೆಯ ದೇಶಕ್ಕೆ ಹೋಗಬೇಕು ಎಂದು ಹೇಳಿದರು.

ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ 75 ವರ್ಷ ತುಂಬಿತು.

ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ನಂತರ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿಗಳ ಪೈಕಿ ಅವರು ಮೂರನೇ ಸ್ಥಾನದಲ್ಲಿದ್ದಾರೆ ಮತ್ತು ನಿರಂತರ ಅಧಿಕಾರಾವಧಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಮೋದಿ ಅವರನ್ನು ದೂರದೃಷ್ಟಿಯ ಮತ್ತು ದಕ್ಷ ನಾಯಕ ಎಂದು ಬಣ್ಣಿಸಿದ ಫಡ್ನವೀಸ್, 'ಅವರ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಗಮನಿಸಿದರೆ, ವಯಸ್ಸು ಅವರಿಗೆ ಕೇವಲ ಒಂದು ಸಂಖ್ಯೆ. ವಯಸ್ಸಿನ ಅಂಶ ಯಾವಾಗ ಮುಖ್ಯವಾಗುತ್ತದೆ ಎಂದರೆ, ನಿಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳು ಯಾವಾಗ ಕಡಿಮೆಯಾಗುತ್ತವೆಯೋ ಆಗ. ಆದರೆ, ಪ್ರಧಾನಿ ಮೋದಿ ವಿಷಯದಲ್ಲಿ ಹಾಗಿಲ್ಲ. ಅವರು ಸಾಮರ್ಥ್ಯ ಹೊಂದಿರುವವರೆಗೆ ನಮ್ಮನ್ನು ಮುನ್ನಡೆಸುತ್ತಲೇ ಇರಬೇಕು' ಎಂದು ಹೇಳಿದರು.

ತಮ್ಮ ಬಗ್ಗೆ ಮಾತನಾಡುತ್ತಾ, ಬ್ರಾಹ್ಮಣರಾಗಿರುವುದು ಅವರ ರಾಜಕೀಯ ಹಾದಿಯಲ್ಲಿ ಅಡ್ಡಿಯಾಗುವುದಿಲ್ಲ ಮತ್ತು ತಮ್ಮ ಭವಿಷ್ಯವನ್ನು ಬಿಜೆಪಿ ನಿರ್ಧರಿಸುತ್ತದೆ ಎಂದು ಸಿಎಂ ಹೇಳಿದರು.

'ಇಡೀ ಮಹಾರಾಷ್ಟ್ರಕ್ಕೆ ನನ್ನ ಜಾತಿ ತಿಳಿದಿದೆ ಮತ್ತು ಅವರು ನನ್ನನ್ನು ಒಪ್ಪಿಕೊಂಡಿದ್ದಾರೆ. 2014 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ನನಗೆ ರಾಜ್ಯದ ಅಧಿಕಾರವನ್ನು ನೀಡಿದರು ಮತ್ತು ನಂತರದ ಮೂರು ಚುನಾವಣೆಗಳಲ್ಲಿ, ನನ್ನ ನೇತೃತ್ವದಲ್ಲಿ ಬಿಜೆಪಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಆದ್ದರಿಂದ ರಾಜಕೀಯದಲ್ಲಿ ನಕಾರಾತ್ಮಕವೆಂದು ಪರಿಗಣಿಸಲ್ಪಟ್ಟ ಜಾತಿ ಸಮಸ್ಯೆ ಇತ್ಯರ್ಥವಾಗಿದೆ' ಎಂದು ಅವರು ಹೇಳಿದರು.

ರಾಷ್ಟ್ರಮಟ್ಟದಲ್ಲಿ ಯಾವುದೇ ಪಾತ್ರವನ್ನು ವಹಿಸಿಕೊಳ್ಳುತ್ತೀರಾ ಎಂದು ಕೇಳಿದಾಗ, ತಾನು ಐದು ವರ್ಷಗಳ ಕಾಲ ರಾಜ್ಯವನ್ನು ಮುನ್ನಡೆಸುವುದನ್ನು ಮುಂದುವರಿಸುತ್ತೇನೆ. ನಂತರ ಪಕ್ಷವು ನನ್ನ ಭವಿಷ್ಯದ ಬಗ್ಗೆ ನಿರ್ಧರಿಸುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘನೆ: Sonam Wangchuk ಸಂಸ್ಥೆ ಪರವಾನಗಿ ರದ್ದುಪಡಿಸಿದ ಕೇಂದ್ರ ಸರ್ಕಾರ

ಮಾಲೀಕರು-ಬಾಡಿಗೆದಾರರ ನಡುವೆ ಘರ್ಷಣೆ ಹೆಚ್ಚಳ: ಬಾಡಿಗೆ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯ ಸಚಿವ ಸಂಪುಟ ಅಸ್ತು!

ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಆಘಾತ: ಸ್ಟಾರ್ ಬೌಲರ್‌ಗೆ ಗಾಯ; ವೀಲ್‌ಚೇರ್‌ನಲ್ಲಿ ಸ್ಥಳಾಂತರ, Video!

ಜುಬೀನ್ ಗರ್ಗ್ ಸಾವಿನ ಪ್ರಕರಣ: ಸಂಗೀತಗಾರ ಶೇಖರ್ ಜ್ಯೋತಿ ಗೋಸ್ವಾಮಿ ಬಂಧಿಸಿದ SIT

Wipro ಕ್ಯಾಂಪಸ್‌ನಲ್ಲಿ ವಾಹನ ಸಂಚಾರಕ್ಕೆ ಅವಕಾಶ: ಸಿಎಂ ಸಿದ್ದರಾಮಯ್ಯ ಮನವಿ ತಿರಸ್ಕರಿಸಿದ Azim Premji

SCROLL FOR NEXT