ಗ್ಯಾಸ್ ಸಿಲಿಂಡರ್ ಕೊರತೆಯ ಸಾಂದರ್ಭಿಕ ಚಿತ್ರ 
ದೇಶ

ಪಶ್ಚಿಮ ಏಷ್ಯಾ ಸಂಘರ್ಷದಿಂದ 25 ಲಕ್ಷ ಭಾರತೀಯರು ಬಡತನಕ್ಕೆ! UNDP ವರದಿ

ಸಂಘರ್ಷವು "ಏಷ್ಯಾ ಮತ್ತು ಪೆಸಿಫಿಕ್‌ನಾದ್ಯಂತ ಮಾನವ ಅಭಿವೃದ್ಧಿ ಒತ್ತಡಗಳನ್ನು ವಿಸ್ತರಿಸುತ್ತಿದೆ ಎಂದು UNDP ವರದಿಯಲ್ಲಿ ಹೇಳಿದೆ.

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು 2.5 ಮಿಲಿಯನ್ (25 ಲಕ್ಷ) ಭಾರತೀಯರನ್ನು ಬಡತನಕ್ಕೆ ತಳ್ಳಬಹುದು ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (UNDP) ಹೊಸ ವರದಿಯು ಎಚ್ಚರಿಕೆ ನೀಡಿದೆ. ಜೊತೆಗೆ ದೇಶವು ಮಾನವ ಅಭಿವೃದ್ಧಿ ಪ್ರಗತಿಯಲ್ಲಿ ಹಿನ್ನಡೆಯನ್ನು ಕಾಣುವ ಸಾಧ್ಯತೆಯಿದೆ.

ಸಂಘರ್ಷವು "ಏಷ್ಯಾ ಮತ್ತು ಪೆಸಿಫಿಕ್‌ನಾದ್ಯಂತ ಮಾನವ ಅಭಿವೃದ್ಧಿ ಒತ್ತಡಗಳನ್ನು ವಿಸ್ತರಿಸುತ್ತಿದೆ ಎಂದು 'ಮಧ್ಯಪ್ರಾಚ್ಯದಲ್ಲಿ ಮಿಲಿಟರಿ ಸಂಘರ್ಷ' ಏಷ್ಯಾ ಮತ್ತು ಪೆಸಿಫಿಕ್‌ನಲ್ಲಿ ಮಾನವ ಅಭಿವೃದ್ಧಿ ಪರಿಣಾಮಗಳು ಎಂಬ ತನ್ನ ವರದಿಯಲ್ಲಿ UNDP ಹೇಳಿದೆ.

"ಹೆಚ್ಚಿನ ಇಂಧನ, ಸರಕು ಮತ್ತಿತರ ವೆಚ್ಚವೂ ಮನೆಯ ಖರೀದಿ ಶಕ್ತಿಯನ್ನು ಕಡಿಮೆ ಮಾಡುತ್ತಿದ್ದು, ಆಹಾರ ಅಭದ್ರತೆಯನ್ನು ಹೆಚ್ಚಿಸುತ್ತಿದೆ. ಸಾರ್ವಜನಿಕ ಬಜೆಟ್‌ಗಳನ್ನು ತಗ್ಗಿಸುತ್ತಿದೆ ಮತ್ತು ಜೀವನೋಪಾಯವನ್ನು ದುರ್ಬಲಗೊಳಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಂಗಳವಾರ ಬಿಡುಗಡೆಯಾದ ಪ್ರಾಥಮಿಕ ಮೌಲ್ಯಮಾಪನದ ಪ್ರಕಾರ, ಜಾಗತಿಕವಾಗಿ 8.8 ಮಿಲಿಯನ್ ಜನರನ್ನು ಬಡತನಕ್ಕೆ ತಳ್ಳಬಹುದು ಎಂದು ಅಂದಾಜಿಸಿದೆ. ಈ ಸಂಘರ್ಷ ಏಷ್ಯಾ-ಪೆಸಿಫಿಕ್ ಪ್ರದೇಶಕ್ಕೆ $299 ಬಿಲಿಯನ್ ವರೆಗೆ ನಷ್ಟವನ್ನುಂಟುಮಾಡಬಹುದು ಎಂದು ಎಚ್ಚರಿಸಿದೆ.

ಭಾರತದಲ್ಲಿ ಬಡತನಕ್ಕೆ ಸಿಲುಕುವವರ ಸಂಖ್ಯೆ ಸುಮಾರು 4,00,000 ದಿಂದ 2.5 ದಶಲಕ್ಷಕ್ಕೆ ಏರಬಹುದು ಎಂದು ವರದಿ ತಿಳಿಸಿದೆ. ಸಂಘರ್ಷವು ಜಾಗತಿಕವಾಗಿ ಸುಮಾರು 1.9 ಮಿಲಿಯನ್ ನಿಂದ ಸುಮಾರು 8.8 ಮಿಲಿಯನ್ ಜನರು ಬಡತನಕ್ಕೆ ತಳ್ಳಬಹುದು ಎಂದು ವರದಿ ಹೇಳಿದೆ.

ಬಿಕ್ಕಟ್ಟಿನ ನಂತರ ಭಾರತದ ಬಡತನದ ಪ್ರಮಾಣ ಶೇ. 23.9 ರಿಂದ ಶೇಕಡಾ 24.2 ಕ್ಕೇರುವ ಸಾಧ್ಯತೆಯಿದೆ. ಇದು 2,464,698 ಜನರನ್ನು ಬಡತನಕ್ಕೆ ತಳ್ಳಬಹುದು ಎನ್ನಲಾಗಿದೆ. ಸಂಘರ್ಷಕ್ಕೂ ಮುನ್ನಾ 351,569,000 ಜನರು ಬಡತನದಲ್ಲಿ ವಾಸಿಸುತ್ತಿದ್ದರು ಎಂದು ಅಂದಾಜಿಸಲಾಗಿದೆ, ಆದರೆ ಬಿಕ್ಕಟ್ಟಿನ ನಂತರ ದೇಶದಲ್ಲಿ ಅಂದಾಜು 354,033,698 ಜನರು ಬಡತನದಲ್ಲಿ ವಾಸಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ಇದೇ ವೇಳೆ ಈ ಪ್ರದೇಶದ ದೇಶಗಳಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ (HDI) ಮೇಲೆ ಸಂಘರ್ಷದ ಪರಿಣಾಮವನ್ನು UNDP ಅಂದಾಜಿಸಿದೆ. ಇರಾನ್‌ನ HDI ಸರಿಸುಮಾರು ಒಂದರಿಂದ ಒಂದೂವರೆ ವರ್ಷಗಳ ಮಾನವ ಅಭಿವೃದ್ಧಿ ಪ್ರಗತಿಗೆ ಸಮಾನವಾದ ಪ್ರಮಾಣದಲ್ಲಿ ಕಡಿಮೆಯಾಗಬಹುದು. ಭಾರತವು ಸುಮಾರು 0.03-0.12 ವರ್ಷಗಳ ಮಾನವ ಅಭಿವೃದ್ಧಿ ಸೂಚ್ಯಂಕ ಪ್ರಗತಿಯ ನಷ್ಟವನ್ನು ಅನುಭವಿಸುವ ನಿರೀಕ್ಷೆಯಿದೆ.

ಭಾರತ ಸಂಘರ್ಷ ನಡೆಯುತ್ತಿರುವ ರಾಷ್ಟ್ರಗಳ ದೊಡ್ಡ ಆಮದುದಾರ ರಾಷ್ಟ್ರವಾಗಿದೆ. ತನ್ನ ತೈಲ ಅಗತ್ಯಗಳಲ್ಲಿ ಶೇ.90 ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ ಶೇ.40 ಕ್ಕಿಂತ ಹೆಚ್ಚು ಕಚ್ಚಾ ತೈಲ ಆಮದುಗಳನ್ನು ಮತ್ತು ಶೇ.90 ಕ್ಕಿಂತ ಹೆಚ್ಚು ಎಲ್‌ಪಿಜಿ ಆಮದುಗಳನ್ನು ಪಶ್ಚಿಮ ಏಷ್ಯಾದಿಂದ ಪಡೆಯುತ್ತದೆ. ಇದಲ್ಲದೆ, ಪಶ್ಚಿಮ ಏಷ್ಯಾದ ದೇಶಗಳು ಭಾರತದ ರಸಗೊಬ್ಬರ ಆಮದಿನ ಶೇ.45 ಕ್ಕಿಂತ ಹೆಚ್ಚು ಪೂರೈಸುತ್ತವೆ.

ಸಂಘರ್ಷದ ಆಘಾತವು ಹಲವಾರು ದೇಶಗಳಲ್ಲಿ ಇಂಧನ ಆಯ್ಕೆಗಳ ಮೇಲೂ ಪ್ರಭಾವ ಬೀರುತ್ತಿದೆ. ಎಲ್‌ಎನ್‌ಜಿ ಬೆಲೆಗಳು ಏರುತ್ತಿರುವುದರಿಂದ, ಭಾರತ, ಥೈಲ್ಯಾಂಡ್, ಫಿಲಿಪೈನ್ಸ್ ಮತ್ತು ವಿಯೆಟ್ನಾಂ ಸೇರಿದಂತೆ ಕೆಲವು ಆರ್ಥಿಕತೆಗಳು ಕಲ್ಲಿದ್ದಲು ಆಧಾರಿತ ವಿದ್ಯುತ್‌ನ ಮೇಲಿನ ಅವಲಂಬನೆಯನ್ನು ಹೆಚ್ಚಿಸಿವೆ.

ಭಾರತದ ಅಂದಾಜಿನ ಪ್ರಕಾರ ಪಶ್ಚಿಮ ಏಷ್ಯಾದ ಮಾರುಕಟ್ಟೆಗಳು ಶೇ. 14 ರಷ್ಟು ರಫ್ತು ಮತ್ತು ಶೇ. 20.9 ರಷ್ಟು ಆಮದು ಹೊಂದಿದ್ದು, ತೈಲೇತರ ರಫ್ತುಗಳಲ್ಲಿ ಸರಿಸುಮಾರು 48 ಬಿಲಿಯನ್ ಯುಎಸ್ ಡಾಲರ್‌ಗಳಷ್ಟು, ವಿಶೇಷವಾಗಿ ಬಾಸ್ಮತಿ ಅಕ್ಕಿ, ಚಹಾ, ರತ್ನಗಳು ಮತ್ತು ಆಭರಣಗಳು ಮತ್ತು ಉಡುಪುಗಳಲ್ಲಿವೆ. ಗಲ್ಫ್ ವಿಮಾನಯಾನ ಸಂಸ್ಥೆಗಳು ವಿಮಾನಗಳನ್ನು ರದ್ದುಗೊಳಿಸಿದ್ದರಿಂದ ಬಾಂಗ್ಲಾದೇಶ ಮತ್ತು ಭಾರತದಿಂದ ಹಡುಗುಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರಿಂದ ಬಾಂಗ್ಲಾದೇಶವು ಹೆಚ್ಚಿನ ಸಮಸ್ಯೆ ಎದುರಿಸುತ್ತಿದೆ ಎಂದು UNDP ವರದಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಿನ್ನ ಮೇಲೆ ಹೈಕಮಾಂಡ್ ಸಿಟ್ಟಾಗಿದೆ: ಜಮೀರ್ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ; ಶೀಘ್ರದಲ್ಲೇ ತಲೆದಂಡ ಸಾಧ್ಯತೆ

ಬೆಂಗಳೂರಿನಲ್ಲೊಂದು ವಿಚಿತ್ರ ಪ್ರಕರಣ: ನಮ್ಮ ಬೆಕ್ಕು ಪ್ರೆಗ್ನೆಂಟ್ ಆಗಲು ನಿಮ್ಮ ಗಂಡು ಬೆಕ್ಕೇ ಕಾರಣ; ಮಾರಾಮಾರಿ! Video ನೋಡಿ

ಬಿಹಾರ: ನಿತೀಶ್ ಆಡಳಿತ ಅಂತ್ಯ; ಮೊದಲ ಬಿಜೆಪಿ CM ಆಗಿ ಸಾಮ್ರಾಟ್ ಚೌಧರಿ ಆಯ್ಕೆ!

ಅಮೆರಿಕಕ್ಕೆ ಸೆಡ್ಡು: 'ನೌಕಾ ದಿಗ್ಬಂಧನ' ನಡುವೆ ಹಾರ್ಮುಜ್ ಜಲಸಂಧಿ ದಾಟಿದ ಇರಾನ್‌ ನ ಎರಡು ಹಡಗುಗಳು!

"ನಿತೀಶ್ ಕುಮಾರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿಯೇ ಪಗಡಿ ತೆಗೆಯುತ್ತೇನೆ": ಕೊನೆಗೂ ಶಪಥ ಈಡೇರಿಸಿಕೊಂಡ ಸಾಮ್ರಾಟ್ ಚೌಧರಿ!

SCROLL FOR NEXT