ಕಂಗನಾ ರಣಾವತ್  
ದೇಶ

Don't mislead: ಸಿನಿಮಾ ಕ್ಲಿಪ್ ಬಳಸಿ ಟ್ರೋಲ್‌ ಮಾಡುತ್ತಿರುವವರಿಗೆ ಕಂಗನಾ ತಿರುಗೇಟು!

ಆಕೆಯ ಸಿನಿಮಾದ ಕ್ಲೀಪ್ ಬಳಸಿ ಟ್ರೋಲ್‌ ಮಾಡಲಾಗುತ್ತಿದೆ. ಇಂತಹ ಟ್ರೋಲ್ ಗಳಿಗೆ ಹೆದರದ ಕಂಗನಾ, ಇಂತಹ ಕೃತ್ಯಗಳು ಯುವಜನತೆಯನ್ನು ದಾರಿ ತಪ್ಪಿಸುತ್ತವೆ ಎಂದು ಕಿಡಿಕಾರಿದ್ದಾರೆ.

ನವದೆಹಲಿ: NEET ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಇತ್ತೀಚಿಗೆ ದೆಹಲಿಯಲ್ಲಿ ನಡೆದ ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಿಂದೂ ಯುವತಿಯರ ಕುರಿತು ಹೇಳಿಕೆ ನೀಡಿದಾಗಿನಿಂದ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಭಾರಿ ಟ್ರೋಲ್ ಗೆ ಗುರಿಯಾಗಿದ್ದಾರೆ.

ಆಕೆಯ ಸಿನಿಮಾದ ಕ್ಲೀಪ್ ಬಳಸಿ ಟ್ರೋಲ್‌ ಮಾಡಲಾಗುತ್ತಿದೆ. ಇಂತಹ ಟ್ರೋಲ್ ಗಳಿಗೆ ಹೆದರದ ಕಂಗನಾ, ಇಂತಹ ಕೃತ್ಯಗಳು ಯುವಜನತೆಯನ್ನು ದಾರಿ ತಪ್ಪಿಸುತ್ತವೆ ಎಂದು ಕಿಡಿಕಾರಿದ್ದಾರೆ. ಜುಲೈ 20 ರಂದು ಸಂಸತ್ ಚಲೋ ನಡೆಸಿದ Gen-Zಗಳನ್ನು "ಜನರೇಷನ್ ಗಟರ್" ಎಂದು ಕರೆದಿದ್ದ ಕಂಗನಾ, ಪ್ರತಿಭಟನೆಯ ವೇಳೆ ಅವರು ಮಾಡಿದ ವೀಡಿಯೊಗಳು "ವಾಕರಿಕೆ ತರಿಸುವಂತಿವೆ" ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ, ಅನೇಕ ನೆಟ್ಟಿಗರು ಅವರ ಸಿನಿಮಾ ಮತ್ತಿತರ ಇತರ ಕಾರ್ಯಕ್ರಮಗಳ ವಿಡಿಯೋ ಹಂಚಿಕೊಳ್ಳುವ ಮೂಲಕ ತೀವ್ರ ಟ್ರೋಲ್ ಮಾಡುತ್ತಿದ್ದಾರೆ.

ಶುಕ್ರವಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವೀಡಿಯೊ ಕ್ಲಿಪ್ ವೊಂದನ್ನು ಹಂಚಿಕೊಂಡಿರುವ ಕಂಗನಾ, "ನಾನು ಲಕ್ಷಾಂತರ ರೂಪಾಯಿ ಸಂಭಾವನೆ ಪಡೆದು ಮಾಡಿದ ಸಿನಿಮಾ ಪಾತ್ರಗಳ ಕ್ಲಿಪ್ ಗಳು ಅಥವಾ ನನ್ನದೇ ಆದ ಸಿಬ್ಬಂದಿ, ಕಾರ್ಯಕ್ರಮ ಸಂಘಟಕರು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ಇರುವ ಉನ್ನತ ಮಟ್ಟದ ಮನರಂಜನಾ ಕಾರ್ಯಕ್ರಮಗಳ ದೃಶ್ಯಗಳನ್ನು ಬಳಸಲು ಬಯಸುತ್ತೀರಿ. ಇವುಗಳನ್ನು ಬಳಸಿಕೊಂಡು, ಸುಲಭವಾಗಿ ಪ್ರಭಾವಿತರಾಗುವ ಹದಿಹರೆಯದವರಿಗೆ, ರಸ್ತೆಗಳಲ್ಲಿ, ಶಾಲಾ ಕಾರ್ಯಕ್ರಮಗಳಲ್ಲಿ ಅಥವಾ ಕಳಪೆ ಮಟ್ಟದ ಕ್ಲಬ್‌ಗಳಲ್ಲಿಯೂ ಇದೇ ರೀತಿಯ ವರ್ತನೆಯನ್ನು ಮಾಡಬಹುದು ಎಂದು ನಂಬಿಸಲು ಹೊರಟಿದ್ದೀರಾ? ಇವೆಲ್ಲವೂ ಒಂದೇ ಆಗಿವೆಯೇ?" ಎಂದು ಪ್ರಶ್ನಿಸಿದ್ದಾರೆ.

"ಯುವಜನತೆಯನ್ನು ದಾರಿ ತಪ್ಪಿಸಬೇಡಿ, ಇವೆಲ್ಲವೂ ಒಂದೇ ಅಲ್ಲ. ಇಂದು ನೀವು ಇತರರ ಮಕ್ಕಳನ್ನು ದಾರಿ ತಪ್ಪಿಸುತ್ತಿದ್ದೀರಿ, ನಾಳೆ ಅದು ನಿಮ್ಮ ಮಕ್ಕಳಿಗೂ ತಟ್ಟಬಹುದು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಏರ್ಪೋರ್ಟ್ to ಸೆಮಿಕಂಡಕ್ಟರ್‌, ಆಂಧ್ರಕ್ಕೆ ಬಂಪರ್ ಗಿಫ್ಟ್: ವಿಮಾನ ನಿಲ್ದಾಣ ಉದ್ಘಾಟನೆ ಸೇರಿ 17,900 ಕೋಟಿ ರೂ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಕಿಶ್ತ್ವಾರ್ ನಲ್ಲಿ ಮೇಘಸ್ಫೋಟ: ಭಾರಿ ಮಳೆ-ಪ್ರವಾಹ, ವ್ಯಾಪಕ ಹಾನಿ, ಹೆದ್ದಾರಿ ಬಂದ್

'ಇತರರ ಪ್ರಭಾವಕ್ಕೆ ಒಳಗಾಗಿ ಹಾಗೆ ಮಾತನಾಡಿದೆ, ಕ್ಷಮಿಸಿ': ದೆಹಲಿ ಪ್ರತಿಭಟನೆಯಲ್ಲಿ PM ಮೋದಿ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ಬಾಲಕಿ-Video

'ನನ್ನ ಜೊತೆಗೆ ತಾಯಿಯನ್ನೂ ನಿಂದಿಸಿದರು, ಆದರೂ 'ನಮ್ಮ ದಾರಿತಪ್ಪಿದ ಮಕ್ಕಳನ್ನು' ಕ್ಷಮಿಸಬೇಕು: ಮತ್ತೊಂದು ವಿಡಿಯೊ ಹಂಚಿಕೊಂಡ PM ಮೋದಿ'-Video

My friend, ಸ್ವಲ್ಪ ಜವಾಬ್ದಾರಿ ತೆಗೆದುಕೊಳ್ಳಿ: ಪ್ರಧಾನಿ ಮೋದಿಯ ಹೊಸ ವಿಡಿಯೋ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಕಿಡಿ! Video