ಸಂಗ್ರಹ ಚಿತ್ರ 
ದೇಶ

2026-27ನೇ ಸಾಲಿನ ಕೇಂದ್ರ ಬಜೆಟ್: ಸಚಿವ ಸಂಪುಟ ಸಭೆ ಮುಕ್ತಾಯ, ಬಜೆಟ್ ಪ್ರಸ್ತಾವಕ್ಕೆ ಅನುಮೋದನೆ

ಈ ಬಾರಿ ಮಂಡನೆ ಆಗುತ್ತಿರುವುದು ಮೋದಿ ಸರ್ಕಾರದ ಒಟ್ಟಾರೆ 15ನೇ ಬಜೆಟ್‌, ಮೋದಿ ಅವರ ಮೂರನೇ ಅವಧಿಯ ಎರಡನೇ ಪೂರ್ಣಾವಧಿ ಬಜೆಟ್‌ ಹಾಗೂ ನಿರ್ಮಲಾ ಸೀತಾರಾಮನ್ ಅವರು ಸತತವಾಗಿ ಮಂಡಿಸುತ್ತಿರುವ ಒಂಬತ್ತನೇ ಬಜೆಟ್‌ ಆಗಿದೆ.

ನವದೆಹಲಿ: ಕೇಂದ್ರ ಸಚಿವ ಸಂಪುಟ ಸಭೆ ಮುಕ್ತಾಯಗೊಂಡಿದ್ದು, 2026-27ನೇ ಸಾಲಿನ ಕೇಂದ್ರ ಬಜೆಟ್ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ದೊರೆತಿದೆ.

ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಮುಕ್ತಾಯವಾಗಿದ್ದು. ಕೇಂದ್ರ ಬಜೆಟ್ ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಗೆ ಪಡೆದಿದ್ದಾರೆ. ಇನ್ನು ಕೆಲವೇ ಕ್ಷಣಗಳಲ್ಲಿ ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ.

ಈ ಬಾರಿ ಮಂಡನೆ ಆಗುತ್ತಿರುವುದು ಮೋದಿ ಸರ್ಕಾರದ ಒಟ್ಟಾರೆ 15ನೇ ಬಜೆಟ್‌, ಮೋದಿ ಅವರ ಮೂರನೇ ಅವಧಿಯ ಎರಡನೇ ಪೂರ್ಣಾವಧಿ ಬಜೆಟ್‌ ಹಾಗೂ ನಿರ್ಮಲಾ ಸೀತಾರಾಮನ್ ಅವರು ಸತತವಾಗಿ ಮಂಡಿಸುತ್ತಿರುವ ಒಂಬತ್ತನೇ ಬಜೆಟ್‌ ಆಗಿದ್ದು, ಸಂಸತ್ತಿನಲ್ಲಿ ಇಂದು (ಭಾನುವಾರ) ಬೆಳಿಗ್ಗೆ 11ಕ್ಕೆ ಮಂಡನೆ ಆರಂಭವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Union Budget 2026 Live updates | ಕೇಂದ್ರ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್; ಏನನ್ನು ನಿರೀಕ್ಷಿಸಬಹುದು?

Gold Rate: ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ..!

ಕೇಂದ್ರ ಬಜೆಟ್ 2026; ಕೆನ್ನೇರಳೆ ಬಣ್ಣದ ಸೀರೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್; ಏನಿದರ ವಿಶೇಷತೆ..?

Hate Speech Bill: ಕಾಯ್ದೆ ಹೆಸರಿನಲ್ಲಿ ನಾಗರಿಕರ ಮೂಲಭೂತ ಹಕ್ಕುಗಳ ಹರಣ ಸರಿಯಲ್ಲ; ಅಂಕಿತಕ್ಕೆ ರಾಜ್ಯಪಾಲ ನಕಾರ, ಮಸೂದೆ ರಾಷ್ಟ್ರಪತಿ ಅಂಗಳಕ್ಕೆ..!

ಈ ಬಾರಿ ಬಜೆಟ್ ನಲ್ಲಿ ನಮಗೆ ನ್ಯಾಯಯುತ ಪಾಲು ಬೇಕೇ ಬೇಕು: ಕಾಂಗ್ರೆಸ್ ಆಗ್ರಹ

SCROLL FOR NEXT