ನವದೆಹಲಿ: 2008 ರ ಮುಂಬೈ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಮಾಜಿ ಗೃಹ ಸಚಿವ 'ಪಿ. ಚಿದಂಬರಂ ರಹಸ್ಯವನ್ನು ಬಟ್ಟ ಬಯಲು ಮಾಡಿದ್ದಾರೆ.
166 ಜನರ ಹತ್ಯೆ ನಂತರ ಪಾಕಿಸ್ತಾನದಲ್ಲಿ ಲಷ್ಕರ್ -ಇ-ತೋಯ್ಬಾ ಉಗ್ರರ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಮುಂದಾಗಿದ್ದರಂತೆ! ಆದರೆ ಅದಕ್ಕೆ ಯುಪಿಎ ಸರ್ಕಾರವ ಅಡ್ಡಗಾಲು ಹಾಕಿತಂತೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಿರೋಧ ಹಾಗೂ ಅಮೆರಿಕದ ಒತ್ತಡದಿಂದ ಯುಪಿಎ ಸರ್ಕಾರ ರಾಜತಾಂತ್ರಿಕ ಮಾರ್ಗವನ್ನು ಆಯ್ಕೆ ಮಾಡಿಕೊಂಡಿತು ಎಂದು ನಿನ್ನೆ ಎಬಿಪಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಚಿದಂಬರಂ ಹೇಳಿಕೊಂಡಿದ್ದಾರೆ.
ನವೆಂಬರ್ 30,2008 ರಂದು ಗೃಹ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಇಂದಿನ ದಿನಗಳಲ್ಲಿ ಹೋಲಿಸಿದರೆ ಸರ್ಕಾರದ ಗುಪ್ತಚರ ವ್ಯವಸ್ಥೆ ಹಾಗೂ ರಕ್ಷಣಾ ಸಾಮರ್ಥ್ಯ ಸಿಮೀತವಾಗಿತ್ತು ಎಂದಿದ್ದಾರೆ.
ಮುಂಬೈ ದಾಳಿ ನಂತರ ಗೃಹ ಸಚಿವನಾಗಿ ಅಧಿಕಾರ ವಹಿಸಿಕೊಂಡಾಗ ಪ್ರತೀಕಾರದ ಸೇಡು ತೀರಿಸಿಕೊಳ್ಳಬೇಕು ಅಂದುಕೊಂಡಿದ್ದೆ. ಅಂದಿನ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಮತ್ತಿತರೊಂದಿಗೆ ಈ ವಿಚಾರವನ್ನು ಹಂಚಿಕೊಂಡಿದ್ದೆ. ಆದರೆ ಕೊನೆಯ ಕ್ಷಣದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಭೌತಿಕ ಕಾರ್ಯಾಚರಣೆ ಬೇಡ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿತು. ಹೀಗಾಗಿ ರಾಜತಾಂತ್ರಿಕ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲಾಯಿತು ಎಂದು ತಿಳಿಸಿದರು.
ಮುಂಬೈ ದಾಳಿ ನಂತರ ಗೃಹ ಸಚಿವನಾಗಿ ಅಧಿಕಾರ ವಹಿಸಿಕೊಂಡಾಗ ಪ್ರತೀಕಾರದ ಸೇಡು ತೀರಿಸಿಕೊಳ್ಳಬೇಕು ಅಂದುಕೊಂಡಿದ್ದೆ. ಅಂದಿನ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಮತ್ತಿತರೊಂದಿಗೆ ಈ ವಿಚಾರವನ್ನು ಹಂಚಿಕೊಂಡಿದ್ದೆ. ಆದರೆ ಕೊನೆಯ ಕ್ಷಣದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಭೌತಿಕ ಕಾರ್ಯಾಚರಣೆ ಬೇಡ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿತು. ಹೀಗಾಗಿ ರಾಜತಾಂತ್ರಿಕ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲಾಯಿತು ಎಂದು ತಿಳಿಸಿದರು.
ಆ ಸಂದರ್ಭದಲ್ಲಿ ಭಾರತದ ಮಿಲಿಟರಿ ಮತ್ತು ಗುಪ್ತಚರ ಸನ್ನದ್ಧತೆಯ ಬಗ್ಗೆ ನನಗೆ ಸ್ವಲ್ಪವೂ ಜ್ಞಾನ ಇರಲಿಲ್ಲ. ಪಾಕಿಸ್ತಾನ ಮತ್ತು ನೆರೆಯ ಪ್ರದೇಶಗಳಲ್ಲಿನ ಗುಪ್ತಚರ ಸಂಪನ್ಮೂಲಗಳ ಬಗ್ಗೆಯೂ ನನಗೆ ತಿಳಿದಿರಲಿಲ್ಲ. ನನಗೆ ಏನೆಂದರೆ ಏನು ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಯುದ್ಧ ಮಾಡದಂತೆ ಭಾರತದ ಮೇಲೆ ವಿಶ್ವದ ನಾಯಕರ ಒತ್ತಡವೂ ಹೆಚ್ಚಾಗಿತ್ತು. ಆಗ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಗಿದ್ದ ಕಾಂಡೋಲೀಜಾ ರೈಸ್ ನನ್ನನ್ನು ಮತ್ತು ಪ್ರಧಾನಿ ಅವರನ್ನು ಭೇಟಿಯಾಗಲು ನವದೆಹಲಿಗೆ ಬಂದಿದ್ದರು. ಯಾವುದೇ ರೀತಿಯ ದಾಳಿಗೆ ಮುಂದಾಗದಂತೆ ಒತ್ತಡ ಹೇರಿದ್ದರು ಎಂದು ಚಿದಂಬರಂ ಒಪ್ಪಿಕೊಂಡಿದ್ದಾರೆ.
ಸೋನಿಯಾ ವಿರುದ್ಧ ಬಿಜೆಪಿ ಕಿಡಿ
ಚಿದಂಬರಂ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಬಿಜೆಪಿ ಅಂದಿನ ಯುಪಿಎ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ನಾಯಕ ಶೆಹಜಾದ್ ಪೂನಾವಾಲಾ, ಪಾಕಿಸ್ತಾನ ವಿರುದ್ಧ ಪ್ರತೀಕಾರಕ್ಕೆ ಮುಂದಾಗಿದ್ದ ಚಿದಂಬರಂ ಅವರನ್ನು ಸೋನಿಯಾ ಗಾಂಧಿ ಅಥವಾ ಮನಮೋಹನ್ ಸಿಂಗ್ ಅವರು ತಡೆದರೇ? ಎಂದು ಪ್ರಶ್ನಿಸಿದ್ದಾರೆ. ಭಾರತ ಸೇಡಿಗೆ ಮುಂದಾಗಿದ್ದ ಪದೇ ಪದೇ ಒತ್ತಡ ಹಾಕುತ್ತಿದ್ದ ಅಮೆರಿಕದ ಕಾರ್ಯದರ್ಶಿ ರೈಸ್ ಅವರ ನಿರ್ದೇಶನಕ್ಕೆ ಯುಪಿಎ ಸರ್ಕಾರ ತಲೆ ಬಾಗಿತ್ತೇ ಎಂದಿರುವ ಪೂನಾವಾಲಾ, ಏಷ್ಯಾ ಕಪ್ ಗೆದ್ದ ಭಾರತ ತಂಡವನ್ನು ಕಾಂಗ್ರೆಸ್ ಅಭಿನಂದಿಸಿಲ್ಲ ಎಂದು ಕಿಡಿಕಾರಿದ್ದಾರೆ.