ಪಾಕ್ ಆಕ್ರಮಿತ ಕಾಶ್ಮೀರ online desk
ದೇಶ

ಪಾಕಿಸ್ತಾನಕ್ಕೆ ಶಾಕ್! ಕೇಂದ್ರದ ಡೀಲಿಮಿಟೇಷನ್ ಮಸೂದೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಕ್ಷೇತ್ರಗಳ ಮರುಹಂಚಿಕೆಗೆ ಕ್ರಮ!

ಈ ಕ್ರಮವನ್ನು, ಪಾಕ್ ಆಕ್ರಮಿತ ಪ್ರದೇಶದ ಮೇಲೆ ಭಾರತದ ದೀರ್ಘಕಾಲದ ಸಂವಿಧಾನಿಕ ಹಕ್ಕನ್ನು ಪುನರುಚ್ಚರಿಸುವ ಹೆಜ್ಜೆಯಾಗಿ ಪ್ರಸ್ತುತಪಡಿಸಲಾಗುತ್ತಿದೆ.

ನವದೆಹಲಿ: ಕೇಂದ್ರ ಸರ್ಕಾರ ಈ ವಾರ ಸಂಸತ್ತಿನಲ್ಲಿ ‘ಡೀಲಿಮಿಟೇಷನ್ 2026’ ನ್ನು ಮಂಡಿಸಲು ಸಜ್ಜಾಗಿದೆ. ಈ ಮಸೂದೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶವು ಮತ್ತೆ ಭಾರತದ ನಿಯಂತ್ರಣಕ್ಕೆ ಬಂದರೆ, ಅಲ್ಲಿ ಕ್ಷೇತ್ರ ಮರುಹಂಚಿಕೆ ನಡೆಸಲು ಬೇಕಾದ ಕಾನೂನು ಚೌಕಟ್ಟನ್ನು ನಿರ್ದಿಷ್ಟಗೊಳಿಸುತ್ತದೆ.

ಈ ಕ್ರಮವನ್ನು, ಪಾಕ್ ಆಕ್ರಮಿತ ಪ್ರದೇಶದ ಮೇಲೆ ಭಾರತದ ದೀರ್ಘಕಾಲದ ಸಂವಿಧಾನಿಕ ಹಕ್ಕನ್ನು ಪುನರುಚ್ಚರಿಸುವ ಹೆಜ್ಜೆಯಾಗಿ ಪ್ರಸ್ತುತಪಡಿಸಲಾಗುತ್ತಿದೆ. ಪ್ರಸ್ತಾವಿತ ಕಾನೂನು ಪ್ರಕಾರ, ಪರಿಸ್ಥಿತಿ ಬದಲಾಗುವ ಸಂದರ್ಭದಲ್ಲಿ, ಪಾಕಿಸ್ತಾನ ಆಕ್ರಮಣದಲ್ಲಿರುವ ಆ ಭಾಗಗಳಲ್ಲಿ ಮರುಹಂಚಿಕೆ ಆಯೋಗದ ಅಧಿಕಾರವನ್ನು ಭಾರತ ಚುನಾವಣಾ ಆಯೋಗವೇ ವಹಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ.

ಪ್ರಸ್ತುತ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಆ ಪ್ರದೇಶಗಳಿಗೆ ಮೀಸಲಾಗಿರುವ 24 ಸ್ಥಾನಗಳು ಇವೆ; ಆದರೆ ಇವುಗಳಲ್ಲಿ ಇದುವರೆಗೆ ಯಾವುದೇ ಚುನಾವಣೆ ನಡೆದಿಲ್ಲ. ಈ ಮಸೂದೆಗೆ ಸಂಬಂಧಿಸಿದ ಚರ್ಚೆಯನ್ನು ಸಂಸತ್ತಿನ ವಿಸ್ತರಿತ ಮೂರು ದಿನಗಳ ಬಜೆಟ್ ಅಧಿವೇಶನದಲ್ಲಿ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.

ಸರ್ಕಾರದ ವಲಯಗಳು, ಮಸೂದೆ ಅಂಗೀಕಾರಕ್ಕೆ ಸರಳ ಬಹುಮತವೇ ಸಾಕು ಎಂದು ಹೇಳುತ್ತಿದ್ದು, ಆಡಳಿತಾರೂಢ ಮೈತ್ರಿ ಅದನ್ನು ಸುಲಭವಾಗಿ ಪಡೆಯುವ ವಿಶ್ವಾಸದಲ್ಲಿದೆ. ಆದರೆ, ಇದಕ್ಕೆ ಸಂಬಂಧಿಸಿದ ಇನ್ನೆರಡು ಕಾನೂನು ಪ್ರಸ್ತಾವನೆಗಳಾದ — ಸಂವಿಧಾನ (131ನೇ ತಿದ್ದುಪಡಿ) ಮಸೂದೆ 2026 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ 2026 ಗಳಿಗೆ ವಿಶೇಷ ಬಹುಮತದ ಅಗತ್ಯವಿರುತ್ತದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಭಾರತದ ಹಕ್ಕು 1947ರಲ್ಲಿ ಮಹಾರಾಜ ಹರಿಸಿಂಗ್ ಸಹಿ ಮಾಡಿದ ವಿಲೀನ ಪತ್ರದ ಮೇಲೆ ಆಧಾರಿತವಾಗಿದೆ. ಆ ವಿಲೀನ ಪತ್ರದ ಮೂಲಕ ಸಂಪೂರ್ಣ ಜಮ್ಮು ಮತ್ತು ಕಾಶ್ಮೀರ ಸಂಸ್ಥಾನ ಭಾರತದಲ್ಲಿ ವಿಲೀನಗೊಂಡಿತ್ತು. ಈ ನಿಲುವನ್ನು ಅನೇಕ ಕಾನೂನು ಮತ್ತು ರಾಜಕೀಯ ಕ್ರಮಗಳ ಮೂಲಕ ಪುನಃ ಪುನಃ ದೃಢಪಡಿಸಲಾಗಿದೆ. 1994ರಲ್ಲಿ ಸಂಸತ್ತಿನಲ್ಲಿ ಏಕಮತದಿಂದ ಅಂಗೀಕರಿಸಲಾದ ನಿರ್ಣಯವೂ ಇದರಲ್ಲಿ ಪ್ರಮುಖವಾಗಿದ್ದು, ಪಾಕಿಸ್ತಾನ ಆಕ್ರಮಿತ ಪ್ರದೇಶಗಳನ್ನು ಖಾಲಿ ಮಾಡಬೇಕೆಂದು ಅದರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಆಡಳಿತಾತ್ಮಕ ನಿಯಂತ್ರಣ ಇಲ್ಲದಿದ್ದರೂ, ಭಾರತ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಮೀಸಲಿಟ್ಟಿರುವ 24 ವಿಧಾನಸಭಾ ಸ್ಥಾನಗಳು, ಅನೇಕ ಮರುವಿಂಗಡಣೆ (ಡಿಲಿಮಿಟೇಶನ್) ಪ್ರಕ್ರಿಯೆಗಳ ನಂತರವೂ ಬದಲಾಗದೆ ಉಳಿದಿವೆ.

ಜಮ್ಮು ಮತ್ತು ಕಾಶ್ಮೀರದ ಒಟ್ಟು ಸ್ಥಾನಗಳ ಸಂಖ್ಯೆಯಲ್ಲಿ ಕಾಲಕ್ರಮೇಣ ತಿದ್ದುಪಡಿ ನಡೆದಿದ್ದರೂ, ಆ 24 ಸ್ಥಾನಗಳು ಖಾಲಿಯೇ ಇವೆ, ಏಕೆಂದರೆ ಆ ಪ್ರದೇಶದಲ್ಲಿ ಚುನಾವಣೆಗಳನ್ನು ನಡೆಸಲು ಸಾಧ್ಯವಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಹಲವು ಬಾರಿ ಪುನರುಚ್ಚರಿಸಿದ್ದಾರೆ ಮತ್ತು ಭಾರತ ಅದನ್ನು ಮರಳಿ ಪಡೆಯಲಿದೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಹ, ವಿಶೇಷವಾಗಿ 2019ರಲ್ಲಿ ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ನೀಡಿದ್ದ ವಿಶೇಷ ಹುದ್ದೆಯನ್ನು ರದ್ದುಗೊಳಿಸಿದ ನಂತರ, ಜಮ್ಮು ಮತ್ತು ಕಾಶ್ಮೀರವನ್ನು ಸಂಪೂರ್ಣವಾಗಿ ಏಕೀಕರಿಸುವ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದ್ದಾರೆ.

ಪಕ್ಷಭೇದವನ್ನು ಮೀರಿ ಬಂದಿರುವ ಅನೇಕ ಸರ್ಕಾರಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಗ್ಗೆ ಒಂದೇ ರೀತಿಯ ನಿಲುವನ್ನು ಕಾಯ್ದುಕೊಂಡಿವೆ. ತಂತ್ರಗಳು ಬದಲಾಗಿದ್ದರೂ, ಭಾರತದ ಅಧಿಕೃತ ನಿಲುವು ಬದಲಾಗಿಲ್ಲ; ಈ ವಿಷಯವನ್ನು ರಾಜತಾಂತ್ರಿಕ ವೇದಿಕೆಗಳಲ್ಲಿಯೂ, ಸಂಸತ್ತಿನ ಚರ್ಚೆಗಳಲ್ಲಿಯೂ ನಿರಂತರವಾಗಿ ಎತ್ತಲಾಗುತ್ತಿದೆ.

ಆದರೆ, ವಿರೋಧ ಪಕ್ಷಗಳು ಮಸೂದೆ ತರಲಾದ ಸಮಯದ ಬಗ್ಗೆ ಪ್ರಶ್ನೆ ಎತ್ತಿ, ಯಾವುದೇ ಮರುವಿಂಗಡಣೆ ಪ್ರಕ್ರಿಯೆ ಹೊಸ ಜನಗಣತಿಯ ನಂತರವೇ ನಡೆಯಬೇಕು ಎಂದು ವಾದಿಸುತ್ತಿವೆ ಮತ್ತು ಇದರ ರಾಜಕೀಯ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡುತ್ತಿವೆ. ಸರ್ಕಾರದ ಅಭಿಪ್ರಾಯದಲ್ಲಿ, ಈ ಕಾನೂನು ಸಂವಿಧಾನಾತ್ಮಕ ಚೌಕಟ್ಟನ್ನು ಪೂರ್ಣಗೊಳಿಸಲು ಮತ್ತು ಭಾರತದ ಭೌಗೋಳಿಕ ಹಕ್ಕಿನ ನಿಲುವನ್ನು ಮತ್ತಷ್ಟು ಬಲಪಡಿಸಲು ಅಗತ್ಯವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

EVM ಬದಲು ಬ್ಯಾಲೆಟ್ ಪೇಪರ್ ಬಳಕೆ ಮಸೂದೆಗೆ ಕೊನೆಗೂ ರಾಜ್ಯಪಾಲರ ಅಂಕಿತ!

'ಚೀನಾ, ಇಡೀ ಜಗತ್ತಿಗೆ' ಹಾರ್ಮುಜ್ ಅನ್ನು 'ಶಾಶ್ವತವಾಗಿ' ತೆರೆಯುತ್ತೇವೆ; ಜಿನ್ ಪಿಂಗ್ ನನಗೆ ದೊಡ್ಡ ಅಪ್ಪುಗೆ ನೀಡುತ್ತಾರೆ: ಟ್ರಂಪ್

BJP ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣ: Congress ಶಾಸಕ ವಿನಯ್ ಕುಲಕರ್ಣಿ ಅಪರಾಧಿ; ಕೋರ್ಟ್ ತೀರ್ಪು!

AAP ರಾಜ್ಯಸಭೆ ಉಪನಾಯಕ ಸ್ಥಾನದಿಂದ ತೆಗೆದರೂ ರಾಘವ್ ಚಡ್ಡಾ ಜೊತೆ ನಿಂತ ಕೇಂದ್ರ ಸರ್ಕಾರ!

ತಂದೆಯ ಲೆಗಸಿ ಮುಂದುವರೆಸಲು ರಾಜಕೀಯಕ್ಕೆ ಬಂದೆ: ಕುಟುಂಬ ರಾಜಕಾರಣಕ್ಕೆ ಯತೀಂದ್ರ ಸಿದ್ದರಾಮಯ್ಯ ಹೊಸ ವ್ಯಾಖ್ಯಾನ!

SCROLL FOR NEXT