ರೈಲು ಆಧಾರಿತ ಮೊಬೈಲ್ ಲಾಂಚರ್ ಪ್ಲಾಟ್‌ಫಾರ್ಮ್‌ನಿಂದ ಅಗ್ನಿ-ಪ್ರೈಮ್ ಕ್ಷಿಪಣಿ ಪರೀಕ್ಷೆ 
ದೇಶ

Agni-Prime missile: ರೈಲಿನಿಂದ ಉಡಾಯಿಸಬಹುದಾದ ಅಗ್ನಿ ಪ್ರೈಂ ಕ್ಷಿಪಣಿ ಪರೀಕ್ಷೆ ಯಶಸ್ವಿ; ಭಾರತದಿಂದ ಮೊದಲ ಪ್ರಯೋಗ; Video

ಭವಿಷ್ಯದ ಪೀಳಿಗೆಯ ಕ್ಷಿಪಣಿಯನ್ನು 2,000 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ಒಳಗೊಳ್ಳಲು ವಿನ್ಯಾಸಗೊಳಿಸಲಾಗಿದೆ.

ಭಾರತವು ರೈಲಿನಿಂದ ಉಡಾಯಿಸಬಹುದಾದ ಮೊಬೈಲ್ ಲಾಂಚರ್ ವ್ಯವಸ್ಥೆಯಿಂದ ಅಗ್ನಿ-ಪ್ರೈಮ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ತಿಳಿಸಿದ್ದಾರೆ.

ಭವಿಷ್ಯದ ಪೀಳಿಗೆಯ ಕ್ಷಿಪಣಿಯನ್ನು 2,000 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ಒಳಗೊಳ್ಳಲು ವಿನ್ಯಾಸಗೊಳಿಸಲಾಗಿದೆ. ವಿವಿಧ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ರೈಲು ಆಧಾರಿತ ಮೊಬೈಲ್ ಲಾಂಚರ್‌ನಿಂದ ನಡೆಸಲಾದ ಈ ರೀತಿಯ ಮೊದಲ ಉಡಾವಣೆ ಇದಾಗಿದೆ.

ಇದು ರೈಲು ಜಾಲದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದು, ಬಳಕೆದಾರರಿಗೆ ದೇಶಾದ್ಯಂತ ಚಲನಶೀಲತೆಯನ್ನು ಹೊಂದಲು ಮತ್ತು ಕ್ಷೀಣ ಗೋಚರ ಪರಿಸ್ಥಿತಿಯಲ್ಲಿ ಕಡಿಮೆ ಪ್ರತಿಕ್ರಿಯೆ ಸಮಯದಲ್ಲಿ ಉಡಾವಣೆ ಮಾಡಲು ಅನುವು ಮಾಡಿಕೊಡುತ್ತದೆ ಎಂದು ರಕ್ಷಣಾ ಸಚಿವರು ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮತ ಎಣಿಕೆ ನಿಯಮ ಪರಿಷ್ಕರಿಸಿದ ಚುನಾವಣಾ ಆಯೋಗ; ಬಿಹಾರ ಚುನಾವಣೆಯಿಂದಲೇ ಜಾರಿ

ಶೀಘ್ರದಲ್ಲೇ ಕರ್ನಾಟಕ ಪೊಲೀಸ್ ಟೋಪಿಗಳು ಬದಲಾಗುತ್ತೆ: ಡಿಜಿ-ಐಜಿಪಿ ಸಲೀಮ್

Trump-Shehbaz Sharif Meeting: ಪಾಕ್ ಪ್ರಧಾನಿ ಜೊತೆಗೆ ಏನಿದು ಡೊನಾಲ್ಡ್ ಟ್ರಂಪ್ 'ರಹಸ್ಯ ಮಾತುಕತೆ'!

GST reforms: ಗ್ರಾಹಕರಿಗೆ ಜಿಎಸ್‌ಟಿ ಪ್ರಯೋಜನಗಳ ವರ್ಗಾವಣೆ; ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ಹೇಳಿದ್ದೇನು?

ಮೈಸೂರಿನಲ್ಲಿ SL ಭೈರಪ್ಪ ಸ್ಮಾರಕ ನಿರ್ಮಾಣ: ಅಂತಿಮ ದರ್ಶನ ಬಳಿಕ CM ಸಿದ್ದರಾಮಯ್ಯ ಘೋಷಣೆ; Video

SCROLL FOR NEXT