ತಮಿಳುನಾಡು-ಕೇರಳ ಚುನಾವಣೆ 
ದೇಶ

Exit polls: ತಮಿಳುನಾಡಿನಲ್ಲಿ ನಟ ವಿಜಯ್ ಗೆ ಮುಖಭಂಗ,; DMKಗೆ ಮತ್ತೆ ಅಧಿಕಾರ; 10 ವರ್ಷಗಳ ಬಳಿಕ UDFಗೆ ಕೇರಳ ಗದ್ದುಗೆ, CM ವಿಜಯನ್ ಗೆ ಶಾಕ್!

ಎಕ್ಸಿಟ್ ಪೋಲ್ ಪ್ರಕಾರ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಕೇರಳದಲ್ಲಿ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಬಹುಮತ ಪಡೆಯಲಿದ್ದು, ಬಿಜೆಪಿ ಹೀನಾಯ ಸೋಲನ್ನು ಅನುಭವಿಸಲಿದೆ.

ನವದೆಹಲಿ: ನಿರೀಕ್ಷೆಯಂತೆಯೇ ಪಶ್ಚಿಮ ಬಂಗಾಳದಲ್ಲಿ 2ನೇ ಹಂತದ ಮತದಾನ ಮುಕ್ತಾಯವಾಗುತ್ತಲೇ ಎಕ್ಸಿಟ್ ಪೋಲ್ ಹೊರಬಿದ್ದಿದ್ದು, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯ ಭವಿಷ್ಯದ ಕುರಿತು ಬೆಳಕು ಚೆಲ್ಲಿದೆ.

ಏಪ್ರಿಲ್ 9ರಂದು ಅಸ್ಸಾಂನ 126 ಕ್ಷೇತ್ರಗಳು, ಕೇರಳದ 140 ಕ್ಷೇತ್ರಗಳು ಮತ್ತು ಪುದುಚೇರಿಯ 30 ಕ್ಷೇತ್ರಗಳಿಗೆ ಏಕಕಾಲದಲ್ಲಿ ವಿಧಾನಸಭಾ ಚುನಾವಣೆ ನಡೆಯಿತು. ಏಪ್ರಿಲ್ 23ರಂದು ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಿಗೆ ಮತದಾನ ನಡೆಯಿತು.

ಪಶ್ಚಿಮ ಬಂಗಾಳದಲ್ಲಿ 152 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಏಪ್ರಿಲ್ 23ರಂದು ನಡೆಯಿತು. ಎರಡನೇ ಮತ್ತು ಅಂತಿಮ ಹಂತದ ಮತದಾನ ಇಂದು ನಡೆಯಿತು. ಈ 5 ರಾಜ್ಯಗಳ ಚುನಾವಣಾ ಫಲಿತಾಂಶ ಮೇ 4ರಂದು ಹೊರಬೀಳಲಿದೆ.

ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 9ರಂದು ಮತದಾನ ನಡೆದರೆ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಮೊದಲ ಹಂತದಲ್ಲಿ ಏಪ್ರಿಲ್ 23 ರಂದು ಮತದಾನ ನಡೆಯಿತು. ಇಂದು ಪಶ್ಚಿಮ ಬಂಗಾಳದ 2ನೇ ಮತ್ತು ಕೊನೆಯ ಹಂತದ ಮತದಾನ ನಡೆದಿದೆ. ನಿಖರವಾದ ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ.

ತಮಿಳುನಾಡಿನಲ್ಲಿ ಮತ್ತೆ ಡಿಎಂಕೆ ಸರ್ಕಾರ

ಎಕ್ಸಿಟ್ ಪೋಲ್ ಪ್ರಕಾರ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಕೇರಳದಲ್ಲಿ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಬಹುಮತ ಪಡೆಯಲಿದ್ದು, ಬಿಜೆಪಿ ಹೀನಾಯ ಸೋಲನ್ನು ಅನುಭವಿಸಲಿದೆ. ಪುದುಚೇರಿಯಲ್ಲಿ ಬಿಜೆಪಿ ಮತ್ತೊಮ್ಮೆ ಸರ್ಕಾರ ರಚಿಸುವ ಸಾಧ್ಯತೆ ಇದೆ. ತಮಿಳುನಾಡಿನಲ್ಲಿ ಡಿಎಂಕೆ ಪ್ಲಸ್ 120 ರಿಂದ 140 ಸ್ಥಾನಗಳನ್ನು ಪಡೆಯಲಿದೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆಗಳು ಅಂದಾಜಿಸಿವೆ.

ಪೀಪಲ್ಸ್ ಇನ್ ಸೈಟ್

  • ಡಿಎಂಕೆ+: 120-140

  • ಎಐಎಡಿಎಂಕೆ+: 60-70

  • ಟಿವಿಕೆ: 30-40

  • ಇತರರು: 0-4

ಎಕ್ಸಿಸ್ ಮೈ ಇಂಡಿಯಾ

  • ಡಿಎಂಕೆ+: 92-110

  • ಎಐಎಡಿಎಂಕೆ+: 22-32

  • ಟಿವಿಕೆ: 98-120

  • ಇತರರು: --

ಪಿಮಾರ್ಕ್

  • ಡಿಎಂಕೆ+: 125-145

  • ಎಐಎಡಿಎಂಕೆ+: 65-85

  • ಟಿವಿಕೆ: 16-26

  • ಇತರರು: 1-6

ಮ್ಯಾಟ್ರಿಜ್

  • ಡಿಎಂಕೆ+: 122-132

  • ಎಐಎಡಿಎಂಕೆ+: 87-110

  • ಟಿವಿಕೆ: 10-12

  • ಇತರರು: 0-6

ವೋಟ್ ವೈಬ್

  • ಡಿಎಂಕೆ+: 103-113

  • ಎಐಎಡಿಎಂಕೆ+: 114-124

  • ಟಿವಿಕೆ: 4-10

  • ಇತರರು: --

ಜೆವಿಸಿ

  • ಡಿಎಂಕೆ+: 75-95

  • ಎಐಎಡಿಎಂಕೆ+: 128-147

  • ಟಿವಿಕೆ: 8-15

  • ಇತರರು: 0

ಪೀಪಲ್ ಪಲ್ಸ್

  • ಡಿಎಂಕೆ+: 125-145

  • ಎಐಎಡಿಎಂಕೆ+: 65-80

  • ಟಿವಿಕೆ: 18-24

  • ಇತರರು: 2-6

ಕೇರಳದಲ್ಲಿ 10 ವರ್ಷಗಳ ಬಳಿಕ ಯುಡಿಎಫ್ ಗೆ ಅಧಿಕಾರ

ಇನ್ನು ಕೇರಳದಲ್ಲಿ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಬಹುಮತ ಪಡೆಯಲಿದ್ದು, ಬಿಜೆಪಿ ಹೀನಾಯ ಸೋಲನ್ನು ಅನುಭವಿಸಲಿದೆ. ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಆಡಳಿತಾ ರೂಢ ಎಲ್ ಡಿಎಫ್ ಗೆ ಭಾರಿ ಆಘಾತ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಬರೊಬ್ಬರಿ 10 ವರ್ಷಗಳ ಬಳಿಕ ಯುಡಿಎಫ್ ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕೇರಳದಲ್ಲಿ ಬಿಜೆಪಿ 10 ರಿಂದ 14 ಸ್ಥಾನಗಳನ್ನು ಗಳಿಸಲಿದೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆಗಳು ಅಂದಾಜಿಸಿವೆ.

ಪೀಪಲ್ಸ್ ಇನ್ ಸೈಟ್

  • ಎಲ್‌ಡಿಎಫ್: 58-68

  • ಎನ್​ಡಿಎ: 10-14

  • ಯುಡಿಎಫ್: 66-76

  • ಇತರೆ: 0-1

ಆಕ್ಸಿಸ್ ಮೈ ಇಂಡಿಯಾ

  • ಎಲ್‌ಡಿಎಫ್: 49-62

  • ಎನ್​ಡಿಎ: 0-3

  • ಯುಡಿಎಫ್: 78-90

  • ಇತರೆ: --

ಮ್ಯಾಟ್ರಿಜ್ ಸಮೀಕ್ಷೆ

  • ಎಲ್‌ಡಿಎಫ್: 60-65

  • ಎನ್​ಡಿಎ: 3-5

  • ಯುಡಿಎಫ್: 75-85

  • ಇತರೆ: --

ಜೆವಿಸಿ

  • ಎಲ್‌ಡಿಎಫ್: 52-61

  • ಎನ್​ಡಿಎ: 3-7

  • ಯುಡಿಎಫ್: 72-84

  • ಇತರೆ: --

ವೋಟ್‌ವೈಬ್ ಸಮೀಕ್ಷೆ

  • ಎಲ್‌ಡಿಎಫ್: 58-68

  • ಎನ್​ಡಿಎ: 0-4

  • ಯುಡಿಎಫ್: 70-80

  • ಇತರೆ: --

ಪೀಪಲ್ಸ್ ಪಲ್ಸ್ ಸಮೀಕ್ಷೆ

  • ಎಲ್‌ಡಿಎಫ್: 60-65

  • ಎನ್​ಡಿಎ: 3-5

  • ಯುಡಿಎಫ್: 70-75

  • ಇತರೆ: --

ಪಿಮಾರ್ಕ್

  • ಎಲ್‌ಡಿಎಫ್: 62-69

  • ಎನ್​ಡಿಎ: 1-4

  • ಯುಡಿಎಫ್: 71-79

  • ಇತರೆ: --

ಪುದುಚೇರಿಯ ಎಕ್ಸಿಟ್ ಪೋಲ್ ಹೇಳೋದೇನು?

ಪುದುಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗುವ ಸಾಧ್ಯತೆ ಇದ್ದು ಮತ್ತೆ ಅಖಿಲ ಭಾರತ ಎನ್.ಆರ್. ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿಕೂಟ ಅಧಿಕಾರದ ಗದ್ದುಗೆ ಏರುವ ಸಾಧ್ಯತೆ ಇದೆ ಎಂದು ಚುನಾವಣೋತ್ತರ ಸಮೀಕ್ಷೆಗಳಲ್ಲಿ ಅಂದಾಜಿಸಲವಾಗಿದೆ.

ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ

  • ಎನ್ ಆರ್ ಸಿ+: 16-20

  • ಕಾಂಗ್ರೆಸ್+: 6-8

  • ಟಿವಿಕೆ: --

  • ಇತರೆ: 3-7

ಜೆವಿಸಿ

  • ಎನ್ ಆರ್ ಸಿ+: 15-17

  • ಕಾಂಗ್ರೆಸ್+: 11-13

  • ಟಿವಿಕೆ: 1-2

  • ಇತರೆ: --

ಪೀಪಲ್ ಪಲ್ಸ್

  • ಎನ್ ಆರ್ ಸಿ+: 15-18

  • ಕಾಂಗ್ರೆಸ್+: 6-8

  • ಟಿವಿಕೆ: --

  • ಇತರೆ: 1-12

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೇ ತಿಂಗಳಲ್ಲಿ ನಿರುದ್ಯೋಗ ದರ 5.5%ಕ್ಕೆ ಏರಿಕೆ; 11 ತಿಂಗಳಲ್ಲೇ ಗರಿಷ್ಠ ಮಟ್ಟ

ಏನೇ ಶಾಂತಿ ಒಪ್ಪಂದವಾದ್ರೂ ನಾವು ಅಮೆರಿಕವನ್ನ ನಂಬಲ್ಲ: ಡೊನಾಲ್ಡ್ ಟ್ರಂಪ್ ಗೆ ಶಾಕ್ ಕೊಟ್ಟ Iran

ಮಜಾ ಭಾರತ-ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ಕಲಾವಿದ ನಟ ಸಿದ್ದಾರ್ಥ ಪರಸನೂರು ಅನುಮಾನಾಸ್ಪದ ಸಾವು!

'14 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ, ಖಿನ್ನತೆಗೆ ಒಳಗಾಗಿದ್ದೆ.. Cricket ಅನ್ನೇ ತೊರೆಯಬೇಕೆಂದಿದ್ದೆ': ಕನ್ನಡತಿ Shreyanka Patil ಆಘಾತಕಾರಿ ಹೇಳಿಕೆ

'ಗುರು ದ್ರೋಹಿ'; ಪಂಜಾಬ್ ಚುನಾವಣೆಗೂ ಮುನ್ನ ಸಿಎಂ Bhagwant Mannಗೆ ಆಘಾತ, ಧಾರ್ಮಿಕ ಗುರುಗಳ ಆಕ್ರೋಶ

SCROLL FOR NEXT