ಏರ್ ಇಂಡಿಯಾ ಟರ್ಬುಲೆನ್ಸ್ ನಿಂದಾಗಿ ಗಾಯಗೊಂಡ ಪ್ರಯಾಣಿಕರು online desk
ದೇಶ

ಏರ್ ಇಂಡಿಯಾ ಟರ್ಬುಲೆನ್ಸ್: ಪೈಲಟ್ ಗಾಂಜಾ ಸೇವಿಸಿದ್ದು ದೃಢ- ವರದಿಗಳು

ವಿಮಾನ 300 ಅಡಿಗಳಷ್ಟು ಕೆಳಕ್ಕೆ ಇಳಿಯಲು ಕಾರಣವಾದ ಘಟನೆಯನ್ನು ಅಪಘಾತವೆಂದು ಪರಿಗಣಿಸಲಾಗುತ್ತಿದೆ. 17 ಜನರು ಮಾರ್ಗ ಮಧ್ಯದ ಟರ್ಬುಲೆನ್ಸ್ ನಿಂದ ಗಾಯಗೊಂಡಿದ್ದಾರೆ. ಇದನ್ನು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನಿಖೆ ಮಾಡುತ್ತಿದೆ.

ನವದೆಹಲಿ: ಆಗಸ್ಟ್ 4 ರಂದು ಏರ್ ಇಂಡಿಯಾದ ಟರ್ಬುಲೆನ್ಸ್ (ಗಾಳಿಯ ಒತ್ತಡದಲ್ಲಿ ದಿಢೀರ್ ಬದಲಾವಣೆ)ಗೆ ಒಳಗಾದ ಫುಕೆಟ್-ದೆಹಲಿ ವಿಮಾನವನ್ನು ನಿರ್ವಹಿಸಿದ ಪೈಲಟ್ ಇನ್ ಕಮಾಂಡ್ ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ ಎಂದು ವರದಿಯಾಗಿದೆ.

ಎರಡನೇ ಸೈಕೋಆಕ್ಟಿವ್ ವಸ್ತುವಿನ ಅಂಶ ಪರೀಕ್ಷೆ ವೇಳೆ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ವರದಿಗಳ ಪ್ರಕಾರ, ಪೈಲಟ್ ಗಾಂಜಾ ಸೇವಿಸಿರುವುದು ಕಂಡುಬಂದಿದೆ. ಪೈಲಟ್ ಮೊದಲು ಪ್ರಾಥಮಿಕ ಔಷಧ ಪರೀಕ್ಷೆ “non-negative” ಎಂದು ವರದಿಯಾಗಿತ್ತು. ನಂತರ ತಾತ್ಕಾಲಿಕವಾಗಿ ಅವರಿಗೆ ವಿಮಾನ ಚಾಲನೆ ಮಾಡುವ ಅನುಮತಿಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು.

ವಿಮಾನ 300 ಅಡಿಗಳಷ್ಟು ಕೆಳಕ್ಕೆ ಇಳಿಯಲು ಕಾರಣವಾದ ಘಟನೆಯನ್ನು ಅಪಘಾತವೆಂದು ಪರಿಗಣಿಸಲಾಗುತ್ತಿದೆ. 17 ಜನರು ಮಾರ್ಗ ಮಧ್ಯದ ಟರ್ಬುಲೆನ್ಸ್ ನಿಂದ ಗಾಯಗೊಂಡಿದ್ದಾರೆ. ಇದನ್ನು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನಿಖೆ ಮಾಡುತ್ತಿದೆ.

ಮೂರು ಶಿಶುಗಳು ಮತ್ತು ಎಂಟು ಸಿಬ್ಬಂದಿ ಸೇರಿದಂತೆ 137 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್‌ಬಸ್ A320neo ಘಟನೆಯ ನಂತರ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು.

ಮಂಗಳವಾರದಂದು, ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್, ಹಿರಿಯ ವಿಮಾನಯಾನ ಕಾರ್ಯನಿರ್ವಾಹಕರೊಂದಿಗೆ, ಫುಕೆಟ್-ದೆಹಲಿ ವಿಮಾನ ಘಟನೆಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ ಮತ್ತು ಇತರ ಅಧಿಕಾರಿಗಳನ್ನು ಭೇಟಿಯಾದರು.

ನಾಗರಿಕ ವಿಮಾನಯಾನ ಕಾರ್ಯದರ್ಶಿಯಲ್ಲದೆ, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮಹಾನಿರ್ದೇಶಕ ವೀರ್ ವಿಕ್ರಮ್ ಯಾದವ್ ಮತ್ತು ವಿಮಾನ ಅಪಘಾತ ತನಿಖಾ ಸಂಸ್ಥೆ (ಎಎಐಬಿ) ಮಹಾನಿರ್ದೇಶಕ ಜಿ ವಿ ಜಿ ಯುಗಂಧರ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

ಫ್ರೆಂಚ್ ವಿಮಾನ ಅಪಘಾತ ತನಿಖಾ ಸಂಸ್ಥೆ ಬಿಇಎ ಮತ್ತು ಏರ್‌ಬಸ್ ತಂಡಗಳು ತನಿಖೆಯಲ್ಲಿ ಎಎಐಬಿಗೆ ಸಹಾಯ ಮಾಡಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾವು ನಮ್ಮ ರೈತರನ್ನು ರಕ್ಷಿಸಬೇಕು, ನ್ಯಾಯಾಲಯದ ತೀರ್ಪನ್ನೂ ಪಾಲಿಸಬೇಕು: CWRC ಆದೇಶಕ್ಕೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಗಡಿಯ ಸ್ಥಿತಿ ದ್ವಿಪಕ್ಷೀಯ ಸಂಬಂಧಗಳನ್ನು ಪ್ರತಿಬಿಂಬಿಸುತ್ತೆ: ಚೀನಾ ವಿರುದ್ಧ ಕೆರಳಿದ ಭಾರತ

ಇದು ಮುದಿ ಗುಳ್ಳೆ ನರಿ: ಬಾಲಿವುಡ್ ನಟ ನಸೀರುದ್ದೀನ್ ಶಾ ವಿರುದ್ಧ BJP ಸಂಸದೆ ಕಂಗನಾ ಕಿಡಿ!

ನೂತನ ಸಚಿವರಿಗೆ ಸರ್ಕಾರಿ ನಿವಾಸ, ಕಾರು ಹಂಚಿಕೆ ಮಾಡಿ ಆದೇಶ; ನಿಮ್ಮ ಜಿಲ್ಲೆಯ ಮಿನಿಸ್ಟರ್ ಮನೆ ಎಲ್ಲಿದೆ? ಇಲ್ಲಿದೆ ವಿವರ

ತಮಿಳುನಾಡಿಗೆ ಕಾವೇರಿ ನೀರು: CWMA ನಿರ್ದೇಶನದ ವಿರುದ್ಧ ಕಾನೂನು ಆಯ್ಕೆಗಳ ಪರಿಶೀಲನೆ: ಸಹಾಯಕ ಆಯುಕ್ತ ಗೌರವ್ ಗುಪ್ತ