ನಿದಾ ಖಾನ್ 
ದೇಶ

'TCSನಲ್ಲಿ ಲವ್ ಜಿಹಾದ್, ಲೈಂಗಿಕ ಕಿರುಕುಳ' ಪ್ರಕರಣ: HR ನಿದಾ ಖಾನ್ 'ಮಾಸ್ಟರ್ ಮೈಂಡ್'; ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ!

ಪೊಲೀಸರ ಪ್ರಕಾರ, ಕಂಪನಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕಿ ನಿದಾ ಖಾನ್ ಅವರು ದೂರುಗಳನ್ನು ನಿಗ್ರಹಿಸಲು ಮತ್ತು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸಿದ 'ಮಾಸ್ಟರ್ ಮೈಂಡ್' ಎಂದು ಹೇಳಲಾಗಿದೆ.

ನಾಸಿಕ್: ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ದೇಶದ ಪ್ರಮುಖ ಟೆಕ್ ಕಂಪನಿ ಟಿಸಿಎಸ್ ನಲ್ಲಿ ನಡೆದಿದೆ ಎನ್ನಲಾದ ಕಾರ್ಪೊರೇಟ್ ಜಿಹಾದ್ ಮತ್ತು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ನಾಸಿಕ್ ನ ಟಿಸಿಎಸ್ ಶಾಖೆಯಲ್ಲಿ ನಡೆದ ಲವ್ ಜಿಹಾದ್ ಮತ್ತು ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಗಳ ವಿರುದ್ಧ ಸಂತ್ರಸ್ತರು ಪದೇ ಪದೇ ನೀಡಿದ ದೂರುಗಳನ್ನು ನಿರ್ಲಕ್ಷಿಸಿದ್ದಾರೆ ಮತ್ತು ಕಂಪನಿಯ ಉನ್ನತ ಅಧಿಕಾರಿಗಳಿಗೆ ಅವುಗಳನ್ನು ರವಾನಿಸಲು ವಿಫಲರಾಗಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಬುಧವಾರ ತಿಳಿಸಿದೆ.

ಪೊಲೀಸರ ಪ್ರಕಾರ, ಕಂಪನಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕಿ ನಿದಾ ಖಾನ್ ಅವರು ದೂರುಗಳನ್ನು ನಿಗ್ರಹಿಸಲು ಮತ್ತು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸಿದ 'ಮಾಸ್ಟರ್ ಮೈಂಡ್' ಎಂದು ಹೇಳಲಾಗಿದೆ.

ತನಿಖೆಯ ಸಮಯದಲ್ಲಿ, ಪೊಲೀಸ್ ಅಧಿಕಾರಿಗಳು ಆರೋಪಿಗಳ ನಡುವೆ ವಿನಿಮಯವಾದ ಸುಮಾರು 78 'ಅನುಮಾನಾಸ್ಪದ' ಕರೆ, ಇಮೇಲ್‌ಗಳು ಮತ್ತು ಚಾಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಸಂಭಾವ್ಯ ಹಣಕಾಸಿನ ವಹಿವಾಟಿನ ಪುರಾವೆಗಳನ್ನು ಸಹ ಪೊಲೀಸರು ಸಂಗ್ರಹಿಸಿದ್ದಾರೆ.

ಪೊಲೀಸರ ಪ್ರಕಾರ, ಮಾನವ ಸಂಪನ್ಮೂಲ ವ್ಯವಸ್ಥಾಪಕರು ಸಂತ್ರಸ್ತರಿಗೆ ವಿಷಯವನ್ನು ಕೈಬಿಡುವಂತೆ ಪದೇ ಪದೇ ಹೇಳಿದ್ದಾರೆ ಮತ್ತು ಕಚೇರಿಯಲ್ಲಿ ಪಿಒಎಸ್ಹೆಚ್ (ಲೈಂಗಿಕ ಕಿರುಕುಳ ತಡೆಗಟ್ಟುವಿಕೆ) ಸಮಿತಿಯ ಸದಸ್ಯರಾಗಿದ್ದರೂ ಯಾವುದೇ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲರಾಗಿದ್ದಾರೆ.

ಏತನ್ಮಧ್ಯೆ, ಟಿಸಿಎಸ್ ನಾಸಿಕ್ ಶಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪಕರು ಪ್ರಕರಣ ದಾಖಲಿಸಿದ ನಂತರವೂ ಮೂರನೇ ಆರೋಪಿ ಡ್ಯಾನಿಶ್ ಶೇಖ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದ್ದು, ಬಂಧನಕ್ಕೆ ಮುನ್ನ ಶೇಖ್‌ಗೆ ಕರೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಿಸಿಎಸ್ ನಾಸಿಕ್ ಶಾಖೆಯಲ್ಲಿ ಮಹಿಳಾ ಉದ್ಯೋಗಿಗಳ ಮೇಲಿನ ಕಿರುಕುಳದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡ(ಎಸ್‌ಐಟಿ) ಫೋನ್ ಕರೆ, ಸಂದೇಶಗಳು ಮತ್ತು ಇಮೇಲ್ ದಾಖಲೆಗಳನ್ನು ವಿಶ್ಲೇಷಿಸಿದ ನಂತರ ಆರೋಪಿಗಳ ನಡುವಿನ "ಒಡಂಬಡಿಕೆ"ಯ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 9 ಪ್ರಕರಣಗಳು ದಾಖಲಾಗಿದ್ದು, 1 ಪ್ರಕರಣ ಡಿಯೋಲಾಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಮತ್ತು ಮುಂಬೈ ನಾಕಾದಲ್ಲಿ ಇತರ 8 ಪ್ರಕರಣಗಳು ದಾಖಲಾಗಿವೆ. ಒಬ್ಬ ವ್ಯಕ್ತಿ ಸೇರಿದಂತೆ ಒಟ್ಟು 9 ದೂರುಗಳಿದ್ದು, ಕಿರುಕುಳ, ಚಿತ್ರಹಿಂಸೆ ಮತ್ತು ಬಲವಂತದ ಧಾರ್ಮಿಕ ಮತಾಂತರದ ಆರೋಪಗಳು ಕೇಳಿ ಬಂದಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿಕೆಶಿ ಪದಗ್ರಹಣಕ್ಕೂ ಮುನ್ನವೇ ಸಿದ್ದರಾಮಯ್ಯಗೆ ಮಹತ್ವದ ಸ್ಥಾನ: ಕಾಂಗ್ರೆಸ್‌ ಪರಮೋಚ್ಚ ಸಮಿತಿಗೆ ನೇಮಕ

DCM ಕುರ್ಚಿ ಮೇಲೆ ಕಣ್ಣಿಟ್ಟವರಿಗೆ ಶಾಕ್! ಒಬ್ಬರಿಗೆ ಮಾತ್ರ ಉಪ ಮುಖ್ಯಮಂತ್ರಿ ಸ್ಥಾನ; ಯಾರೂ ಆ ಪ್ರಭಾವಿ ನಾಯಕ?

ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಸಂಬಂಧಿತ ರಸ್ತೆ ತಡೆ ಪ್ರಕರಣ: 31 ಜನರ ವಿರುದ್ಧ ಎನ್‌ಐಎ ಚಾರ್ಜ್ ಶೀಟ್

ಸಿನಿಮೀಯ ಶೈಲಿಯಲ್ಲಿ ಮಾಜಿ MLC ಕಿಡ್ನ್ಯಾಪ್: 3 ಕೋಟಿ ರೂ ಗೆ ಡಿಮ್ಯಾಂಡ್; ದುಷ್ಟರಿಂದ ದಯಾನಂದ ರೆಡ್ಡಿ ಬಚಾವ್​​ ಆಗಿದ್ದೇ ರೋಚಕ!

ಬಂಗಾಳದಲ್ಲಿ ವಂದೇ ಮಾತರಂ ಕಡ್ಡಾಯ: ಮುಸ್ಲಿಂ ಲಾ ಬೋರ್ಡ್ ತೀವ್ರ ವಿರೋಧ; ಆದೇಶ ಹಿಂಪಡೆಯುವಂತೆ ಆಗ್ರಹ

SCROLL FOR NEXT