ಕೆರೆಗೆ ಬಿದ್ದ ಕಾರು ಮಹಿಳೆ ಸಾವು 
ದೇಶ

ಡ್ರೈವಿಂಗ್ ಅಭ್ಯಾಸ ಮಾಡುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು: ಮಹಿಳೆ ಸಾವು

ಮನೆಗೆ ಬಂದ ಬಳಿಕ ಸ್ಕೂಟರ್‌ನ್ನು ನಿಲ್ಲಿಸಿ, ಗ್ಯಾರೇಜ್‌ನಲ್ಲಿದ್ದ ತಮ್ಮ ಪತಿ ಖರೀದಿಸಿದ್ದ ಹ್ಯುಂಡೈ ಇಯಾನ್ ಕಾರನ್ನು ಹೊರತೆಗೆದಿದ್ದಾರೆ. ಬಳಿಕ ಡ್ರೈವಿಂಗ್ ಅಭ್ಯಾಸ ಮಾಡಲು ಕಾರಿನಲ್ಲಿ ಹೊರಟಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಸಮೀಪದ ಕೆರೆಗೆ ಬಿದ್ದಿದೆ.

ಕೋಲ್ಕತ್ತಾ: ಡ್ರೈವಿಂಗ್ ಅಭ್ಯಾಸ ಮಾಡುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡ ಕಾರೊಂದು ಕೆರೆಗೆ ಉರುಳಿದ ಪರಿಣಾಮ 42 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಕೋಲ್ಕತ್ತಾದ ಕೆಸ್ತೋಪುರದ ಪ್ರಫುಲ್ಲ ಕಾನನ್ (ಪಶ್ಚಿಮ) ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಮೃತ ಮಹಿಳೆಯನ್ನು ಸುಮಿತ್ರಾ ದಾಸ್ ಎಂದು ಗುರುತಿಸಲಾಗಿದೆ. ಸ್ಥಳೀಯರ ಮಾಹಿತಿ ಪ್ರಕಾರ, ಸುಮಿತ್ರಾ ಅವರು ತಮ್ಮ ಮಗಳನ್ನು ಸ್ಕೂಟರ್‌ನಲ್ಲಿ ಶಾಲೆಗೆ ಬಿಟ್ಟು ಮನೆಗೆ ವಾಪಸ್ ಆಗಿದ್ದರು.

ಮನೆಗೆ ಬಂದ ಬಳಿಕ ಸ್ಕೂಟರ್‌ನ್ನು ನಿಲ್ಲಿಸಿ, ಗ್ಯಾರೇಜ್‌ನಲ್ಲಿದ್ದ ತಮ್ಮ ಪತಿ ಖರೀದಿಸಿದ್ದ ಹ್ಯುಂಡೈ ಇಯಾನ್ ಕಾರನ್ನು ಹೊರತೆಗೆದಿದ್ದಾರೆ. ಬಳಿಕ ಡ್ರೈವಿಂಗ್ ಅಭ್ಯಾಸ ಮಾಡಲು ಕಾರಿನಲ್ಲಿ ಹೊರಟಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಸಮೀಪದ ಕೆರೆಗೆ ಬಿದ್ದಿದೆ.

ಕಾರು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು, ಸುಮಿತ್ರಾ ಅವರನ್ನು ರಕ್ಷಿಸಲು ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಹಲವು ಪ್ರಯತ್ನಗಳನ್ನು ನಡೆಸಿದ್ದಾರೆ. ಆದರೆ, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಕಾರ್ಯಾಚರಣೆಯ ಬಳಿಕ ಕಾರನ್ನು ಕೆರೆಯಿಂದ ಹೊರತೆಗೆಯಲಾಯಿತು.

ಕಾರನ್ನು ನೀರಿನಿಂದ ಹೊರತೆಗೆದಾಗ ಸುಮಿತ್ರಾ ಅವರ ಮೃತದೇಹ ಕಾರಿನೊಳಗೆ ಪತ್ತೆಯಾಗಿದೆ. ಅವರ ಮುಖ ಕಾರಿನ ಹಿಂಭಾಗದ ಹ್ಯಾಚ್‌ಬಾಗಿಲಿನತ್ತ ಹಾಗೂ ಕಾಲುಗಳು ಸ್ಟೀರಿಂಗ್ ಬಳಿಯಲ್ಲಿದ್ದವು. ಇದರಿಂದ ಕಾರು ನೀರಿನಲ್ಲಿ ಮುಳುಗುತ್ತಿದ್ದ ಸಂದರ್ಭದಲ್ಲಿ ಅವರು ಹೊರಬರಲು ಪ್ರಯತ್ನಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸುಮಿತ್ರಾ ಅವರ ಪತಿ ಕೃಷ್ಣೇಂದು ದಾಸ್ ಇತ್ತೀಚೆಗೆ ಕಾರನ್ನು ಖರೀದಿಸಿದ್ದರು, ಹೀಗಾಗಿ ಸುಮಿತ್ರಾ ಆಗಸ್ಟ್ 22 ರಂದು ನಿಗದಿಯಾಗಿದ್ದ ಚಾಲನಾ ಪರವಾನಗಿ ಪರೀಕ್ಷೆಗೆ ಅಭ್ಯಾಸ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Karnataka Bandh-ಮಂಡ್ಯ, ಮೈಸೂರು ಭಾಗಗಳಲ್ಲಿ ಉತ್ತಮ ಸ್ಪಂದನೆ: ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ-Video

‘Hormuz ಮೇಲೆ ಅಮೆರಿಕಾ ಸಂಪೂರ್ಣ ಹಿಡಿತ’ ಎಂದ Trump; ಹೇಳಿಕೆಯಿಂದ ‘ವಾಸ್ತವ ಬದಲಾಗಲ್ಲ’, ಷರತ್ತುಗಳ ಒಪ್ಪದ ಹೊರತು ಜಲಸಂಧಿ ತೆರೆಯಲ್ಲ; Iran ತಿರುಗೇಟು..!

AI ಗುಳ್ಳೆ ಯಾವಾಗ ಸಿಡಿಯುತ್ತೆ? (ಹಣಕ್ಲಾಸು)

ವಿಧಾನಸೌಧ-ವಿಕಾಸಸೌಧ, ಆರೋಗ್ಯಸೌಧದಲ್ಲೇ ಇಲ್ಲ ಆರೋಗ್ಯ! ಕ್ಯಾಂಟೀನ್‌ಗಳಲ್ಲಿ ಜಿರಳೆ, ಅವಧಿ ಮೀರಿದ ಆಹಾರ ಪತ್ತೆ; ಹೊರಗೆ ಊಟ ಮಾಡುವ ಮುನ್ನ ಇದನ್ನೊಮ್ಮೆ ನೋಡಿ..!

ಸಂಪುಟ ವಿಸ್ತರಣೆ ಬಳಿಕ ಖಾತೆ ಹಂಚಿಕೆ ಪೂರ್ಣ: 19 ಸಚಿವರಿಗೆ ಹೊಣೆಗಾರಿಕೆ, ಕೆಲ ಪ್ರಮುಖ ವಿಚಾರಗಳಿಗೆ ಇನ್ನೂ ಸಿಗದ ಪರಿಹಾರ, ಮುಂದುವರೆದ ಅಸಮಾಧಾನ..!