ದಾಲ್- ಚಾವಲ್ ಊಟದಲ್ಲಿ ಹುಳು ಪತ್ತೆ 
ದೇಶ

Vande Bharat train: ಊಟದಲ್ಲಿ ಹುಳು ಪತ್ತೆ; ವೆಂಡರ್ ಗೆ 10 ಲಕ್ಷ ರೂ ದಂಡ ಹಾಕಿದ IRCTC

ಎಕ್ಸ್ ನಲ್ಲಿ ಹಂಚಿಕೊಂಡ ವಿಡಿಯೋ ಹಾಗೂ ಫೋಟೋದಲ್ಲಿ ದಾಲ್- ಚಾವಲ್ ಊಟದ ಬಾಕ್ಸ್ ನಲ್ಲಿ ಜೀರಳೆ ರೀತಿಯ ಹುಳುಗಳು ಪತ್ತೆಯಾಗಿವೆ. ವೆಂಡರ್ RK ಗ್ರೂಪ್‌ನ ಭಾಗವಾಗಿರುವ M/S ಬ್ರಂದಾವನ್ ಫುಡ್ ಪ್ರಾಡಕ್ಟ್ಸ್ ಎಂದು ಅವರು ಬಹಿರಂಗಪಡಿಸಿದ್ದಾರೆ.

ಮುಂಬೈ: ಅಹಮದಾಬಾದ್‌ನಿಂದ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುಂಬೈ ನಿವಾಸಿಯೊಬ್ಬರು, ದಾಲ್-ಚಾವಲ್ ಊಟದಲ್ಲಿ ಹುಳು ಕಂಡು ಆಘಾತಕ್ಕೊಳಗಾಗಿದ್ದಾರೆ.

ಬಳಿಕ ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ತನ್ನ ಕೋಚ್‌ನಲ್ಲಿ ಇಂತಹ ಎರಡು ಪ್ರಕರಣಗಳು ಕಂಡುಬಂದಿದ್ದು, ಪ್ರತಿಯೊಬ್ಬರೂ ಊಟ ಮಾಡುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.

ಎಕ್ಸ್ ನಲ್ಲಿ ಹಂಚಿಕೊಂಡ ವಿಡಿಯೋ ಹಾಗೂ ಫೋಟೋದಲ್ಲಿ ದಾಲ್- ಚಾವಲ್ ಊಟದ ಬಾಕ್ಸ್ ನಲ್ಲಿ ಜೀರಳೆ ರೀತಿಯ ಹುಳುಗಳು ಪತ್ತೆಯಾಗಿವೆ. ವೆಂಡರ್ RK ಗ್ರೂಪ್‌ನ ಭಾಗವಾಗಿರುವ M/S ಬ್ರಂದಾವನ್ ಫುಡ್ ಪ್ರಾಡಕ್ಟ್ಸ್ ಎಂದು ಅವರು ಬಹಿರಂಗಪಡಿಸಿದ್ದಾರೆ.

ಅಲ್ಲದೇ ಸಂಬಂಧಪಟ್ಟ ಅಧಿಕಾರಿಗಳಿಗೆ ಇದನ್ನು ಟ್ಯಾಗ್ ಮಾಡಿದ್ದು, ವೆಂಡರ್ ಮೇಲೆ ದಯವಿಟ್ಟು ದಾಳಿ ಮಾಡಿ ಎಂದು ಒತ್ತಾಯಿಸಿದ್ದಾರೆ.

FSSAI ಮಾನದಂಡಗಳ ಪ್ರಕಾರ ಆಹಾರವನ್ನು ತಯಾರಿಸಲಾಗುತ್ತಿಲ್ಲ ಎಂದು ನನಗೆ ಖಚಿತವಾಗಿದೆ. ತಪ್ಪಿತಸ್ಥರೆಂದು ಕಂಡುಬಂದಾಗ, ಅವರ ಪರವಾನಗಿಯನ್ನು ರದ್ದುಗೊಳಿಸಬೇಕು. ಇದು ಲಂಚದ ಮೂಲಕ ಇತ್ಯರ್ಥವಾಗುವುದಿಲ್ಲ ಎಂದು ಭಾವಿಸುತ್ತೇವೆ ಎಂದು ಅವರು ಬರೆದುಕೊಂಡಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಒಪ್ಪಂದದ ಮುಕ್ತಾಯದ ಸೂಚನೆಯೊಂದಿಗೆ 10 ಲಕ್ಷ ರೂ. ಭಾರೀ ದಂಡವನ್ನು ಸೇವಾ ಪೂರೈಕೆದಾರರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದ್ದು, ಶುಚಿಗೊಳಿಸುವಿಕೆ ಮತ್ತು ಕೀಟ ನಿಯಂತ್ರಣಕ್ಕಾಗಿ ಕಿಚನ್ ಮುಚ್ಚಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ತೀವ್ರ ವಿಷಾದವಿದೆ. ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ನೈರ್ಮಲ್ಯ ಮತ್ತು ಪ್ರಯಾಣಿಕರ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು IRCTC ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುದ್ಧ 3ನೇ ತಿಂಗಳಿಗೆ ಕಾಲಿಡುತ್ತಿರುವುದರಿಂದ '3F' ಮೇಲೆ ನಿಗಾ ವಹಿಸುವಂತೆ ಕೇಂದ್ರ ಸಚಿವೆ ಸೀತಾರಾಮನ್ ಕರೆ

'ಡಿಜಿಟಲ್ ಅರೆಸ್ಟ್': 24 ಕೋಟಿ ರೂ. ಕಳೆದುಕೊಂಡ ಬೆಂಗಳೂರಿನ ನಿವೃತ್ತ ಶಿಕ್ಷಕಿ; ವಿವಿಧ ರಾಜ್ಯಗಳ ಆರು ಜನರ ಬಂಧನ!

'ಇಂದೇ ಬರೆದಿಟ್ಕೊಳಿ, 2028ಕ್ಕೆ ಇದೇ ಡಿಕೆ ಶಿವಕುಮಾರ್, ಇದೇ ಸರ್ಕಾರ': ಪವರ್​ ಶೇರಿಂಗ್​ ನಡುವೆಯೇ DCM ಬಿಗ್ ಸಂದೇಶ

ತ್ವಿಷಾ ಶರ್ಮಾ ನಿಗೂಢ ಸಾವು ಪ್ರಕರಣ: CBI ತನಿಖೆಗೆ ಸುಪ್ರೀಂ ಕೋರ್ಟ್ ಅಸ್ತು; ಸಾಕ್ಷ್ಯ-ಹೇಳಿಕೆಗಳ ಪ್ರಕಟಿಸದಂತೆ ಮಾಧ್ಯಮಗಳಿಗೆ ಕಟ್ಟುನಿಟ್ಟಿನ ಸೂಚನೆ..!

ಲೈಂಗಿಕ ಅಪರಾಧಗಳನ್ನು ಹತ್ತಿಕ್ಕುವಂತೆ ಪೊಲೀಸರಿಗೆ ತಮಿಳುನಾಡು ಸಿಎಂ ವಿಜಯ್ ಖಡಕ್ ಸೂಚನೆ

SCROLL FOR NEXT