ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್ ಸಾಂದರ್ಭಿಕ ಚಿತ್ರ 
ದೇಶ

'ಹಾರ್ಮುಜ್ ಜಲಸಂಧಿ' ದಿಗ್ಬಂಧನ ನಡುವೆ ಟ್ರಂಪ್-ಪ್ರಧಾನಿ ಮೋದಿ ದೂರವಾಣಿ ಸಂಭಾಷಣೆ! ಏನೆಲ್ಲಾ ಮಾತುಕತೆ ಆಯ್ತು?

ಕಳೆದ ಮೇನಲ್ಲಿ ಭಾರತ-ಪಾಕಿಸ್ತಾನ ಮಿಲಿಟರಿ ಘರ್ಷಣೆಯನ್ನು ಕಡಿಮೆ ಮಾಡುವಲ್ಲಿ ನನ್ನ ಪಾತ್ರವಿದೆ ಎಂದು ಟ್ರಂಪ್ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ನಂತರ ಭಾರತ-ಯುಎಸ್ ಸಂಬಂಧಗಳು ತೀವ್ರವಾಗಿ ಹದಗೆಟ್ಟಿತ್ತು.

ನವದೆಹಲಿ: ಅಮೆರಿಕದ ಹಾರ್ಮುಜ್ ಜಲಸಂಧಿ ದಿಗ್ಬಂಧನ ನಡುವೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಪ್ರಧಾನಿ ಮೋದಿ ಮಂಗಳವಾರ ದೂರವಾಣಿಯಲ್ಲಿ 40 ನಿಮಿಷ ಸಂಭಾಷಣೆ ನಡೆಸಿದ್ದಾರೆ. ಉಭಯ ರಾಷ್ಟ್ರಗಳ ನಾಯಕರು ಪಶ್ಚಿಮ ಏಷ್ಯಾದಲ್ಲಿ ಸದ್ಯ ನಡೆಯುತ್ತಿರುವ ಸಂಘರ್ಷ ಹಾಗೂ ವ್ಯಾಪಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಅವರ ಹೇಳಿಕೆ ಉಲ್ಲೇಖಿಸಿ NDTV ವರದಿ ಮಾಡಿದೆ.

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮೂರು ದಿನಗಳ ಅಮೆರಿಕ ಭೇಟಿಯ ಸಂದರ್ಭದಲ್ಲಿ ಅಲ್ಲಿನ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ರಕ್ಷಣಾ ಮತ್ತು ವ್ಯಾಪಾರ ಸಂಬಂಧಗಳ ಪರಾಮರ್ಶೆ ಮತ್ತು ಭಾರತ- ಅಮೆರಿಕ ನಡುವೆ ಸಹಕಾರದ ಹಾದಿಯನ್ನು ಪರಿಶೋಧಿಸಿದ ಬಳಿಕ ದೂರವಾಣಿ ಸಂಭಾಷಣೆ ನಡೆದಿದೆ.

ಭಾರತದ ಮೇಲೆ ಅಮೆರಿಕ ಸುಂಕ ಮತ್ತು ಕಳೆದ ಮೇನಲ್ಲಿ ಭಾರತ-ಪಾಕಿಸ್ತಾನ ಮಿಲಿಟರಿ ಘರ್ಷಣೆಯನ್ನು ಕಡಿಮೆ ಮಾಡುವಲ್ಲಿ ನನ್ನ ಪಾತ್ರವಿದೆ ಎಂದು ಟ್ರಂಪ್ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ನಂತರ ಭಾರತ-ಯುಎಸ್ ಸಂಬಂಧಗಳು ತೀವ್ರವಾಗಿ ಹದಗೆಟ್ಟಿತ್ತು.

ಈ ಮಧ್ಯೆ ಈ ವಾರದ ಆರಂಭದಲ್ಲಿ ಪಾಕಿಸ್ತಾನದಲ್ಲಿ ಕದನ ವಿರಾಮ ಮಾತುಕತೆ ವಿಫಲವಾದ ನಂತರ ಇರಾನ್ ವಿರುದ್ಧ ಅಮೆರಿಕ-ಇಸ್ರೇಲಿ ಯುದ್ಧ ತೀವ್ರಗೊಂಡಿತು. ವಾಷಿಂಗ್ಟನ್ ಆಯಕಟ್ಟಿನ ಜಲಮಾರ್ಗ ಹಾರ್ಮುಜ್ ಜಲಸಂಧಿ ಮತ್ತು ಟೆಹ್ರಾನ್‌ನ ನೌಕಾ ದಿಗ್ಬಂಧನವನ್ನು ಘೋಷಿಸಿ ಕೊಲ್ಲಿ ಪ್ರದೇಶದ ಬಂದರುಗಳ ಮೇಲೆ ದಾಳಿಗಳ ಎಚ್ಚರಿಕೆ ನೀಡಿತು.

ಶಾಂತಿ ಒಪ್ಪಂದ ಸಭೆ ಆಯೋಜಿಸಿದ್ದ ಪಾಕಿಸ್ತಾನ ಮತ್ತೆ ಇರಾನ್ ಮತ್ತು ಅಮೆರಿಕವನ್ನು ಶಾಂತಿ ಸಭೆಗೆ ಕರೆಯಲು ಉನ್ನತ ಮಟ್ಟದ ಸಂಪರ್ಕದಲ್ಲಿ ತೊಡಗಿಕೊಂಡಿದ್ದು, ಮುಂದಿನ ವಾರದ ವೇಳೆಗೆ ಎರಡನೇ ಸುತ್ತಿನ ಮಾತುಕತೆಗಾಗಿ ಎರಡೂ ಕಡೆಯವರು ಇಸ್ಲಾಮಾಬಾದ್‌ನಲ್ಲಿ ಮತ್ತೆ ಭೇಟಿಯಾಗಬಹುದು ಎಂದು ಹೇಳಿದೆ.

ಈಗ ಏಳನೇ ವಾರದಲ್ಲಿರುವ ಈ ಯುದ್ಧ ಜಾಗತಿಕ ಮಾರುಕಟ್ಟೆ ಮತ್ತು ಆರ್ಥಿಕತೆಯನ್ನು ಅಲುಗಾಡಿಸಿದೆ. ಏಕೆಂದರೆ ಹೆಚ್ಚಿನ ಪ್ರಮಾಣದ ಹಡಗು ಸಾಗಣೆ ಕಡಿತಗೊಂಡಿದ್ದು, ತೈಲ ಪೂರೈಕೆಗೆ ಸಮಸ್ಯೆಯಾಗಿದೆ.

ಇರಾನ್ ಮೇಲಿನ ಯುಎಸ್-ಇಸ್ರೇಲಿ ದಾಳಿಯಿಂದ ಇಲ್ಲಿಯವರೆಗೆ ಕನಿಷ್ಠ 3,000 ಜನರು ಬಲಿಯಾಗಿದ್ದಾರೆ. ಆದರೆ ಲೆಬನಾನ್ ಮೇಲಿನ ಇಸ್ರೇಲಿ ದಾಳಿಯಲ್ಲಿ ಮಕ್ಕಳು ಮತ್ತು ಪತ್ರಕರ್ತರು ಸೇರಿದಂತೆ 2,000 ಕ್ಕೂ ಹೆಚ್ಚು ಜನರು ಹತ್ಯೆಯಾಗಿದ್ದಾರೆ.

ಇಸ್ರೇಲ್ ಮೇಲೆ ಇರಾನ್ ನಡೆಸಿದ ಪ್ರತೀಕಾರದ ದಾಳಿಯಲ್ಲಿ ಕನಿಷ್ಠ 23 ಜನರು ಸಾವನ್ನಪ್ಪಿದ್ದಾರೆ, ಆದರೆ ಗಲ್ಫ್ ಅರಬ್ ರಾಷ್ಟ್ರಗಳಲ್ಲಿ ಒಂದು ಡಜನ್‌ಗೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಯುದ್ಧದಲ್ಲಿ ಹದಿಮೂರು ಯುಎಸ್ ಭದ್ರತಾ ಸಿಬ್ಬಂದಿ ಸಹ ಪ್ರಾಣ ಕಳೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BRICS 2026: ವ್ಯಾಪಾರ ಏಕೀಕರಣಕ್ಕೆ ಒತ್ತಾಸೆ ಕೋರಿದ ಪ್ರಧಾನಿ ಮೋದಿ ಮೊದಲ ದಿನ ಹೇಳಿದ್ದೇನು?

ಜೈಲಿನಲ್ಲಿದ್ದರೂ ಹಳೆಯ ಚಾಳಿ ಬಿಡದ ಪ್ರಜ್ವಲ್ ರೇವಣ್ಣ: ಪೆನ್ ಡ್ರೈವ್ ನೋಡಿ ಪೊಲೀಸರು ಶಾಕ್!

ಪತ್ರಕರ್ತ ಜಿ. ಮಹಂತೇಶ್ ಗೆ ಜೀವ ಬೆದರಿಕೆ: FIR ದಾಖಲು!

ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಹೋರಾಟ: ಆಪ್ತ ಸಹಾಯಕನ ಮನೆ ಮೇಲೆ ED ದಾಳಿ; ಪಕ್ಷಕ್ಕೆ ಮುಜುಗರ ತಪ್ಪಿಸಲು ರಾಜಿನಾಮೆ- ಹರೀಶ್ ರಾವತ್

ಬೆಂಗಳೂರಿನ ಗುಂಡಿ ಮುಚ್ಚಲು 'ಜೆಟ್ ಪ್ಯಾಚರ್': ಪ್ರಾಯೋಗಿಕ ಕಾರ್ಯಾಚರಣೆ!