ಸಂಗ್ರಹ ಚಿತ್ರ 
ದೇಶ

16ನೇ ಹಣಕಾಸು ಆಯೋಗಕ್ಕೆ ಒಪ್ಪಿಗೆ: ರಾಜ್ಯಗಳಿಗೆ ಬರೋಬ್ಬರಿ 1.4 ಲಕ್ಷ ಕೋಟಿ ರೂ. ಅನುದಾನ ಘೋಷಣೆ

ಇತ್ತೀಚೆಗಷ್ಟೇ 16ನೇ ಹಣಕಾಸು ಆಯೋಗವು ತನ್ನ ಸಮಗ್ರ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿತ್ತು. ಆಯೋಗವು ನೀಡಿದ್ದ ಸಲಹೆ ಮತ್ತು ಶಿಫಾರಸುಗಳನ್ನು ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಅವುಗಳನ್ನು ಅಧಿಕೃತವಾಗಿ ಅಂಗೀಕರಿಸಿದೆ.

ನವದೆಹಲಿ: 16ನೇ ಹಣಕಾಸು ಆಯೋಗಕ್ಕೆ ಒಪ್ಪಿಗೆ ನೀಡಿರುವ ಕೇಂದ್ರ ಸರ್ಕಾರ, 2026–27ನೇ ಹಣಕಾಸು ವರ್ಷಕ್ಕೆ ರಾಜ್ಯಗಳಿಗೆ 1.4 ಲಕ್ಷ ರೂ.ಕೋಟಿ ಅನುದಾನ ನೀಡುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ರಾಜ್ಯಗಳಿಗೆ ಕೇಂದ್ರದ ಹಣಕಾಸು ಬೆಂಬಲ ಮುಂದುವರಿದಿರುವುದನ್ನು ಸ್ಪಷ್ಟಪಡಿಸಿದೆ.

ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಹಣಕಾಸು ಆಯೋಗದ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡಿದ್ದು, ರಾಜ್ಯಗಳಿಗೆ ಒಟ್ಟು 1.4 ಲಕ್ಷ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ 16ನೇ ಹಣಕಾಸು ಆಯೋಗವು ತನ್ನ ಸಮಗ್ರ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿತ್ತು. ಆಯೋಗವು ನೀಡಿದ್ದ ಸಲಹೆ ಮತ್ತು ಶಿಫಾರಸುಗಳನ್ನು ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಅವುಗಳನ್ನು ಅಧಿಕೃತವಾಗಿ ಅಂಗೀಕರಿಸಿದೆ. ಇದರ ಅನ್ವಯ, ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ನೆರವು ಸಿಗಲಿದೆ.

ಸಚಿವರ ಘೋಷಣೆಯಂತೆ ಈ 1.4 ಲಕ್ಷ ಕೋಟಿ ರೂಪಾಯಿಗಳ ಅನುದಾನವನ್ನು 2026-27ನೇ ಆರ್ಥಿಕ ವರ್ಷದಲ್ಲಿ ರಾಜ್ಯಗಳಿಗೆ ಹಸ್ತಾಂತರವಾಲಗಿದೆ. ಇದು ರಾಜ್ಯ ಸರ್ಕಾರಗಳು ತಮ್ಮ ಬಜೆಟ್ ಯೋಜನೆಗಳನ್ನು ರೂಪಿಸಲು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ದೊಡ್ಡ ಶಕ್ತಿ ತುಂಬಲಿದೆ.

ಈ ಬೃಹತ್ ಅನುದಾನವನ್ನು ಪ್ರಮುಖವಾಗಿ ಎರಡು ಕ್ಷೇತ್ರಗಳಿಗೆ ವಿನಿಯೋಗಿಸಲು ಸೂಚಿಸಲಾಗಿದೆ. ಹಳ್ಳಿಗಳಲ್ಲಿ ರಸ್ತೆ, ಕುಡಿಯುವ ನೀರು, ನೈರ್ಮಲ್ಯ ಮತ್ತು ಸ್ಥಳೀಯ ಪಂಚಾಯತ್‌ಗಳ ಬಲವರ್ಧನೆಗೆ ಹಾಗೂ ನಗರ ಪ್ರದೇಶಗಳಲ್ಲಿ ಮೂಲಸೌಕರ್ಯ ಮೇಲ್ದರ್ಜೆಗೆ ಏರಿಸುವುದು, ಸ್ಮಾರ್ಟ್ ಸಿಟಿ ಯೋಜನೆಗಳು ಮತ್ತು ಸಾರಿಗೆ ವ್ಯವಸ್ಥೆಯ ಸುಧಾರಣೆ ಬಳಸಲು ಕೇಂದ್ರ ಸರ್ಕಾರ ಸೂಚಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Union Budget 2026 Live updates | ಆಯವ್ಯಯ ಮಂಡನೆ ಆರಂಭ; 'ಯುವಶಕ್ತಿ ಚಾಲಿತ ಬಜೆಟ್ ಮೂರು ಕರ್ತವ್ಯಗಳಿಂದ ಚಾಲನೆ'

Union Budget 2026: ಸರ್ಕಾರದ ಮೂರು ಕರ್ತವ್ಯಗಳನ್ನು ಪಟ್ಟಿ ಮಾಡಿದ ನಿರ್ಮಲಾ

Union Budget 2026: ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮೇಲಿನ ವೆಚ್ಚ 40,000 ಕೋಟಿ ರೂ.ಗೆ ಹೆಚ್ಚಳ

ಕೇಂದ್ರ ಬಜೆಟ್ 2026; ಕೆನ್ನೇರಳೆ ಬಣ್ಣದ ಸೀರೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್; ಏನಿದರ ವಿಶೇಷತೆ..?

GST ಆದಾಯ ಶೇ. 6.2 ರಷ್ಟು ಹೆಚ್ಚಳ; ಜನವರಿಯಲ್ಲಿ 1.93 ಲಕ್ಷ ಕೋಟಿ ರೂ. ಸಂಗ್ರಹ

SCROLL FOR NEXT