ಸಂಸತ್ ಮುಂಗಾರು ಅಧಿವೇಶನ 
ದೇಶ

ಗದ್ದಲದ ನಡುವೆಯೇ ಸಂಸತ್ ಮುಂಗಾರು ಅಧಿವೇಶನಕ್ಕೆ ತೆರೆ; Lok Sabha-Rajya Sabha ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಜುಲೈ 20 ರಂದು ಆರಂಭವಾಗಿದ್ದ 19 ದಿನಗಳ ಈ ಅಧಿವೇಶನವು, ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಿನ ಹಗ್ಗಜಗ್ಗಾಟದಿಂದಾಗಿ ಬಹುತೇಕ ಸಂಪೂರ್ಣವಾಗಿ ವ್ಯರ್ಥವಾಯಿತು.

ನವದೆಹಲಿ: ತೀವ್ರ ರಾಜಕೀಯ ಸಂಘರ್ಷ ಮತ್ತು ನಿರಂತರ ಗದ್ದಲಕ್ಕೆ ಸಾಕ್ಷಿಯಾಗಿದ್ದ ಸಂಸತ್ತಿನ ಮುಂಗಾರು ಅಧಿವೇಶನವು ಇಂದು (ಆಗಸ್ಟ್ 13, 2026) ಅವಧಿಗೂ ಮುನ್ನವೇ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.

ಜುಲೈ 20 ರಂದು ಆರಂಭವಾಗಿದ್ದ 19 ದಿನಗಳ ಈ ಅಧಿವೇಶನವು, ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಿನ ಹಗ್ಗಜಗ್ಗಾಟದಿಂದಾಗಿ ಬಹುತೇಕ ಸಂಪೂರ್ಣವಾಗಿ ವ್ಯರ್ಥವಾಯಿತು.

ಅಧಿವೇಶನದ ಆರಂಭದಿಂದಲೂ ವಿರೋಧ ಪಕ್ಷಗಳು ಪ್ರಮುಖವಾಗಿ ಎರಡು ವಿಷಯಗಳ ಕುರಿತು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದವು. ಮೊದಲನೆಯದಾಗಿ, ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ಕುರಿತು ಗೃಹ ಸಚಿವ ಅಮಿತ್ ಶಾ ಅವರು ಅಧಿಕೃತ ಹೇಳಿಕೆ ನೀಡಬೇಕು ಎಂದು ಪಟ್ಟು ಹಿಡಿದಿದ್ದವು.

ಎರಡನೆಯದಾಗಿ, ಅಯೋಧ್ಯೆ ರಾಮ ಮಂದಿರದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಲಾಯಿತು. ಈ ವಿಷಯಗಳ ಕುರಿತು ಗೃಹ ಸಚಿವರು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಚರ್ಚೆಗೆ ಸಿದ್ಧರಿದ್ದರೂ, ಸರ್ಕಾರದ "ಉಪನ್ಯಾಸ" ನಮಗೆ ಬೇಡ, ನೇರ ಉತ್ತರ ಬೇಕು ಎಂದು ವಿರೋಧ ಪಕ್ಷಗಳು ಚರ್ಚೆಯನ್ನು ತಿರಸ್ಕರಿಸಿದವು.

ಇಂದು ಲೋಕಸಭೆಯಲ್ಲಿ 'ವಂದೇ ಮಾತರಂ' ಗೀತೆಯ ನಂತರ ತೀವ್ರ ಗದ್ದಲ ಉಂಟಾದ ಹಿನ್ನೆಲೆಯಲ್ಲಿ, ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ನೇರವಾಗಿ ಅನಿರ್ದಿಷ್ಟಾವಧಿಗೆ ಮುಂದೂಡಿದರು.

ಪ್ರತಿ ಅಧಿವೇಶನದ ಅಂತ್ಯದಲ್ಲಿ ಸದನದ ಕಾರ್ಯದಕ್ಷತೆ ಮತ್ತು ಪ್ರಮುಖಾಂಶಗಳ ಕುರಿತು ಸ್ಪೀಕರ್ ಮಾಡುವ ಸಾಂಪ್ರದಾಯಿಕ ಭಾಷಣವನ್ನು ಗದ್ದಲದ ಕಾರಣದಿಂದಾಗಿ ಈ ಬಾರಿ ಕೈಬಿಡಲಾಯಿತು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸದನದಲ್ಲಿ ಉಪಸ್ಥಿತರಿದ್ದರು.

ಇತ್ತ ಮೇಲ್ಮನೆಯಾದ ರಾಜ್ಯಸಭೆಯಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ವಿರೋಧ ಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಕಾಗದ ಪತ್ರಗಳನ್ನು ಹರಿದು ಗಾಳಿಯಲ್ಲಿ ತೂರಿ ಆಕ್ರೋಶ ವ್ಯಕ್ತಪಡಿಸಿದರು. ಸಂಸದರ ಈ ಅಸಂಸದೀಯ ನಡವಳಿಕೆಯನ್ನು ರಾಜ್ಯಸಭೆಯ ಸಭಾಪತಿಗಳು ತೀವ್ರವಾಗಿ ಖಂಡಿಸಿದರು.

ಈ ಗದ್ದಲ ಮತ್ತು ಅಡಚಣೆಗಳ ನಡುವೆಯೂ ಸರ್ಕಾರವು ಕೆಲವು ಪ್ರಮುಖ ಮಸೂದೆಗಳನ್ನು ಅಂಗೀಕರಿಸುವಲ್ಲಿ ಯಶಸ್ವಿಯಾಯಿತು.

ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ತಿದ್ದುಪಡಿ) ಮಸೂದೆ, 2026 ಮತ್ತು ಕೇರಳ (ಹೆಸರು ಬದಲಾವಣೆ) ಮಸೂದೆ, 2026 ಅನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಇನ್ನುಳಿದಂತೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಎಫ್‌ಸಿಆರ್‌ಎ (FCRA) ತಿದ್ದುಪಡಿ ಮಸೂದೆ, 2026 ಅನ್ನು ಹೆಚ್ಚಿನ ಪರಿಶೀಲನೆಗಾಗಿ ಜಂಟಿ ಸಂಸದೀಯ ಸಮಿತಿಗೆ (JPC) ಒಪ್ಪಿಸಲು ತೀರ್ಮಾನಿಸಲಾಯಿತು.

ಒಟ್ಟಾರೆಯಾಗಿ, 2026ರ ಮುಂಗಾರು ಅಧಿವೇಶನವು ದೇಶದ ಪ್ರಮುಖ ಸಮಸ್ಯೆಗಳ ಬಗ್ಗೆ ಆರೋಗ್ಯಕರ ಚರ್ಚೆ ನಡೆಸುವ ಬದಲು, ಸಂಪೂರ್ಣವಾಗಿ ರಾಜಕೀಯ ಸಂಘರ್ಷಕ್ಕೆ ಬಲಿಯಾಗಿ ಮುಕ್ತಾಯಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Karnataka Bandh-ಮಂಡ್ಯ, ಮೈಸೂರು ಭಾಗಗಳಲ್ಲಿ ಉತ್ತಮ ಸ್ಪಂದನೆ: ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ-Video

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಒಡಿಶಾದಲ್ಲಿ ಭಾರಿ ಮಳೆ, ಇಡೀ ರಾಜ್ಯಕ್ಕೆ 'Red Alert': ಹವಾಮಾನ ಇಲಾಖೆ

ಕೆಂಪುಕೋಟೆ ದಾಳಿ ಹಿಂದೆ ಅಲ್-ಖೈದಾ ಕೈವಾಡ; ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವರದಿಯಲ್ಲಿ ಅಧಿಕೃತ ಉಲ್ಲೇಖ...!

‘ನನ್ನನ್ನು ಅಸ್ಪೃಶ್ಯನಂತೆ ಕಂಡು ಶುದ್ಧೀಕರಣ ಮಾಡಿದರು’: ಬಿಜೆಪಿ ವಿರುದ್ಧ Mallikarjun Kharge ಕಿಡಿ, ನಡ್ಡಾ ಪ್ರತಿಕ್ರಿಯೆ

‘Hormuz ಮೇಲೆ ಅಮೆರಿಕಾ ಸಂಪೂರ್ಣ ಹಿಡಿತ’ ಎಂದ Trump; ಹೇಳಿಕೆಯಿಂದ ‘ವಾಸ್ತವ ಬದಲಾಗಲ್ಲ’, ಷರತ್ತುಗಳ ಒಪ್ಪದ ಹೊರತು ಜಲಸಂಧಿ ತೆರೆಯಲ್ಲ; Iran ತಿರುಗೇಟು..!