ಕರೂರು: ನಟ ಮತ್ತು ತಮಿಳಗ ವೆಟ್ರಿ ಕಳಗಂ (TVK) ನಾಯಕ ವಿಜಯ್ ಶನಿವಾರ ವೇಲುಸಾಮಿಪುರಂಗೆ ಆಗಮಿಸುವ ಕೆಲವೇ ಗಂಟೆಗಳ ಮೊದಲು, ಅವರ ರ್ಯಾಲಿಗೆ ಮೀಸಲಾಗಿದ್ದ ಕಿರಿದಾದ 60 ಅಡಿ ರಸ್ತೆ ದುರಂತ ಸ್ಥಳವಾಗಿ ಮಾರ್ಪಟ್ಟಿತ್ತು.
ನಿನ್ನೆ ಭಾನುವಾರ ಬೆಳಗ್ಗೆ ಅಲ್ಲಿ ಉಳಿದದ್ದು, ದುರಂತ ನಡೆದ ಸ್ಥಳದಲ್ಲಿ ಚದುರಿದ ಚಪ್ಪಲಿಗಳು, ಹರಿದ ಬ್ಯಾನರ್‌ಗಳು, ನಾಯಕರ ಕಾರುಗಳು ಮತ್ತು ಒಂದೂವರೆ ವರ್ಷದ ಮಗುವಿನಿಂದ 60 ವರ್ಷದ ಮಹಿಳೆಯವರೆಗೆ 41 ಜನರು ಕಾಲ್ತುಳಿತದಲ್ಲಿ ಮೃತಪಟ್ಟ ನೆನಪುಗಳು.
ಕಾಲ್ತುಳಿತ ಹೇಗಾಯಿತು?
ನಟ ಕಂ ರಾಜಕಾರಣಿ ವಿಜಯ್ ಅವರ ಬ್ಯಾನರ್‌ಗಳು ಮತ್ತು ವಿಭಜಕದಿಂದ ಬ್ಯಾರಿಕೇಡ್ ಮಾಡಲಾಗಿತ್ತು, ಇದರಿಂದಾಗಿ ನೆರೆದಿದ್ದ ಸಾವಿರಾರು ಜನರಿಗೆ ತಪ್ಪಿಸಿಕೊಳ್ಳಲು ಯಾವುದೇ ಮಾರ್ಗವಿಲ್ಲ. ಬೆಳಗ್ಗೆ 8 ಗಂಟೆಯಿಂದ ಲಕ್ಷಾಂತರ ಜನರು ಸೇರಿದ್ದರು, ಮಧ್ಯಾಹ್ನ 1 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಸಂಜೆ 7 ಗಂಟೆಯ ನಂತರ ಆಗಮಿಸಿದ ವಿಜಯ್‌ಗಾಗಿ ಕಾಯುತ್ತಿದ್ದ ಹಲವರು ಅಷ್ಟು ಹೊತ್ತು ಏನೂ ಆಹಾರ ಸೇವಿಸಿರಲಿಲ್ಲ.
ಜನಸಮೂಹವು ಗಂಟೆಗಟ್ಟಲೆ ಒಂದು ಇಂಚು ಕದಡಿರಲಿಲ್ಲ. ಗಾಳಿ ಇರಲಿಲ್ಲ, ಆಹಾರವೂ ಇರಲಿಲ್ಲ, ಹೋಗಲು ಎಲ್ಲಿಯೂ ಇರಲಿಲ್ಲ; ಈ ಪ್ರದೇಶದ ಬೀದಿಗಳು ತುಂಬಾ ಕಿರಿದಾಗಿವೆ ಇಲ್ಲದಿದ್ದರೆ ಈ ಜನಸಮೂಹ ಚದುರಿಹೋಗುತ್ತಿತ್ತು ಎಂದು ತಿರುವಳ್ಳುವರ್ ನಗರದ ಜಿ. ರಾಜ್ ಹೇಳುತ್ತಾರೆ.
ಸ್ಥಳೀಯ ನಿವಾಸಿ ಆರ್. ವೆಟ್ರಿವೇಲ್, ಜನಸಂದಣಿಯನ್ನು ನಿಯಂತ್ರಿಸುವಲ್ಲಿನ ವೈಫಲ್ಯವು ದುರಂತಕ್ಕೆ ಕಾರಣವಾಯಿತು ಎಂದು ಹೇಳುತ್ತಾರೆ, ವಿಜಯ್ ಅವರನ್ನು ನೋಡಲೆಂದೇ ಅಲ್ಲಿ ಜನ ಜಮಾಯಿಸಿದ್ದರು. ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳ ಪ್ರತ್ಯೇಕ ಗುಂಪುಗಳನ್ನು ರಚಿಸಬೇಕಾಗಿತ್ತು ಮತ್ತು ಪ್ರತಿ ಜಿಲ್ಲೆಯ ಭಾಗವಹಿಸುವವರನ್ನು ತಮ್ಮದೇ ಆದ ಗುಂಪುಗಳಲ್ಲಿ ಇರಿಸಬೇಕಾಗಿತ್ತು ಎಂದು ಅವರು ಹೇಳುತ್ತಾರೆ. ಗುಂಪನ್ನು ಸರಿಯಾಗಿ ಸಂಘಟಿಸಲು ಯಾರೂ ಇರಲಿಲ್ಲ. ಜೋಶ್ ನ್ನು ಮುಂದುವರಿಸಲು ಹಾಡುಗಳನ್ನು ನಿರಂತರವಾಗಿ ಮೊಳಗಿಸಲಾಗುತ್ತಿದ್ದಂತೆ ಜನರು ದಣಿದಿದ್ದರು.
ಘಟನಾ ಸ್ಥಳದಿಂದ ಕೆಲವೇ ಹೆಜ್ಜೆಗಳ ದೂರದಲ್ಲಿರುವ ಮತ್ತೊಬ್ಬ ಪ್ರತ್ಯಕ್ಷದರ್ಶಿ ಎಲ್. ದಿವ್ಯಾನ್, ಉತ್ತಮ ಯೋಜನೆಯಿಂದ ಈ ದುರಂತವನ್ನು ತಪ್ಪಿಸಬಹುದಿತ್ತು ಎಂದು ಹೇಳುತ್ತಾರೆ. ಸರಿಯಾದ ನಿರ್ಬಂಧಗಳು ಮತ್ತು ಸಮಯವನ್ನು ಜಾರಿಗೊಳಿಸಿದ್ದರೆ, ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿರಲಿಲ್ಲ. ಉತ್ತಮ ಸಂಘಟನೆಯಿರುತ್ತಿದ್ದರೆ 41 ಜೀವಗಳು ಇಂದು ಬಲಿಯಾಗುತ್ತಿರಲಿಲ್ಲ ಎನ್ನುತ್ತಾರೆ.