ದೇಶ

ಮುಂಬೈ: 22 ಅಡಿ ಎತ್ತರದ ಗಣೇಶನ ಪ್ರತಿಮೆ ಬಿದ್ದು ಇಬ್ಬರು ಸಾವು, ಐವರಿಗೆ ಗಾಯ! Video

'ಭುಲೇಶ್ವರಚಾ ರಾಜ'ನ ಆಗಮನ ಸಮಾರಂಭದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಗ್ರಹದ ಚೌಕಟ್ಟಿನಲ್ಲಿದ್ದ ನಟ್ ಮತ್ತು ಬೋಲ್ಟ್‌ಗಳು ಸಡಿಲಗೊಂಡಿದ್ದರಿಂದ ಪ್ರತಿಮೆ ಕೆಳಗೆ ಬಿದ್ದಿದೆ.

ಮುಂಬೈ: 22 ಅಡಿ ಎತ್ತರದ ಗಣೇಶನ ಪ್ರತಿಮೆ ಬಿದ್ದು, ಇಬ್ಬರು ಮೃತಪಟ್ಟಿದ್ದು, ಐವರು ಗಾಯಗೊಂಡಿರುವ ಘಟನೆ ದಕ್ಷಿಣ ಮುಂಬೈನಲ್ಲಿ ನಿನ್ನೆ ರಾತ್ರಿ ನಡೆದಿದೆ. ಭುಲೇಶ್ವರದ ಬಲರಾಮ್ ಮರ್ಚೆಂಟ್ ರಸ್ತೆಯಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

'ಭುಲೇಶ್ವರಚಾ ರಾಜ'ನ ಆಗಮನ ಸಮಾರಂಭದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಗ್ರಹದ ಚೌಕಟ್ಟಿನಲ್ಲಿದ್ದ ನಟ್ ಮತ್ತು ಬೋಲ್ಟ್‌ಗಳು ಸಡಿಲಗೊಂಡಿದ್ದರಿಂದ ಪ್ರತಿಮೆ ಕೆಳಗೆ ಬಿದ್ದಿದೆ.

ಘಟನಾ ಸ್ಥಳಕ್ಕೆ ಮುಂಬೈ ಅಗ್ನಿಶಾಮಕ ದಳ, ಮುಂಬೈ ಪೊಲೀಸರು, ಸಂಚಾರ ಪೊಲೀಸರು, 108 ಆಂಬ್ಯುಲೆನ್ಸ್ ಸೇವೆ ಮತ್ತು ನಾಗರಿಕ ವಾರ್ಡ್ ಸಿಬ್ಬಂದಿಯನ್ನು ತಕ್ಷಣವೇ ನಿಯೋಜಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಧಾವಿಸಿ ಕರೆದೊಯ್ಯಲಾಯಿತು, ಅಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಮೃತಪಟ್ಟವರನ್ನು ಸಂಕೇತ್ ನೆವ್ಶೆ (33) ಮತ್ತು ಬ್ರಿಜೇಶ್ ಹೇಮಂತ್ ಜೋಶಿ (30) ಎಂದು ಗುರುತಿಸಲಾಗಿದೆ.

ಗಾಯಗೊಂಡ ಇತರ ಐವರನ್ನು ಜೆಜೆ (JJ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗುರುತಿಸಲಾಗಿದೆ. ಗಾಯಗೊಂಡವರೆಲ್ಲರೂ ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈ ಮತ್ತು ಮಹಾರಾಷ್ಟ್ರದ ಇತರ ಭಾಗಗಳಲ್ಲಿ'ಗಣೇಶೋತ್ಸವ' ಅತಿದೊಡ್ಡ ಮತ್ತು ವ್ಯಾಪಕವಾಗಿ ಆಚರಿಸಲ್ಪಡುವ ಹಬ್ಬಗಳಲ್ಲಿ ಒಂದಾಗಿದೆ.

ಆಚರಣೆಯ ವೇಳೆ ಜನರು ಗಣೇಶನ ಪ್ರತಿಮೆಯನ್ನು ಮನೆಗೆ ಅಥವಾ ಪಂಡಾಲ್‌ಗಳಿಗೆ ತಂದು ಪೂಜೆಸುತ್ತಾರೆ. ಗಣೇಶನ ತರುವ ವೇಳೆವೂ ಪೂಜೆ ಸಲ್ಲಿಸಲಾಗಿತ್ತು. ಮುಂಬೈನ ಅತಿ ಎತ್ತರದ ಗಣೇಶನ ಪ್ರತಿಮೆಯಾಗಿರುವ 'ಮುಂಬೈಚಾ ರಾಜ', ಇದು ಸುಮಾರು 45 ರಿಂದ 47 ಅಡಿ ಎತ್ತರವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ