ಧೀರೇಂದ್ರ ಪ್ರತಾಪ್ ಸಿಂಗ್ 
ದೇಶ

ಉತ್ತರಪ್ರದೇಶ: ಬಿಜೆಪಿಯ ಹಿರಿಯ ನಾಯಕರೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಯ ಬರ್ಬರ ಹತ್ಯೆ!

ಬಿಜೆಪಿಯ ಹಿರಿಯ ನಾಯಕರೊಂದಿಗೆ ಸಂಪರ್ಕ ಹೊಂದಿದ್ದ ಧೀರೇಂದ್ರ ಪ್ರತಾಪ್ ಸಿಂಗ್ ಶನಿವಾರದಿಂದ ಲಕ್ನೋದ ಸುಶಾಂತ್ ಗಾಲ್ಫ್ ಸಿಟಿಯಿಂದ ಕಾಣೆಯಾಗಿದ್ದು ಇದೀಗ ಅವರ ಮೃತದೇಹ ಪತ್ತೆಯಾಗಿದೆ.

ಲಖನೌ: ಬಿಜೆಪಿಯ ಹಿರಿಯ ನಾಯಕರೊಂದಿಗೆ ಸಂಪರ್ಕ ಹೊಂದಿದ್ದ ಧೀರೇಂದ್ರ ಪ್ರತಾಪ್ ಸಿಂಗ್ ಶನಿವಾರದಿಂದ ಲಕ್ನೋದ ಸುಶಾಂತ್ ಗಾಲ್ಫ್ ಸಿಟಿಯಿಂದ ಕಾಣೆಯಾಗಿದ್ದು ಇದೀಗ ಅವರ ಮೃತದೇಹ ಪತ್ತೆಯಾಗಿದೆ. ಸುಮಾರು 50 ಕೋಟಿ ಮೌಲ್ಯದ ಜಮೀನಿನ ವಿವಾದದಲ್ಲಿ ಭಾಗಿಯಾಗಿದ್ದು ಪ್ರಕರಣದ ಎಲ್ಲಾ ಅಂಶಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಿಜೆಪಿಯ ಹಿರಿಯ ನಾಯಕರೊಂದಿಗೆ ಸಂಪರ್ಕ ಹೊಂದಿದ್ದ ಧೀರೇಂದ್ರ ಪ್ರತಾಪ್ ಅವರನ್ನು ಅವರ ಫಾರ್ಚೂನರ್ ಒಳಗೆ ಗುಂಡು ಹಾರಿಸಿ, ಅವರ ದೇಹವನ್ನು ಕಾಲುವೆಗೆ ಎಸೆಯಲಾಗಿದೆ. ಭೂ ವಿವಾದದಿಂದಾಗಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅವರ ಚಾಲಕ ಮತ್ತು ಇತರ ಐದು ಜನರನ್ನು ಬಂಧಿಸಿದ್ದಾರೆ. ಪೊಲೀಸರು ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ತಂಡಗಳು ಅವರನ್ನು ವಿಚಾರಣೆ ನಡೆಸುತ್ತಿವೆ.

ಉನ್ನಾವೋದ ರಾಜೇಪುರದ ಮಹಾರಾಣಾ ಪ್ರತಾಪ್ ಚಾರಿಟೇಬಲ್ ಫೌಂಡೇಶನ್‌ನ ಅಧ್ಯಕ್ಷ ಧೀರೇಂದ್ರ ಪ್ರತಾಪ್ ಸಿಂಗ್, ಮೂಲತಃ ಉನ್ನಾವೋದ ರಾಜೇಪುರ ಬಂಗಾರಮೌನವರು ಮತ್ತು ಪ್ರಸ್ತುತ ಪಿಜಿಐನ ಸೆಕ್ಟರ್ 11ರಲ್ಲಿ ವಾಸಿಸುತ್ತಿದ್ದಾರೆ. ಅವರನ್ನು ಅವರ ಚಾಲಕ ಮತ್ತು ಅವರ ಸಹಚರರು ಗುಂಡಿಕ್ಕಿ ಕೊಂದಿದ್ದಾರೆ. ಕೊಲೆಯ ನಂತರ, ಅವರ ಶವವನ್ನು ದುಬಗ್ಗಾದ ಕಿಸಾನ್ ಪಥ್ ಬಳಿಯ ಕಾಲುವೆಗೆ ಎಸೆಯಲಾಯಿತು. ಪೊಲೀಸರು ಚಾಲಕ ರವಿ ತಿವಾರಿ, ಅವರ ಸಹಚರ ದಿಲೀಪ್ ಮತ್ತು ಇತರ ನಾಲ್ವರನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಪ್ರವಾಹ: ಸಾವಿನ ಸಂಖ್ಯೆ 768ಕ್ಕೇರಿಕೆ, 2,500ಕ್ಕೂ ಹೆಚ್ಚು ಮಂದಿ ನಾಪತ್ತೆ, ಸುರಂಗದೊಳಗೆ 100ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ!

‘ಮತ್ತೆ ಕಟ್ಟುತ್ತೇವೆ’! ನೇಪಾಳ ಪ್ರವಾಹದ ಬಳಿಕ ಅವಶೇಷ ನಡುವೆ ಬದುಕು ಕಟ್ಟಿಕೊಳ್ಳಲು ಪರದಾಟ, ಆಹಾರ, ನೀರು, ಔಷಧಿಗಾಗಿ ಸಂತ್ರಸ್ಥರ ಸಂಕಷ್ಟ

Nepal floods: ಪ್ರವಾಹ ಬಂದು 5 ದಿನವಾದರೂ ಸುಳಿವಿಲ್ಲ; ನೇಪಾಳದಲ್ಲಿ ನಾಪತ್ತೆಯಾದ ಉತ್ತರ ಪ್ರದೇಶದ 4 ಕಾರ್ಮಿಕರಿಗಾಗಿ ತೀವ್ರ ಹುಡುಕಾಟ

ಬೆಂಗಳೂರಿನಲ್ಲಿ ಲಿವಿಂಗ್ ಟುಗೆದರ್: 7ನೇ ಮಹಡಿಯಿಂದ ಜಿಗಿದ ಟೆಕ್ಕಿಗಳು; ಯುವತಿ ಸಾವು, ಯುವಕನ ಸ್ಥಿತಿ ಗಂಭೀರ

ಪ್ರವಾಹದ ಬಳಿಕ ನೇಪಾಳದಲ್ಲಿ ಭಾರೀ ಮಳೆ; ಉತ್ತರ ಪ್ರದೇಶದಲ್ಲಿ ನೆರೆ ಭೀತಿ, ನಾರಾಯಣಿ-ಗಂಡಕ್ ನೀರಿನ ಮಟ್ಟ ಏರಿಕೆ!