ಮಹಾತ್ಮಾ ಗಾಂಧಿ 
ದೇಶ

ಮಹಾತ್ಮಾ ಗಾಂಧಿಯವರ ಹಸ್ತಪ್ರತಿ, ದಾಖಲೆಯ 16.2 ಕೋಟಿ ರೂ.ಗೆ ಮಾರಾಟ!

ಹರಾಜಿನಲ್ಲಿ ಭಾರತೀಯ ಐತಿಹಾಸಿಕ ದಾಖಲೆಯೊಂದು ಇಷ್ಟೊಂದು ಮೊತ್ತಕ್ಕೆ ಮಾರಾಟವಾದದ್ದು ವಿಶ್ವ ದಾಖಲೆಯಾಗಿದೆ.

ನವದೆಹಲಿ: ಸತ್ಯ, ಅಹಿಂಸೆ ಮತ್ತು ಸೇವೆ ಮುಂತಾದ ವಿಷಯಗಳ ಕುರಿತು ಮಹಾತ್ಮಾ ಗಾಂಧಿಯವರು ತಮ್ಮ ಆಪ್ತ ಸಹವರ್ತಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಆನಂದ್ ಟಿ. ಹಿಂಗೊರಾನಿ ಅವರಿಗೆ ಬರೆದ 688 ಸಹಿ ಮಾಡಿದ ಬರಹಗಳ ಸಂಗ್ರಹ (ಹಸ್ತಪ್ರತಿ) 'ಸಫ್ರಾನ್-ಆರ್ಟ್' (Saffronart) ಹರಾಜಿನಲ್ಲಿ ದಾಖಲೆಯ 16.20 ಕೋಟಿ ರೂ.ಗೆ ಮಾರಾಟವಾಗಿದೆ. ಹರಾಜಿನಲ್ಲಿ ಭಾರತೀಯ ಐತಿಹಾಸಿಕ ದಾಖಲೆಯೊಂದು ಇಷ್ಟೊಂದು ಮೊತ್ತಕ್ಕೆ ಮಾರಾಟವಾದದ್ದು ವಿಶ್ವ ದಾಖಲೆಯಾಗಿದೆ.

ಹಿಂಗೊರಾನಿ ಅವರ ಪತ್ನಿ ವಿದ್ಯಾ ಅವರ ನಿಧನದ ನಂತರದ ಎರಡು ವರ್ಷಗಳ ಅವಧಿಯಲ್ಲಿ ಬರೆಯಲಾದ ಈ ದೈನಂದಿನ ಕೈಬರಹದ ಸಂದೇಶಗಳು (ಮಾರ್ಗದರ್ಶನ, ಚಿಂತನೆ ಮತ್ತು ಪ್ರೋತ್ಸಾಹವನ್ನು ಒಳಗೊಂಡಿದ್ದವು) ನಂತರ "ಎ ಥಾಟ್ ಫಾರ್ ದಿ ಡೇ" (A Thought for the Day) ಎಂಬ ಶೀರ್ಷಿಕೆಯಡಿ ಪುಸ್ತಕವಾಗಿ ಪ್ರಕಟವಾಯಿತು. ಇವು ಇವರಿಬ್ಬರ ನಡುವಿನ ಪತ್ರವ್ಯವಹಾರದ ಅತ್ಯಂತ ಆಪ್ತವಾದ ದಾಖಲೆಗಳಲ್ಲಿ ಒಂದಾಗಿವೆ.

"ಗಾಂಧಿ: ಫ್ರಮ್ ದಿ ಕಲೆಕ್ಷನ್ ಆಫ್ ಆನಂದ್ ಟಿ. ಹಿಂಗೊರಾನಿ" (Gandhi: From the Collection of Anand T Hingorani) ಎಂಬ ಈ ಹರಾಜು ಪ್ರಕ್ರಿಯೆಯಲ್ಲಿ ಗಾಂಧಿಯವರಿಗೆ ಸಂಬಂಧಿಸಿದ ಪತ್ರಗಳು, ಹಸ್ತಪ್ರತಿಗಳು, ಫೋಟೋಗಳು ಮತ್ತು ವೈಯಕ್ತಿಕ ಸಾದನ, ಸಲಕರಣೆಗಳನ್ನು ಪ್ರದರ್ಶಿಸಲಾಯಿತು.

ಹರಾಜು ಸಂಸ್ಥೆಯ ಪ್ರಕಾರ, ಈ ಹಸ್ತಪ್ರತಿಯು ಸತ್ಯ, ಅಹಿಂಸೆ, ಬ್ರಹ್ಮಚರ್ಯ, ಅಪರಿಗ್ರಹ (ಸಂಗ್ರಹಿಸದಿರುವಿಕೆ), ನಿರ್ಭಯತೆ, ಧಾರ್ಮಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆ, ಪ್ರಾರ್ಥನೆ, ರಾಮನಾಮ, ಸೇವೆ, ಶ್ರಮ, ಹಸಿವು, ಕರ್ತವ್ಯ, ಸ್ವರಾಜ್, ನೈತಿಕ ಜವಾಬ್ದಾರಿ, ಮೌನ, ​​ಆತ್ಮಸಾಕ್ಷಿ, ಅನಾಸಕ್ತಿ, ಆತ್ಮಸಾಕ್ಷಾತ್ಕಾರ ಮತ್ತು ದೇವರ ಅನ್ವೇಷಣೆಯಂತಹ ವಿಷಯಗಳನ್ನು ಒಳಗೊಂಡಿದೆ.

ಪ್ರಮುಖ ರಾಜಕೀಯ ಘಟನೆಗಳನ್ನು ದಾಖಲಿಸುವುದರ ಜೊತೆಗೆ, ಈ ಸಂಗ್ರಹವು ಗಾಂಧಿಯವರ ಜೀವನದ ಆಳವಾದ ವೈಯಕ್ತಿಕ ಆಯಾಮಗಳನ್ನೂ ಅನಾವರಣಗೊಳಿಸುತ್ತದೆ. ಇದು ಭಾರತದ ಸ್ವಾತಂತ್ರ್ಯ ಚಳುವಳಿಯ ನಾಯಕನಾಗಿರುವ ಗಾಂಧೀಜಿ ಹಾಗೂ ತಮ್ಮ ಆಪ್ತರಿಗೆ ಸಲಹೆ, ಸಾಂತ್ವನ, ಶಿಸ್ತು ಮತ್ತು ವಾತ್ಸಲ್ಯವನ್ನು ನೀಡಿದ ಒಬ್ಬ ಖಾಸಗಿ ವ್ಯಕ್ತಿಯಾಗಿರುವ ಗಾಂಧಿಯವರನ್ನೂ ಚಿತ್ರಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಪಕ್ಷಗಳು ರಾಜೀನಾಮೆಗೆ ಆಗ್ರಹಿಸುತ್ತಿರುವ ಮಧ್ಯೆ ಸಚಿವ ಬಿ. ನಾಗೇಂದ್ರಗೆ ಬಿಗ್ ರಿಲೀಫ್: ಹೈಕೋರ್ಟ್ ಮಹತ್ವದ ಆದೇಶ

1984ರ ಸಿಖ್ ವಿರೋಧಿ ದಂಗೆ ಪ್ರಕರಣ: ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಜೈಲಿನಲ್ಲೇ ನಿಧನ!

ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಶಾ ಎದುರೇ ಗುಡುಗಿದ ಡಿಕೆಶಿ: 'ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣ ರಾಜ್ಯಗಳಿಗೆ ಶಿಕ್ಷೆ ಬೇಡ'; ಲೋಕಸಭೆ ಸ್ಥಾನ 543ಕ್ಕೇ ಸೀಮಿತಗೊಳಿಸುವಂತೆ ಆಗ್ರಹ!

ಅಂತ್ಯದ ಹಾದಿಯಲ್ಲಿ 'ಫ್ಯಾಸಿಸ್ಟ್ ಆಳ್ವಿಕೆ': ಮೊದಲ ಬಾರಿಗೆ ಮೋದಿ ಅಹಂಕಾರಕ್ಕೆ ಪೆಟ್ಟು, ಯುವ ಜನತೆ ರಾಜಕೀಯ ಅರಿವು ಬೆಳೆಸಿಕೊಳ್ಳಿ- ನಟ ಪ್ರಕಾಶ್ ರಾಜ್ ಕರೆ!

1 ಲಕ್ಷ ವೀಕ್ಷಣೆಯ ವೀಡಿಯೊಗೆ 1 ಲಕ್ಷ ರೂ: Social Media Influencers ಗಳಿಗೆ ಸರ್ಕಾರದ ಬಂಪರ್ ಯೋಜನೆ!