ಲಾಕರ್‌ನಲ್ಲಿದ್ದ ಒಡವೆ ಗಾಯಬ್! AI image
ದೇಶ

ಲಾಕರ್‌ನಲ್ಲಿದ್ದ ಒಡವೆ ಗಾಯಬ್! ವರ್ಷಗಳ ನಂತರ SBI ಬ್ಯಾಂಕ್ ಲಾಕರ್ ತೆರೆದಾಗ ಕಾದಿತ್ತು ಆಘಾತ; ₹50 ಲಕ್ಷ ಮೌಲ್ಯದ ಚಿನ್ನಾಭರಣ ಮಾಯ

SBI ಬ್ಯಾಂಕ್ ಲಾಕರ್ ಅಂದ್ರೆ ಕೇಳಬೇಕಾ? ಸುರಕ್ಷತೆ ಹಾಗೂ ನಂಬಿಕೆಯ ಪ್ರತೀಕ! ಯಾಕಂದ್ರೆ, SBI ಕೇಂದ್ರ ಸರ್ಕಾರಿ ಬ್ಯಾಂಕ್. ಜೊತೆಗೆ ಇಡೀ ದೇಶದ ಅತಿ ದೊಡ್ಡ ಬ್ಯಾಂಕ್; ಆದ್ರೆ, ಈ ನಂಬಿಕೆಗೆ ಉತ್ತರ ಪ್ರದೇಶದಲ್ಲಿ ದ್ರೋಹ ಬಗೆಯಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಕಾನ್ಪುರ (ಉತ್ತರ ಪ್ರದೇಶ): ಯಾವುದೇ ಪ್ರಮುಖ ದಾಖಲೆಯಾಗಲಿ ಅಥವಾ ಚಿನ್ನಾಭರಣವೇ ಆಗಲಿ ಮನೆಯಲ್ಲಿ ಇಟ್ಟರೆ ಕಳ್ಳತನವಾಗುವ ಭಯ. ಹಾಗಾಗಿಯೇ, ಸುರಕ್ಷಿತಯ ದೃಷ್ಠಿಯಿಂದ ಬ್ಯಾಂಕ್ ಲಾಕರ್‌ನಲ್ಲಿ ಇಡುತೇವೆ. ಅದರಲ್ಲೂ, SBI ಬ್ಯಾಂಕ್ ಲಾಕರ್ ಅಂದ್ರೆ ಕೇಳಬೇಕಾ? ಸುರಕ್ಷತೆ ಹಾಗೂ ನಂಬಿಕೆಯ ಪ್ರತೀಕ! ಯಾಕಂದ್ರೆ, SBI ಕೇಂದ್ರ ಸರ್ಕಾರಿ ಬ್ಯಾಂಕ್. ಜೊತೆಗೆ ಇಡೀ ದೇಶದ ಅತಿ ದೊಡ್ಡ ಬ್ಯಾಂಕ್; ಆದ್ರೆ, ಈ ನಂಬಿಕೆಗೆ ಉತ್ತರ ಪ್ರದೇಶದಲ್ಲಿ ದ್ರೋಹ ಬಗೆಯಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಹೌದು, ಉತ್ತರ ಪ್ರದೇಶದ ಕಾನ್ಪುರದಲ್ಲಿ ಬ್ಯಾಂಕ್ ಲಾಕರ್‌ನಲ್ಲಿದ್ದ ₹50 ಲಕ್ಷ ಮೌಲ್ಯದ ಚಿನ್ನ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಆಗಸ್ಟ್ 2026 ರಲ್ಲಿ ಬೆಳಕಿಗೆ ಬಂದಿದೆ. ಕಾನ್ಪುರದ ಸ್ವರೂಪ್ ನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಯಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತ ಮಹಿಳೆಯನ್ನು ರಶ್ಮಿ ಅರೋರಾ ಎಂದು ಗುರುತಿಸಲಾಗಿದೆ. ಈ ಕುರಿತು ಪೊಲೀಸರು ಈಗಾಗಲೇ ಬ್ಯಾಂಕ್ ಮ್ಯಾನೇಜರ್ ಮತ್ತು ಸಿಬ್ಬಂದಿ ವಿರುದ್ಧ FIR ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಏನಿದು ಘಟನೆ?

ಕಾನ್ಪುರದ ರಶ್ಮಿ ಅರೋರಾ ಅವರು 2003 ರಲ್ಲಿ ಅಂದಿನ 'ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್' (ಇದು ನಂತರ ಎಸ್‌ಬಿಐ ಜೊತೆ ವಿಲೀನವಾಯಿತು) ಶಾಖೆಯ ಲಾಕರ್ ಸಂಖ್ಯೆ 23 ರಲ್ಲಿ ತಮ್ಮ ಮದುವೆಯ ಒಡವೆಗಳು ಸೇರಿದಂತೆ ₹50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಇಟ್ಟಿದ್ದರು. ಇನ್ನು, ಪತಿಯ ನಿಧನದ ನಂತರ ಅವರು ಲಕ್ನೋದಲ್ಲಿರುವ ಮಗಳ ಮನೆಗೆ ವಾಸ್ತವ್ಯ ಬದಲಾಯಿಸಿದ್ದರು. ಹೀಗಾಗಿ ಕಳೆದ 17 ವರ್ಷಗಳಿಂದ ಅವರು ಲಾಕರ್ ಅನ್ನು ಖುದ್ದಾಗಿ ತೆರೆದು ನೋಡಿರಲಿಲ್ಲ. ಆದರೆ, ವರ್ಷಂ ಪ್ರತಿ ಬ್ಯಾಂಕ್ ಖಾತೆಯಿಂದ ಲಾಕರ್ ಬಾಡಿಗೆ ಹಣ ಕಡಿತವಾಗುತ್ತಲೇ ಇತ್ತು.

ಇತ್ತೀಚೆಗೆ ಜುಲೈ 2026 ರಲ್ಲಿ ಅವರು ಬ್ಯಾಂಕ್‌ಗೆ ಬಂದು ಲಾಕರ್ ಪರಿಶೀಲಿಸಲು ಮುಂದಾದಾಗ, ಮೊದಲು ಬ್ಯಾಂಕ್ ಅಧಿಕಾರಿಗಳು "ನಿಮ್ಮ ಹೆಸರಿನಲ್ಲಿ ಯಾವುದೇ ಲಾಕರ್ ಇಲ್ಲ" ಎಂದು ಹೇಳಿದ್ದಾರೆ. ನಂತರ ದಾಖಲೆಗಳನ್ನು ತೋರಿಸಿದಾಗ ಲಾಕರ್ ಪತ್ತೆಯಾಗಿದೆ, ಆದರೆ ಅದನ್ನು ತೆರೆದಾಗ ಲಾಕರ್ ಸಂಪೂರ್ಣ ಖಾಲಿಯಾಗಿತ್ತು. ಏತನ್ಮಧ್ಯೆ, ಬ್ಯಾಂಕಿನ ದಾಖಲೆಗಳನ್ನು ಪರಿಶೀಲಿಸಿದಾಗ, ರಶ್ಮಿ ಅವರು ಬರದೇ ಇದ್ದರೂ 2020 ರಲ್ಲಿ ಈ ಲಾಕರ್ ಅನ್ನು ಎರಡು ಬಾರಿ ತೆರೆಯಲಾಗಿತ್ತು ಎಂಬ ಆಘಾತಕಾರಿ ವಿಷಯ ಗೊತ್ತಾಗಿದೆ.

ಹಾಗಾದ್ರೆ, ಯಾರಿಗೆ ಸಿಕ್ಕಿತು ಪ್ರವೇಶ?

ಮಹಿಳೆಯ ಬಳಿ ಅಸಲಿ ಕೀ ಇರುವಾಗ, ಲಾಕರ್ ಅನ್ನು ಯಾರು ಮತ್ತು ಹೇಗೆ ತೆರೆದರು? ಬ್ಯಾಂಕ್ ಸಿಬ್ಬಂದಿಯ ಕೈವಾಡವಿದೆಯೇ? ಎಂಬ ನಿಟ್ಟಿನಲ್ಲಿ ಸ್ವರೂಪ್ ನಗರ ಪೊಲೀಸರು CCTV ಮತ್ತು ಹಳೆಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಲಾಕರ್‌ನಲ್ಲಿ ಕಳ್ಳತನವಾದರೆ ಬ್ಯಾಂಕ್ ಎಷ್ಟು ಪರಿಹಾರ ನೀಡುತ್ತದೆ? ಆರ್‌ಬಿಐ ನಿಯಮ ಏನು?

ಕಾನ್ಪುರ ಘಟನೆಯು ಬ್ಯಾಂಕ್ ಲಾಕರ್‌ಗಳ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹಾಗಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ ಬ್ಯಾಂಕ್ ಲಾಕರ್ ಸುರಕ್ಷತೆಯ ಹೊಣೆಗಾರಿಕೆ ಹೀಗಿದೆ,

  • ಬ್ಯಾಂಕಿನ ಹೊಣೆಗಾರಿಕೆ ಎಷ್ಟು?: ಬ್ಯಾಂಕ್ ಸಿಬ್ಬಂದಿಯ ನಿರ್ಲಕ್ಷ್ಯ, ವಂಚನೆ, ಬೆಂಕಿ ಅಥವಾ ಕಟ್ಟಡ ಕುಸಿತದಿಂದ ಲಾಕರ್‌ನಲ್ಲಿರುವ ವಸ್ತುಗಳಿಗೆ ಹಾನಿಯಾದರೆ ಅಥವಾ ಕಳ್ಳತನವಾದರೆ ಬ್ಯಾಂಕುಗಳು ಹೊಣೆಯಾಗುತ್ತವೆ.

  • 100 ಪಟ್ಟು ಪರಿಹಾರ: ಆರ್‌ಬಿಐ ನಿಯಮದ ಪ್ರಕಾರ, ಇಂತಹ ನಷ್ಟಕ್ಕೆ ಬ್ಯಾಂಕ್ ಗ್ರಾಹಕನಿಗೆ ವಾರ್ಷಿಕ ಲಾಕರ್ ಬಾಡಿಗೆಯ 100 ಪಟ್ಟು ಮಾತ್ರ ಗರಿಷ್ಠ ಪರಿಹಾರ ನೀಡಲು ಬಾಧ್ಯಸ್ಥವಾಗಿರುತ್ತದೆ.

  • ಉದಾಹರಣೆಗೆ: ನಿಮ್ಮ ಲಾಕರ್‌ನ ವಾರ್ಷಿಕ ಬಾಡಿಗೆ ₹3,000 ಆಗಿದ್ದರೆ, ಅದರಲ್ಲಿ ₹50 ಲಕ್ಷದ ಚಿನ್ನವೇ ನಾಪತ್ತೆಯಾಗಿದ್ದರೂ ಬ್ಯಾಂಕ್‌ನಿಂದ ಸಿಗುವ ಗರಿಷ್ಠ ಪರಿಹಾರ ಕೇವಲ ₹3,00,000 (3 ಲಕ್ಷ ರೂ.) ಮಾತ್ರ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆ ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ: ಮುನಿಯಪ್ಪಗೆ ಸಮಾಜಕಲ್ಯಾಣ, ಜಮೀರ್ – ವಸತಿ ಖಾತೆ?

ಪರಪ್ಪನ ಅಗ್ರಹಾರ ಜೈಲಿನಲ್ಲೂ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್, ಪೆನ್‌ಡ್ರೈವ್ ಪತ್ತೆ: ಮಾಜಿ ಸಂಸದನ ವಿರುದ್ಧ ಕೇಸ್ ದಾಖಲು

ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ: ಡಬಲ್ ಸಂಭ್ರಮದಲ್ಲಿರುವ ಪತ್ನಿ ಸೋನಾಲ್'ಗೆ ದುಬಾರಿ ಗಿಫ್ಟ್ ನೀಡಿದ ತರುಣ್ ಸುಧೀರ್!

ಮಳೆ ಕೊರತೆ, ಬಿತ್ತನೆ ವೈಫಲ್ಯ: ರಾಜ್ಯದಲ್ಲಿ 50 ಲಕ್ಷ ಟನ್ ಆಹಾರ ಧಾನ್ಯ ನಷ್ಟದ ಭೀತಿ

ಮಿಸ್ ಆಯ್ತು ಸಚಿವ ಸ್ಥಾನ; ‘ಶಕ್ತಿ ಪ್ರದರ್ಶನ’ಕ್ಕೆ ಸಜ್ಜಾದ ಸಿದ್ದರಾಮಯ್ಯ ಆಪ್ತರು! ಮೈಸೂರಿನಲ್ಲಿ ‘ಅಸಮಾಧಾನ’ ಸಭೆ!