Viral Video: 'ರೀಲ್ಸ್‌ಗಾಗಿ ಮಗುವಿನ ಪ್ರಾಣವನ್ನೇ ಪಣಕ್ಕಿಟ್ಟ ತಂದೆ'; ಬಾಲ್ಕನಿಯಿಂದ ಜಿಗಿದ ಬಾಲಕ, ಅಪ್ಪನ ಹುಚ್ಚಾಟಕ್ಕೆ ತೀವ್ರ ಆಕ್ರೋಶ!

ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೀಕ್ಷಣೆಗಳನ್ನು ಗಳಿಸಲು ಹೆತ್ತ ತಂದೆಯೇ ತನ್ನ ಮಗುವಿಗೆ ಮೊದಲ ಮಹಡಿಯ ಬಾಲ್ಕನಿಯಿಂದ ಜಿಗಿಯುವಂತೆ ಪ್ರೇರೇಪಿಸಿದ ಘಟನೆ ನಡೆದಿದ್ದು, ಈ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Viral Video: Risking A Child’s Life For A Reel; Boy Jumps Off Balcony
'ರೀಲ್ಸ್‌ಗಾಗಿ ಮಗುವಿನ ಪ್ರಾಣವನ್ನೇ ಪಣಕ್ಕಿಟ್ಟ ತಂದೆ'
Updated on

ನವದೆಹಲಿ: ಇತ್ತೀಚೆಗೆ ಜನರಿಗೆ ರೀಲ್ಸ್ ಗೀಳು ಹೆಚ್ಚಾಗುತ್ತಿದ್ದು, ಅಪಾಯಕಾರಿ ಸ್ಥಳದಲ್ಲಿಯೂ ರೀಲ್ಸ್ ಮಾಡಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೀಕ್ಷಣೆಗಳನ್ನು ಗಳಿಸಲು ಹೆತ್ತ ತಂದೆಯೇ ತನ್ನ ಮಗುವಿಗೆ ಮೊದಲ ಮಹಡಿಯ ಬಾಲ್ಕನಿಯಿಂದ ಜಿಗಿಯುವಂತೆ ಪ್ರೇರೇಪಿಸಿದ ಘಟನೆ ನಡೆದಿದ್ದು, ಈ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಅಪ್ಪನ ಹುಚ್ಚಾಟಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

X ನಲ್ಲಿ ಪ್ರಸಾರವಾಗುತ್ತಿರುವ ಈ ಆಘಾತಕಾರಿ ವಿಡಿಯೋದಲ್ಲಿ, ಸುಮಾರು ಎರಡರಿಂದ ಮೂರು ವರ್ಷ ವಯಸ್ಸಿನ ಬಾಲಕ ಮೊದಲ ಮಹಡಿಯ ಬಾಲ್ಕನಿಯ ರೇಲಿಂಗ್ ಮೇಲೆ ನಿಂತ ಕೆಳಕ್ಕೆ ಜಿಗಿಯುತ್ತಾನೆ.

Viral Video: Risking A Child’s Life For A Reel; Boy Jumps Off Balcony
Viral Video: ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಬೆನ್ನಲ್ಲೇ 165 ಲೀಟರ್ ತುಪ್ಪ ಅರ್ಪಣೆ; ನೆಟ್ಟಿಗರಿಂದ ಭಾರೀ ಆಕ್ರೋಶ

ಈ ಆಘಾತಕಾರಿ ದೃಶ್ಯದಲ್ಲಿ ಕೆಳಗೆ ನಿಂತಿರುವ ತಂದೆಯೂ ಕೆಳಕ್ಕೆ ಹಾರುವಂತೆ ಮಗುವಿಗೆ ಸನ್ನೆ ಮಾಡುತ್ತಾರೆ. ಮಗು ಮೇಲೆ ನಿಂತು ಚಪ್ಪಾಳೆ ತಟ್ಟುತ್ತಾ ಖುಷಿ ಯಿಂದಲೇ ಕೆಳಗೆ ಹಾರಿದೆ. ಆದರೆ ತಂದೆ ಮಗುವನ್ನು ಹಿಡಿಯಲು ಪ್ರಯತ್ನ ಮಾಡಿದರೂ ಆತನ ಕೈಯಿಂದ ಜಾರಿ ಕೆಳಗೆ ಬಿದ್ದಿದೆ. ಅಲ್ಲಿ ಹಾಸಿಗೆ ಹಾಕಿರುವುದರಿಂದ ಮಗುವಿಗೆ ಯಾವುದೇ ತೊಂದರೆಯಾಗಲಿಲ್ಲ.

"ರೀಲ್ಸ್ ಗಾಗಿ ಯಾವುದೇ ಹಂತಕ್ಕೂ ಹೋಗುವುದು. ಮೂರ್ಖತನ" ಎಂದು ಒಬ್ಬ ನೆಟ್ಟಿಗರು ವಿಡಿಯೋವನ್ನು ಹಂಚಿಕೊಂಡು ಟೀಕಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com