ಸಹರ್ ಶೇಖ್ 
ದೇಶ

ಮುಂಬೈಗೆ ಹಸಿರು ಬಣ್ಣ ಬಳಿತೀವಿ ಅಂದಿದ್ದ ಸಹರ್ ಶೇಖ್ ಗೆ ಸಂಕಷ್ಟ: AIMIM ಕೌನ್ಸಿಲರ್ ಹುದ್ದೆ ಕಳೆದುಕೊಳ್ಳುವ ಸಾಧ್ಯತೆ!

ಮಹಾರಾಷ್ಟ್ರದ ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಮುಂಬ್ರಾದಲ್ಲಿ ವಾರ್ಡ್ 30 ಗೆದ್ದ ನಂತರ ಸುದ್ದಿಯಾಗಿದ್ದ AIMIM ಕೌನ್ಸಿಲರ್ ಸಹರ್ ಶೇಖ್ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿದ್ದಾರೆ. ಸಹರ್ ಶೇಖ್ ನಕಲಿ ಜಾತಿ ಪ್ರಮಾಣಪತ್ರ ಬಳಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮಹಾರಾಷ್ಟ್ರದ ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಮುಂಬ್ರಾದಲ್ಲಿ ವಾರ್ಡ್ 30 ಗೆದ್ದ ನಂತರ ಸುದ್ದಿಯಾಗಿದ್ದ AIMIM ಕೌನ್ಸಿಲರ್ ಸಹರ್ ಶೇಖ್ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿದ್ದಾರೆ. ಸಹರ್ ಶೇಖ್ ನಕಲಿ ಜಾತಿ ಪ್ರಮಾಣಪತ್ರ ಬಳಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದಾಗ್ಯೂ, ವಿಷಯವು ಈಗ ಹೊಸ ತಿರುವು ಪಡೆದುಕೊಂಡಿದೆ. ಥಾಣೆ ತಹಶೀಲ್ದಾರ್ ಕಚೇರಿಯು ಯೂನಸ್ ಶೇಖ್ ವಿರುದ್ಧ ನಕಲಿ ಜಾತಿ ಪ್ರಮಾಣಪತ್ರವನ್ನು ಬಳಸಿ ತಮ್ಮ ಮಗಳು ಸಹರ್ ಶೇಖ್‌ಗೆ ಜಾತಿ ಪ್ರಮಾಣಪತ್ರವನ್ನು ಪಡೆದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲು ಶಿಫಾರಸು ಮಾಡಿದೆ.

ಇದರ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ಯೂನಸ್ ಶೇಖ್ ಪೊಲೀಸ್ ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಸುಮಾರು 15-20 ನಿಮಿಷಗಳ ಕಾಲ ಪೊಲೀಸ್ ಅಧಿಕಾರಿಗಳು ಅವರನ್ನು ಪ್ರಶ್ನಿಸಿದ್ದಾರೆ. ಇನ್ನು ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ಯೂನಸ್ ಶೇಖ್ ನಿರಾಕರಿಸಿದ್ದು ನಾವು ಸೂಕ್ತ ಉತ್ತರವನ್ನು ನೀಡುತ್ತೇವೆ. ಎರಡು ದಿನಗಳಲ್ಲಿ ನಮ್ಮ ನಿಲುವನ್ನು ಸ್ಪಷ್ಟಪಡಿಸುತ್ತೇವೆ ಎಂದು ಹೇಳಿದರು.

ಈ ವರ್ಷದ ಜನವರಿಯಲ್ಲಿ ನಡೆದ ಪುರಸಭೆ ಚುನಾವಣೆಯ ನಂತರ ಸಹರ್ ಶೇಖ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಸ್ಥಳೀಯ ಶಾಸಕ ಜಿತೇಂದ್ರ ಅವ್ಹಾದ್ ಅವರ ಬೆಂಬಲಿತ ಅಭ್ಯರ್ಥಿಯನ್ನು ತಮ್ಮ ಮೊದಲ ಚುನಾವಣೆಯಲ್ಲಿ ಸೋಲಿಸುವ ಮೂಲಕ ಸುದ್ದಿಯಾದರು. ಅವರ ವಿಜಯೋತ್ಸವದ ಮೆರವಣಿಗೆಯ ಸಮಯದಲ್ಲಿ ಸಹರ್ ಶೇಖ್, ಅವ್ಹಾದ್ ರನ್ನು "ನಾನು ನಿಮ್ಮನ್ನು ಹೇಗೆ ಸೋಲಿಸಿದೇ ನೋಡಿದ್ರಾ?" ಎಂದು ಕೆಣಕಿದ್ದರು. ಅಲ್ಲದೆ ಇಡೀ ಮುಂಬ್ರಾವನ್ನು ಹಸಿರು ಬಣ್ಣ ಬಳಿಯುವುದಾಗಿ ಭರವಸೆ ನೀಡಿದ್ದರು. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು ನಂತರ ಕ್ಷಮೆಯಾಚಿಸಿದರು.

ಇಡೀ ವಿಷಯವೇನು?

ತಹಶೀಲ್ದಾರ್ ಉಮೇಶ್ ಪಾಟೀಲ್ ಅವರು ಯೂನಸ್ ಶೇಖ್ ವಿರುದ್ಧ ಪ್ರಕರಣ ದಾಖಲಿಸಲು ಶಿಫಾರಸು ಮಾಡಿದ್ದಾರೆ. ಎನ್‌ಸಿಪಿ (ಅಜಿತ್ ಬಣ) ಸೋತ ಅಭ್ಯರ್ಥಿ ಸಿದ್ದಿಕಿ ಫರಾ ಶಬಾಬ್ ಅಹ್ಮದ್ ಅವರು ಸಹರ್ ಶೇಖ್ ಅವರ ಜಾತಿ ಪ್ರಮಾಣಪತ್ರದ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ. ಕಳೆದ ತಿಂಗಳು ಉಪವಿಭಾಗಾಧಿಕಾರಿ (ಎಸ್‌ಡಿಒ) ಗೆ ಸಲ್ಲಿಸಿದ ವರದಿಯಲ್ಲಿ ಯೂನಸ್ ಶೇಖ್ ಅವರು ಚುನಾವಣಾ ಆಯೋಗ ಸೇರಿದಂತೆ ನಾಲ್ಕು ಸರ್ಕಾರಿ ಸಂಸ್ಥೆಗಳನ್ನು ಪ್ರಾಥಮಿಕವಾಗಿ ದಾರಿ ತಪ್ಪಿಸಿದ್ದಾರೆ ಎಂದು ಹೇಳಲಾಗಿದೆ. ವರದಿಯಲ್ಲಿ ಯೂನಸ್ ಶೇಖ್ ಅವರ 2011ರ ಒಬಿಸಿ ಪ್ರಮಾಣಪತ್ರವು ಅಧಿಕೃತ ಸ್ವರೂಪಕ್ಕೆ ಹೊಂದಿಕೆಯಾಗಲಿಲ್ಲ ಎಂದು ಹೇಳಲಾಗಿದೆ.

ತನಿಖೆಯ ಸಮಯದಲ್ಲಿ, ಸಹರ್ ಶೇಖ್ ಅವರ ತಂದೆ ಮತ್ತು ಚಿಕ್ಕಪ್ಪ ಮೂಲತಃ ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿಗಳು ಎಂದು ಕಂಡುಬಂದಿದೆ. ಅವರು ನಿಯಮಗಳ ಅಡಿಯಲ್ಲಿ ಫಾರ್ಮ್ -10 ವಲಸೆ ಪ್ರಮಾಣಪತ್ರಗಳನ್ನು ಪಡೆಯುವುದು ಕಡ್ಡಾಯವಾಗಿದೆ. ಆದಾಗ್ಯೂ, ಶೇಖ್ ಮಹಾರಾಷ್ಟ್ರದ ಸ್ಥಳೀಯರಿಗೆ ಮೀಸಲಾಗಿರುವ ಫಾರ್ಮ್ -8 ಅಡಿಯಲ್ಲಿ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನು ಸಾಧಿಸಲು ಶೇಖ್ ದಾಖಲೆಗಳನ್ನು ನಕಲು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯಲಿದ್ದು ಆರೋಪ ನಿಜವೆಂದು ಕಂಡುಬಂದರೆ, ಸಹರ್ ಶೇಖ್ ಕೌನ್ಸಿಲರ್ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ ನೌಕಾ ದಿಗ್ಬಂಧನ ಮುಂದುವರೆಸಿದರೆ ಹಾರ್ಮುಜ್ ಜಲಸಂಧಿ ಬಂದ್: ಇರಾನ್ ಎಚ್ಚರಿಕೆ, ಇಂಧನ ಮಾರುಕಟ್ಟೆ ಮತ್ತೆ ಅಸ್ಥಿರ..!

ಡಾಕ್ಟರ್ 'ಹೃದಯವಂತ' ಅಂತ ಗೆಲ್ಲಿಸಿದ್ರೆ, ಕರ್ನಾಟಕದ ಬುಡಕ್ಕೆ ತಂದಿಟ್ರು: ಡಾ. ಸಿಎನ್ ಮಂಜುನಾಥ್ ವಿರುದ್ಧ ಆಕ್ರೋಶ

IPL 2026: ಇಲ್ಲಿಯವರೆಗೂ ಒಂದೇ ಒಂದು ವಿಕೆಟ್ ಪಡೆಯದ ವಿಶ್ವ ಪ್ರಸಿದ್ಧ ವೇಗಿ! ಹತಾಶೆಗೆ ಅಭಿಮಾನಿಗಳು ಶಾಕ್- Video

ಸೂರ್ಯಾಗೆ ಕೊಕ್?; ಭಾರತ ಟಿ20 ತಂಡದ ನಾಯಕ ಪಟ್ಟಕ್ಕೆ ಶ್ರೇಯಸ್ ಅಯ್ಯರ್, 11ರ ಬಳಗದಲ್ಲಿ ಸ್ಥಾನಕ್ಕೆ ರಜತ್ ಪಟಿದಾರ್ ಪೈಪೋಟಿ!

RCB vs DC: ಬೆಂಗಳೂರಿನಲ್ಲಿ ಇಂದು IPL; ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ, ವಾಹನ ನಿಲುಗಡೆ ಮಾಹಿತಿ...

SCROLL FOR NEXT