ಸೀಮಾ ಹೈದರ್ ಮತ್ತು ಸಚಿನ್ ಮೀನಾ ದಂಪತಿ 
ದೇಶ

ಹಿಂದೂಗಳು ಕನಿಷ್ಠ 2 ರಿಂದ 3 ಮಕ್ಕಳನ್ನು ಹೆರಬೇಕು: ಪಾಕ್ ಮೂಲದ Seema Haider ಹೇಳಿಕೆ

ಪ್ರತಿ ಹಿಂದೂ ಕುಟುಂಬವು ಕನಿಷ್ಠ ಎರಡರಿಂದ ಮೂರು ಮಕ್ಕಳನ್ನು ಹೊಂದಿರಬೇಕು. ಸಣ್ಣ ಕುಟುಂಬದ ಗಾತ್ರಗಳು ಜನಸಂಖ್ಯಾ ಸಮತೋಲನದ ಮೇಲೆ ಪರಿಣಾಮ ಬೀರಬಹುದು..

ನವದೆಹಲಿ: ಭಾರತದಲ್ಲಿರುವ ಹಿಂದೂಗಳು ಕನಿಷ್ಠ 2 ರಿಂದ ಮೂರು ಮಕ್ಕಳನ್ನು ಹೊಂದಬೇಕು ಎಂದು ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಮಕ್ಕಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ಸೀಮಾ ಹೈದರ್, 'ಪ್ರತಿ ಹಿಂದೂ ಕುಟುಂಬವು ಕನಿಷ್ಠ ಎರಡರಿಂದ ಮೂರು ಮಕ್ಕಳನ್ನು ಹೊಂದಿರಬೇಕು. ಸಣ್ಣ ಕುಟುಂಬದ ಗಾತ್ರಗಳು ಜನಸಂಖ್ಯಾ ಸಮತೋಲನದ ಮೇಲೆ ಪರಿಣಾಮ ಬೀರಬಹುದು ಎಂದು ಆಕೆ ಪ್ರತಿಪಾದಿಸಿದ್ದಾರೆ.

ದೇಶದಲ್ಲಿ ಅನೇಕ ಜನರು ಒಂದು ಅಥವಾ ಎರಡು ಮಕ್ಕಳನ್ನು ಮಾತ್ರ ಹೊಂದಲು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ, ಇದು ನನ್ನ ಪ್ರಕಾರ, ಹಿಂದೂ ಜನಸಂಖ್ಯೆಯಲ್ಲಿ ಕುಸಿತಕ್ಕೆ ಕಾರಣವಾಗುತ್ತಿದೆ ಎಂದು ಸೀಮಾ ಹೇಳಿದ್ದಾರೆ.

ಅಂತೆಯೇ ಇತರೆ ಸಮುದಾಯಗಳ ಜನನ ಪ್ರಮಾಣ ಹೆಚ್ಚಾಗುತ್ತಿರುವ ಕುರಿತು ಮಾತನಾಡಿದ ಸೀಮಾ, ಹಿಂದೂಗಳಲ್ಲಿನ ಜನನ ಪ್ರಮಾಣ ಕುಸಿತವೇ ಹಿಂದೂಗಳ ಸಂಖ್ಯೆ ಕ್ಷೀಣಿಸಲು ಕಾರಣವಾಗುತ್ತದೆ. ಇದು ಕಾಲಾನಂತರದಲ್ಲಿ ಅಂತರವು ಹೆಚ್ಚಾಗಬಹುದು. ಇತರರು ದೊಡ್ಡ ಕುಟುಂಬಗಳನ್ನು ಹೊಂದುವುದನ್ನು ಪರಿಗಣಿಸಬೇಕು ಎಂದು ದೊಡ್ಡ ಕುಟುಂಬಗಳನ್ನು ಸೀಮಾ ಪ್ರೋತ್ಸಾಹಿಸಿದರು.

ಅಂತೆಯೇ ತಮ್ಮ ಸ್ವಂತ ಕುಟುಂಬವನ್ನು ಇದೇ ವೇಳೆ ಉಲ್ಲೇಖಿಸಿದ ಸೀಮಾ, 'ನಾವು ಆರು ಸನಾತನ ಮಕ್ಕಳನ್ನು ನೀಡಿದ್ದೇವೆ” ಎಂದು ಹೇಳಿ, ಇತರರು ದೊಡ್ಡ ಕುಟುಂಬಗಳನ್ನು ಹೊಂದುವ ಬಗ್ಗೆ ಯೋಚಿಸುವಂತೆ ಪ್ರೋತ್ಸಾಹಿಸಿದರು.

ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕುಟುಂಬಗಳು ಮೂರು ಮಕ್ಕಳನ್ನು ಹೊಂದಬೇಕೆಂದು ಪ್ರತಿಪಾದಿಸಿದ್ದ ಮೋಹನ್ ಭಾಗವತ್ ಅವರು ಈ ಹಿಂದೆ ಮಾಡಿದ್ದ ಇದೇ ರೀತಿಯ ಹೇಳಿಕೆಗಳ ಹಿನ್ನೆಲೆಯಲ್ಲಿ ಅವರ ಹೇಳಿಕೆ ಬಂದಿದೆ.

ಅಂದಹಾಗೆ ಪಾಕಿಸ್ತಾನದಿಂದ ನೇಪಾಳ ಮೂಲಕ ಭಾರತಕ್ಕೆ ತೆರಳಿ ಪ್ರಸ್ತುತ ತನ್ನ ಪತಿ ಸಚಿನ್ ಮೀನಾ ಅವರೊಂದಿಗೆ ಗ್ರೇಟರ್ ನೋಯ್ಡಾದಲ್ಲಿ ವಾಸಿಸುತ್ತಿರುವ ಸೀಮಾ ಹೈದರ್, ತಮ್ಮ ವೈಯಕ್ತಿಕ ಕಥೆಗಾಗಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಅವರು ತಮ್ಮ ಆರನೇ ಮಗುವಿಗೆ ಜನ್ಮ ನೀಡಿದ್ದರು, ಅವರ ಹೇಳಿಕೆಗಳು ಸಾಮಾಜಿಕ ಮತ್ತು ರಾಜಕೀಯ ವಲಯಗಳಲ್ಲಿ ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Ebola ಭೀತಿ: ಏರ್ ಲೈನ್ ಗಳಿಗೆ ಡಿಜಿಸಿಎ SOP ಬಿಡುಗಡೆ

ಭಾರತ ಇರಾನ್ ನ IRGC ಯನ್ನು ಉಗ್ರ ಸಂಘಟನೆಯೆಂದು ಘೋಷಿಸಲಿ: ಇಸ್ರೇಲ್ ಒತ್ತಾಯ

ಟ್ರಂಪ್ ಭಾರತವನ್ನ ನರಕದ ಕೂಪ ಅಂದಿದ್ರಲ್ಲಾ ಆ ಬಗ್ಗೆ ಏನ್ ಹೇಳ್ತಿರಾ?; ಪತ್ರಕರ್ತನ ಪ್ರಶ್ನೆಗೆ ರುಬಿಯೊ ಗಲಿಬಿಲಿ!

CM ಬದಲಾವಣೆ ಚರ್ಚೆ ಮಧ್ಯೆ ಸಿದ್ದರಾಮಯ್ಯ ಸಂಪುಟದಲ್ಲಿ ಮಹತ್ವದ ಬದಲಾವಣೆ

ಗುಲ್ಮಾರ್ಗ್: ಕೈಕೊಟ್ಟ ವಿಶ್ವದ 2ನೇ ಅತಿ ಎತ್ತರದ ಕೇಬಲ್ ಕಾರ್; ಆಕಾಶದಲ್ಲೇ ಸಿಲುಕಿದ 300 ಪ್ರವಾಸಿಗರು! Video ನೋಡಿ

SCROLL FOR NEXT