ಹಂತಕರು ಮತ್ತು ವಕೀಲ 
ದೇಶ

ಹಾಡಹಗಲೇ, ನಡುರಸ್ತೆಯಲ್ಲಿ ಲಾಯರ್ ಗೆ ಗುಂಡಿಕ್ಕಿ ಹತ್ಯೆ, ಬೈಕ್ ಸ್ಟಾರ್ಟ್ ಆಗದೇ ಹಂತಕರ ಪರದಾಟ! Video

ಶನಿವಾರ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಈ ಘಟನೆ ನಡೆದಿದ್ದು, ವಕೀಲರೊಬ್ಬರ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರಿಗೆ ಗುಂಡು ಹಾರಿಸಿ ಕೊಂದು ಹಾಕಿದ್ದಾರೆ.

ಮಿರ್ಜಾಪುರ: ಬೈಕ್ ನಲ್ಲಿ ಬಂದ ಹಂತಕರಿಬ್ಬರು ಲಾಯರ್ ಒಬ್ಬರನ್ನು ನಡುರಸ್ತೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ್ದು, ಬಳಿಕ ಪರಾರಿಯಾಗಲು ಯತ್ನಿಸುವಾಗ ಬೈಕ್ ಸ್ಟಾರ್ಟ್ ಆಗದೇ ಪರದಾಡಿದ ಘಟನೆ ವರದಿಯಾಗಿದೆ.

ಶನಿವಾರ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಈ ಘಟನೆ ನಡೆದಿದ್ದು, ವಕೀಲರೊಬ್ಬರ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರಿಗೆ ಗುಂಡು ಹಾರಿಸಿ ಕೊಂದು ಹಾಕಿದ್ದಾರೆ. ಅಚ್ಚರಿ ಎಂದರೆ ಲಾಯರ್ ಗೆ ಗುಂಡಿಕ್ಕಿದ ಹಂತಕರು ಬಳಿಕ ಅಲ್ಲಿಂದ ಪರಾರಿಯಾಗಲು ಸಾಕಷ್ಟು ಪರದಾಡಿದ್ದಾರೆ.

ಹಂತಕರು ತಂದಿದ್ದ ಬೈಕ್ ಅವರು ಪರಾರಿಯಾಗುವಾಗ ಸ್ಟಾರ್ಟ್ ಆಗದೇ ಪರದಾಡುವಂತಾಯಿತು. ಒಂದೆ ಲಾಯರ್ ನ ಕೊಂದು ಹಾಕಲಾಗಿದ್ದು, ಪೊಲೀಸ ಬರುತ್ತಾರೆ ಎಂಬ ಭಯ.

ಮತ್ತೊಂದೆಡೆ ಸ್ಥಳೀಯರು ತಮ್ಮನ್ನು ಹಿಡಿಯುತ್ತಾರೆ ಎಂಬ ಭಯದೊಂದಿಗೇ ಹಂತಕರು ಪದೇ ಪದೇ ಬೈಕ್ ಸ್ಟಾರ್ಟ್ ಮಾಡಲು ಯತ್ನಿಸುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಆಗಿದ್ದೇನು?

ಶನಿವಾರ ಬೆಳಿಗ್ಗೆ ನಡೆದ ಘಟನೆಯು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಬೆಳಗಿನ ನಡಿಗೆಗೆ ಹೊರಟಿದ್ದ 40 ವರ್ಷದ ಹಿರಿಯ ವಕೀಲ ರಾಜೀವ್ ಸಿಂಗ್ ಅವರನ್ನು ಇಬ್ಬರು ವ್ಯಕ್ತಿಗಳು ಗುಂಡಿಕ್ಕಿ ಕೊಂದು ಹಾಕಿದ್ದಾರೆ. ಅವರಲ್ಲಿ ಒಬ್ಬ ವ್ಯಕ್ತಿ ವಾಹನದಿಂದ ಇಳಿದು ಕಚ್ಚಾ ಪಿಸ್ತೂಲ್ ಬಳಸಿ ವಕೀಲರ ಮೇಲೆ ಗುಂಡು ಹಾರಿಸಿದ ಪರಿಣಾಮ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದರು.

ಬೈಕ್ ಸ್ಟಾರ್ಟ್ ಮಾಡಲು ಹರಸಾಹಸ

ಬಳಿಕ ಹಂತಕರು ಹಿಂದಕ್ಕೆ ಓಡಿ ಮೋಟಾರ್ ಸೈಕಲ್ ಮೇಲೆ ಕುಳಿತಾಗ, ಅದನ್ನು ಸವಾರಿ ಮಾಡುತ್ತಿದ್ದ ವ್ಯಕ್ತಿ ಅದನ್ನು ಸ್ಟಾರ್ಟ್ ಮಾಡುವ ಪ್ರಯತ್ನದಲ್ಲಿ ನಿರಂತರವಾಗಿ ಅದರ ಪೆಡಲ್ ಅನ್ನು ಒದೆಯುತ್ತಾನೆ ಆದರೆ ವಿಫಲನಾಗುತ್ತಾನೆ.

ದಾಳಿಕೋರರಲ್ಲಿ ಒಬ್ಬರು ಮೋಟಾರ್ ಸೈಕಲ್ ಸ್ಟಾರ್ಟ್ ಮಾಡಲು ಪ್ರಯತ್ನಿಸುತ್ತಲೇ ಇದ್ದ. ಈ ವೇಳೆ ಇದನ್ನು ಕಂಡ ಸ್ಥಳೀಯರು ಕೆಲವರು ಅವರ ಬಳಿ ಬಂದಾಗ ಹಂತಕರು ಪಿಸ್ತೂಲ್ ತೋರಿಸಿ ಅವರನ್ನೂ ಬೆದರಿಸುತ್ತಾರೆ. ಈ ವೇಳೆ ಸ್ಥಳೀಯರೂ ಕೂಡ ಪ್ರಾಣ ಭಯದಿಂದ ಹಿಂದಕ್ಕೆ ಓಡಿ ಹೋಗುತ್ತಾರೆ.

ಹೀಗೆ ಕೆಲ ನಿಮಿಷಗಳ ಪ್ರಯತ್ನದ ನಂತರ, ವಾಹನವು ಅಂತಿಮವಾಗಿ ಸ್ಟಾರ್ಟ್ ಆಗುತ್ತದೆ ಮತ್ತು ಇಬ್ಬರು ವ್ಯಕ್ತಿಗಳು ಸ್ಥಳದಿಂದ ಹೊರಟು ಹೋಗುತ್ತಾರೆ. ನಂತರ, ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದರು.

ಪೊಲೀಸ್ ಪ್ರಕರಣ ದಾಖಲು

ಇನ್ನು ಈ ಕೊಲೆ ಕೇಸ್ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಬಂಧಿಸಲು ಐದು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ