ದಿವ್ಯಾಸ್ತ್ರ Mk3 ಮೊದಲ ಪರೀಕ್ಷೆ ಯಶಸ್ವಿ! 
ದೇಶ

ಭಾರತದ ಹೊಸ ಶಕ್ತಿ ಪ್ರದರ್ಶನ: ಜೆಟ್ ಚಾಲಿತ ಸ್ವದೇಶಿ 'ದಿವ್ಯಾಸ್ತ್ರ Mk3' ಮೊದಲ ಪರೀಕ್ಷೆ ಯಶಸ್ವಿ! Video

ವಿದೇಶಿ ಪ್ರಮುಖ ಉಪವ್ಯವಸ್ಥೆ ಇಲ್ಲ. ಭಾರತದಲ್ಲೇ ನಿರ್ಮಾಣ. ಭಾರತದಲ್ಲೇ ಹಾರಾಟ. ದಿವ್ಯಾಸ್ತ್ರ Mk3 ವೇಗ, ಬುದ್ಧಿವಂತಿಕೆ ಮತ್ತು ಯಾವುದೇ ರಾಜಿಯಿಲ್ಲದ ಸಾಮರ್ಥ್ಯ. ಇದು ಕೇವಲ ಹಾರಾಟವಲ್ಲ. ಇದು ಆತ್ಮನಿರ್ಭರ ಭಾರತ..

ಲಖನೌ: ಭಾರತದಲ್ಲೇ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಮುಂದಿನ ಪೀಳಿಗೆಯ ಜೆಟ್ ಚಾಲಿತ ಲೋಯಿಟರಿಂಗ್ ಮ್ಯುನಿಷನ್ ‘ದಿವ್ಯಾಸ್ತ್ರ Mk3’ನ ಮೊದಲ ಹಾರಾಟವನ್ನು Kawa UAV Pvt. Ltd. (HoverIt) ಭಾನುವಾರ ಯಶಸ್ವಿಯಾಗಿ ನಡೆಸಿದೆ.

ಭಾರತದ ಮೊದಲ ಸ್ವದೇಶಿ ಜೆಟ್ ಚಾಲಿತ ಲೋಯಿಟರಿಂಗ್ ಮ್ಯುನಿಷನ್ ‘ದಿವ್ಯಾಸ್ತ್ರ Mk3’ ಇದೀಗ ಹಾರಾಟ ಆರಂಭಿಸಿದ್ದು, DG Propulsion ಅಭಿವೃದ್ಧಿಪಡಿಸಿರುವ ಸ್ವದೇಶಿ ಜೆಟ್ ಎಂಜಿನ್‌ನಿಂದ ಚಾಲಿತವಾಗಿರುವ ದಿವ್ಯಾಸ್ತ್ರ Mk3 ತನ್ನ ಮೊದಲ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

'ಯೋಜನೆ ಆರಂಭದಿಂದ ಮೊದಲ ಹಾರಾಟದವರೆಗೆ ಕೇವಲ ಒಂದು ಕ್ಯಾಲೆಂಡರ್ ವರ್ಷ. ಆಮದು ಮಾಡಲಾದ ಜೆಟ್ ಎಂಜಿನ್ ಇಲ್ಲ. ವಿದೇಶಿ ಪ್ರಮುಖ ಉಪವ್ಯವಸ್ಥೆ ಇಲ್ಲ. ಭಾರತದಲ್ಲೇ ನಿರ್ಮಾಣ. ಭಾರತದಲ್ಲೇ ಹಾರಾಟ. ದಿವ್ಯಾಸ್ತ್ರ Mk3 ವೇಗ, ಬುದ್ಧಿವಂತಿಕೆ ಮತ್ತು ಯಾವುದೇ ರಾಜಿಯಿಲ್ಲದ ಸಾಮರ್ಥ್ಯ. ಇದು ಕೇವಲ ಹಾರಾಟವಲ್ಲ. ಇದು ಆತ್ಮನಿರ್ಭರ ಭಾರತ ಕಾರ್ಯರೂಪಕ್ಕೆ ಬಂದಿರುವುದರ ಸಾಕ್ಷಿ' ಎಂದು HoverIt ತಿಳಿಸಿದೆ.

ಈ ಸಾಧನೆಯ ಮಹತ್ವವನ್ನು ಒತ್ತಿಹೇಳಿದ ಸಂಸ್ಥೆಯ ಸಹ-ಸ್ಥಾಪಕರು, ಯಶಸ್ವಿ ಹಾರಾಟವು ಸ್ವದೇಶಿ ರಕ್ಷಣಾ ಉತ್ಪಾದನಾ ಕ್ಷೇತ್ರದ ಪ್ರಮುಖ ಮೈಲಿಗಲ್ಲಾಗಿದೆ ಎಂದು ಹೇಳಿದ್ದಾರೆ. ಭಾರತ ತನ್ನದೇ ಗಡಿಯೊಳಗೆ ಜೆಟ್ ಚಾಲಿತ ನಿಖರ ದಾಳಿ ವ್ಯವಸ್ಥೆಯನ್ನು ಪರಿಕಲ್ಪನೆ ಮಾಡಿ, ವಿನ್ಯಾಸಗೊಳಿಸಿ, ಎಂಜಿನಿಯರಿಂಗ್ ಮಾಡಿ ಮತ್ತು ಹಾರಾಟ ನಡೆಸಬಲ್ಲದು ಎಂಬುದನ್ನು ಇದು ಸಾಬೀತುಪಡಿಸುತ್ತದೆ ಎಂದು ಅವರು ಹೇಳಿದರು.

ಕೇವಲ ಪರೀಕ್ಷಾರ್ಥ ಹಾರಾಟವಲ್ಲ, ಇದು ನಮ್ಮ ಸಂಕಲ್ಪದ ಘೋಷಣೆ

'ಇದು ಕೇವಲ ಪರೀಕ್ಷಾರ್ಥ ಹಾರಾಟವಲ್ಲ, ಇದು ನಮ್ಮ ಸಂಕಲ್ಪದ ಘೋಷಣೆ. ಭಾರತವು ದೊಡ್ಡ ಪ್ರಮಾಣದಲ್ಲಿ ಮತ್ತು ವೇಗವಾಗಿ, ತನ್ನದೇ ದೇಶದೊಳಗೆ ಜೆಟ್ ಚಾಲಿತ ನಿಖರ ದಾಳಿ ವ್ಯವಸ್ಥೆಯನ್ನು ಪರಿಕಲ್ಪನೆ ಮಾಡಿ, ಎಂಜಿನಿಯರಿಂಗ್ ಮಾಡಿ ಮತ್ತು ಹಾರಾಟ ನಡೆಸುವ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ದಿವ್ಯಾಸ್ತ್ರ Mk3 ಆತ್ಮನಿರ್ಭರ ಭಾರತ ಕಾರ್ಯರೂಪಕ್ಕೆ ಬಂದಿರುವುದರ ಪ್ರತೀಕ” ಎಂದು ಸಂಸ್ಥೆಯ ಸಹ-ಸ್ಥಾಪಕರು ತಿಳಿಸಿದ್ದಾರೆ.

ಇದಕ್ಕೂ ಮುನ್ನ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಆಂಧ್ರಪ್ರದೇಶದ ಕರ್ನೂಲ್ ಸಮೀಪದ DRDO ಪರೀಕ್ಷಾ ಕೇಂದ್ರದಲ್ಲಿ ಮಾನವರಹಿತ ವೈಮಾನಿಕ ವಾಹನದಿಂದ ಉಡಾಯಿಸಬಹುದಾದ ನಿಖರ ಮಾರ್ಗದರ್ಶಿತ ಕ್ಷಿಪಣಿ (ULPGM)-V3ಯ ಅಂತಿಮ ವಿತರಣಾ ಸಂರಚನೆಯ ಅಭಿವೃದ್ಧಿ ಪರೀಕ್ಷೆಗಳನ್ನು ಪೂರ್ಣಗೊಳಿಸಿತ್ತು. ಏರ್-ಟು-ಗ್ರೌಂಡ್ ಮತ್ತು ಏರ್-ಟು-ಏರ್ ಮಾದರಿಗಳಲ್ಲಿ ಈ ಪರೀಕ್ಷೆಗಳನ್ನು ನಡೆಸಲಾಗಿತ್ತು.

ULPGM ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ನಿಯಂತ್ರಿಸಲು ಮತ್ತು ನಿರ್ವಹಿಸಲು ಸಮಗ್ರ ಗ್ರೌಂಡ್ ಕಂಟ್ರೋಲ್ ಸಿಸ್ಟಂ (GCS) ಬಳಸಿಕೊಂಡು ಪರೀಕ್ಷೆಗಳನ್ನು ನಡೆಸಲಾಯಿತು. ಸಿದ್ಧತೆ ಹಾಗೂ ಉಡಾವಣಾ ಕಾರ್ಯಾಚರಣೆಗಳನ್ನು ಸ್ವಯಂಚಾಲಿತಗೊಳಿಸಲು GCSನಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ.

ರಕ್ಷಣಾ ಸಚಿವರ ಅಭಿನಂದನೆ

ಕ್ಷಿಪಣಿಗಳ ಅಭಿವೃದ್ಧಿ ಮತ್ತು ಉತ್ಪಾದನೆಗಾಗಿ DRDO ಎರಡು ಉತ್ಪಾದನಾ ಸಂಸ್ಥೆಗಳಾದ ಹೈದರಾಬಾದ್‌ನ ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಮತ್ತು ಹೈದರಾಬಾದ್‌ನ AdDefence Systems & Technologies Limited ಜೊತೆ ಪಾಲುದಾರಿಕೆ ಹೊಂದಿದೆ. ಪ್ರಸ್ತುತ ಪರೀಕ್ಷೆಗಳಿಗಾಗಿ ಬೆಂಗಳೂರಿನ Newspace Research and Technologies ಅಭಿವೃದ್ಧಿಪಡಿಸಿರುವ UAVಗಳಲ್ಲಿ ಈ ವ್ಯವಸ್ಥೆಯನ್ನು ಸಂಯೋಜಿಸಲಾಗಿದೆ.

ಟ್ಯಾಂಕ್ ವಿರೋಧಿ ಕಾರ್ಯಾಚರಣೆಗಾಗಿ ಏರ್-ಟು-ಗ್ರೌಂಡ್ ಮಾದರಿಯಲ್ಲಿ ಹಾಗೂ ಡ್ರೋನ್, ಹೆಲಿಕಾಪ್ಟರ್ ಮತ್ತು ಇತರ ವೈಮಾನಿಕ ಗುರಿಗಳ ವಿರುದ್ಧ ಏರ್-ಟು-ಏರ್ ಮಾದರಿಯಲ್ಲಿ ULPGM-V3ಯ ಯಶಸ್ವಿ ಅಭಿವೃದ್ಧಿ ಪರೀಕ್ಷೆಗಳನ್ನು ನಡೆಸಿರುವುದಕ್ಕಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ DRDO, ಸಾರ್ವಜನಿಕ ವಲಯದ ಸಂಸ್ಥೆಗಳು, ರಕ್ಷಣಾ ಮತ್ತು ಉತ್ಪಾದನಾ ಪಾಲುದಾರರು ಹಾಗೂ ಉದ್ಯಮ ಕ್ಷೇತ್ರವನ್ನು ಅಭಿನಂದಿಸಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸುವ ನಿಟ್ಟಿನಲ್ಲಿ ಇದು ಮಹತ್ವದ ಕಾರ್ಯತಂತ್ರದ ಮೈಲಿಗಲ್ಲು ಎಂದು ಅವರು ಬಣ್ಣಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಂಜಾಬ್: ತಪ್ಪಿದ ಭಾರಿ ಅನಾಹುತ; ಉಗ್ರ ದಾಳಿ ಸಂಚು ವಿಫಲ, 690 ಗ್ರಾಂ IED ಪೊಲೀಸ್ ವಶಕ್ಕೆ

'Sheikh Hasinaರನ್ನು ಹಸ್ತಾಂತರಿಸಿ'; ಪ್ರಧಾನಿ ತಾರಿಕ್ ರಹಮಾನ್ ಭೇಟಿಗೂ ಮುನ್ನ ಭಾರತಕ್ಕೆ ಬಾಂಗ್ಲಾದೇಶ ಷರತ್ತು!

Cricket: ಆಡಿದ್ದು ಆಸ್ಟ್ರೇಲಿಯಾದಲ್ಲಿ.. ಗೆದ್ದಿದ್ದು ಬಾಂಗ್ಲಾದೇಶ: ಪತನವಾಗಿದ್ದು ಮಾತ್ರ ಪಾಕಿಸ್ತಾನದ ದಾಖಲೆ!

ಆಗಸ್ಟ್ 15ರಂದು ನಡೆದ ಭೀಕರ ಘಟನೆ: ನೌಕಾಪಡೆಯ ನಾವಿಕ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಶವಪತ್ತೆ!

ಕಾಂಗ್ರೆಸ್‌ಗೆ ರಾಷ್ಟ್ರಗೀತೆ ‘ವಂದೇ ಮಾತರಂ’ ಬಗ್ಗೆ ತೀವ್ರ ಅಸಹನೆ, ಅಗೌರವ: Manoj Tiwari