ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ 
ದೇಶ

ದ್ವೇಷ ಭಾಷಣ ಪ್ರಕರಣ: TMC ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಬಂಧನ ವಾರಂಟ್ ಜಾರಿ

ಮಹುವಾ ಮೊಯಿತ್ರಾ ವಿರುದ್ಧ ತಕ್ಷಣವೇ ಬಂಧನ ವಾರಂಟ್ ಜಾರಿಗೊಳಿಸುವಂತೆ ಮತ್ತು ಆಗಸ್ಟ್ 28ರೊಳಗೆ ವರದಿ ಸಲ್ಲಿಸುವಂತೆ ಕೃಷ್ಣನಗರ ನ್ಯಾಯಾಲಯದ 3ನೇ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪೊಲೀಸರಿಗೆ ನಿರ್ದೇಶಿಸಿದ್ದಾರೆ.

ಕಲ್ಯಾಣಿ: ದ್ವೇಷ ಭಾಷಣ ಪ್ರಕರಣದಲ್ಲಿ ವಿಚಾರಣೆ ಹಾಜರಾಗುವಂತೆ ನೀಡಿದ ಆದೇಶವನ್ನು ಪಾಲಿಸದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ನ್ಯಾಯಾಲಯವು ಬುಧವಾರ ಬಂಧನ ವಾರಂಟ್ ಆದೇಶ ಹೊರಡಿಸಿದೆ.

ಮಹುವಾ ಮೊಯಿತ್ರಾ ವಿರುದ್ಧ ತಕ್ಷಣವೇ ಬಂಧನ ವಾರಂಟ್ ಜಾರಿಗೊಳಿಸುವಂತೆ ಮತ್ತು ಆಗಸ್ಟ್ 28ರೊಳಗೆ ವರದಿ ಸಲ್ಲಿಸುವಂತೆ ಕೃಷ್ಣನಗರ ನ್ಯಾಯಾಲಯದ 3ನೇ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪೊಲೀಸರಿಗೆ ನಿರ್ದೇಶಿಸಿದ್ದಾರೆ.

ಮಹಿಳೆಯರನ್ನು ಅವಮಾನಿಸಿದ್ದಾರೆ ಮತ್ತು ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಮೊಯಿತ್ರಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ನ್ಯಾಯಾಲಯವು ಟಿಎಂಸಿ ಸಂಸದೆಗೆ ಸಮನ್ಸ್ ಜಾರಿ ಮಾಡಿತ್ತು.

ಪದೇ ಪದೇ ಸಮನ್ಸ್ ನೀಡಿದ್ದರೂ ಅವರು ವಿಚಾರಣೆಗೆ ಹಾಜರಾಗಲು ವಿಫಲರಾಗಿದ್ದಾರೆ ಎಂದು ಗಮನಿಸಿದ ಕೃಷ್ಣನಗರ ನ್ಯಾಯಾಲಯ, ಮೊಯಿತ್ರಾ ವಿರುದ್ಧ ತಕ್ಷಣವೇ ಬಂಧನ ವಾರಂಟ್ ಹೊರಡಿಸುವಂತೆ ಆದೇಶಿಸಿದೆ.

ಮಹುವಾ ಮೊಯಿತ್ರಾ ಅವರಿಗೆ ಬುಧವಾರವೇ ಕೋರ್ಟ್‌ಗೆ ಹಾಜರಾಗುವಂತೆ ಮಂಗಳವಾರ ಸೂಚನೆ ನೀಡಲಾಗಿತ್ತು. ಆದರೆ ಅವರು ಗೈರುಹಾಜರಾಗಿದ್ದರು. ಸಂಸದೆ ಪರ ವಕೀಲರು, ‘ಕೋರ್ಟ್ ಆವರಣದ ಹೊರಗೆ ತಮ್ಮ ಕಕ್ಷಿದಾರರಿಗೆ ಬೆದರಿಕೆ ಇದೆ, ಹೀಗಾಗಿ ಅವರು ಯಾವುದೇ ಕಾರಣಕ್ಕೂ ಹಾಜರಾಗುವುದಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ಸಂಸದೆಯ ಈ ನಿಲುವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, ನ್ಯಾಯಾಲಯದ ಆದೇಶಗಳನ್ನು ಪಾಲಿಸುವಲ್ಲಿ ಅವರ ಉಡಾಫೆಯ ನಡವಳಿಕೆಯನ್ನು ತೋರಿಸುತ್ತದೆ. ನ್ಯಾಯಾಲಯದ ಆದೇಶ ಉಲ್ಲಂಘಿಸುತ್ತಿರುವುದು ಆರೋಪಿಗೆ ಕಾನೂನಿನ ಮೇಲೆ ಗೌರವವಿಲ್ಲದಿರುವುದನ್ನು ತೋರಿಸುತ್ತದೆ. ಹೀಗಾಗಿ ವಾರಂಟ್ ಹೊರಡಿಸುವುದನ್ನು ಬಿಟ್ಟು ನ್ಯಾಯಾಲಯಕ್ಕೆ ಬೇರೆ ದಾರಿಯಿಲ್ಲ ಎಂದು ಕೋರ್ಟ್ ಖಾರವಾಗಿ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಮಲೇಷ್ಯಾ ಸೋಲಿಸಿ ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಸ್ಟೈಲಿಶ್ ಕಪ್ಪು ಉಡುಪಿನಲ್ಲಿ ಮಿಂಚಿದ ಪಾರ್ವತಿ ತಿರುವೋತ್; ದಂಗಾದ ಅಭಿಮಾನಿಗಳು, Video!

ಬಿಜೆಪಿ ಜಿಲ್ಲಾಧ್ಯಕ್ಷರಿಂದ ನನ್ನ ಮೇಲೆ ಪದೇ ಪದೇ ಅತ್ಯಾಚಾರ: ಉತ್ತರ ಪ್ರದೇಶ ಪಕ್ಷದ ನಾಯಕಿಯ ಗಂಭೀರ ಆರೋಪ

ಭಾರತದಲ್ಲಿ ಕಳೆದ 8 ತಿಂಗಳಲ್ಲಿ 254 ಹಿಂದೂಗಳು ಮುಸ್ಲಿಂ ಜಿಹಾದಿ ಹಿಂಸಾಚಾರಕ್ಕೆ ಬಲಿ; ಎಲ್ಲಿದೆ ನ್ಯಾಯ? VHP

ರೋಡ್‌ಶೋ ವೇಳೆ 'ಸಿಗ್ಮಾ' ಫ್ರೇಮ್ ಎತ್ತಿಹಿಡಿದ ತಮಿಳುನಾಡು CM ವಿಜಯ್; ಮಗನ ಸಿನಿಮಾಗೆ ತಂದೆಯ ಬೆಂಬಲ! ವಿಡಿಯೋ ವೈರಲ್